R. K. Asha Pramod
ಸುಮಬಾಲೆ
ಸುಮಬಾಲೆ
Publisher -
- Free Shipping Above ₹350
- Cash on Delivery (COD) Available*
Pages - 220
Type - Paperback
Couldn't load pickup availability
'ಸುಮಬಾಲೆ' ಶ್ರೀಮತಿ ಆರ್.ಕೆ. ಆಶಾ ಪ್ರಮೋದ್ರವರ ಚೊಚ್ಚಲ ಕಾದಂಬರಿಗೆ ಯಾರ ಮುನ್ನುಡಿಯ ಅವಶ್ಯಕತೆಯೂ ಇಲ್ಲವೆಂದು ನಾನು ಭಾವಿಸುತ್ತೇನೆ. ಕಾರಣ ತಮ್ಮ ಮೊದಲ ಪ್ರಯತ್ನದಲ್ಲಿಯೇ ಅವರು ಉತ್ತಮ ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಕಾದಂಬರಿಯು ಮೊದಲ ಪುಟದಿಂದ ಕೊನೆಯ ಪುಟದವರೆಗೂ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಇದರಲ್ಲಿ ಲೇಖಕಿ ನಿಜವಾಗಿ ಗೆಲವನ್ನು ಸಾಧಿಸಿದ್ದಾರೆ. ಅನಕೃ, ತರಾಸು, ಕಾರಂತ, ಕಟ್ಟಿಮನಿ, ಚದುರಂಗ, ಅನಂತಮೂರ್ತಿ, ಎಂ.ಕೆ. ಇಂದಿರಾ, ವಾಣಿ, ತ್ರಿವೇಣಿ, ನೀಳಾದೇವಿ, ಅಶ್ವಿನಿ, ಸಾಯಿಸುತೆ ಮುಂತಾದ ಕಾದಂಬರಿಕಾರರ ಸಾಲಿನಲ್ಲಿ ಶ್ರೀಮತಿ ಆಶಾ ಪ್ರಮೋದ್ರವರೂ ನಿಲ್ಲುತ್ತಾರೆ. ಅವರು ತಮ್ಮ ಕಾದಂಬರಿಗಳನ್ನು ಇದೇ ರೀತಿ ಬರೆದು ಕನ್ನಡ ಓದುಗರಿಗೆ ನಿರಂತರವಾಗಿ ರಸದೌತಣ ನೀಡುತ್ತಿರಲಿ ಎಂದು ಮನದುಂಬಿ ಹಾರೈಸುತ್ತೇನೆ.
ಹನ್ನೆರಡು ಅಧ್ಯಾಯಗಳಲ್ಲಿ ಕಾದಂಬರಿಯು ಪದರ ಪದರವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರತಿಯೊಂದು ಪದರವೂ ರಸಿಕ ಸಹೃದಯಿ ಓದುಗರ ಹೃದಯಗಳನ್ನು ಮೃದುವಾಗಿ ಸ್ಪರ್ಶಿಸಿ, ನೇವರಿಸಿ ಹಿತವಾಗಿ ಅಪ್ಪಿ, ತವಕ ತಲ್ಲಣಗಳಲ್ಲಿ ಮುಳುಗಿಸಿ, ಪ್ರೀತಿ ಪ್ರಣಯಗಳಲ್ಲಿ ರೋಮಾಂಚನ ಉಂಟುಮಾಡಿ, ಆಟೋಟ ಸ್ಪರ್ಧೆಗಳ ಸೋಲು-ಗೆಲವುಗಳಲ್ಲಿ ಮುನ್ನುಗ್ಗಿಸಿ, ಮಾತು-ಮೌನಗಳಲ್ಲಿ ಭಾವನೆಗಳನ್ನು ಅರಳಿಸಿ ಮುಂದುವರೆಯುತ್ತದೆ. ಶೃಂಗಾರ, ಹಾಸ್ಯ, ಶೋಕ, ಕರುಣ, ಅದ್ಭುತ, ಶಾಂತ ರಸಗಳು ಕೃತಿಯಲ್ಲಿ ಮೇಲೈಸಿದ್ದು ಪ್ರಸಂಗಾನುಸಾರ ನಮ್ಮ ಹೃನ್ಮನಗಳನ್ನು ತಟ್ಟುತ್ತವೆ.
ಕಾದಂಬರಿಯ ಲೇಖಕಿ ಆಶಾರವರು ಸೌರಭ್-ಕಮಲಿ, ಮನೋಜ್-ರೇಣು, ವಿಜಿ-ವೆಂಕಿಯರ ಪ್ರಣಯ ಸನ್ನಿವೇಶಗಳನ್ನು ಅಶ್ಲೀಲತೆಯ ಸೋಂಕಿಲ್ಲದೆ ಅದ್ಭುತವಾಗಿ ಸಂಯಮದಿಂದ ನಿರೂಪಿಸಿದ್ದಾರೆ. ತಮ್ಮ ಪಾತ್ರಗಳ ಸಂಭಾಷಣೆ ಮೂಲಕ ಸಮಾಜದ ಓರೆಕೋರೆಗಳನ್ನು, ನೋವು-ನಲಿವುಗಳನ್ನು, ಸಂತೋಷ-ನಿರಾಸೆಗಳನ್ನು ಬುದ್ದ, ಬಸವಣ್ಣ, ಅಕ್ಕಮಹಾದೇವಿ ಇವರ ವಿಚಾರಗಳನ್ನು ಸಂದರ್ಭೋಚಿತವಾಗಿ ಅಳವಡಿಸಿ ಬಹಳ ಅಚ್ಚುಕಟ್ಟಾಗಿ ಎಲ್ಲರೂ ಒಪ್ಪುವಂತೆ ನಿರ್ವಹಿಸಿದ್ದಾರೆ.
ಕೆಲವು ಸಣ್ಣಪುಟ್ಟ ನ್ಯೂನತೆಗಳಿದ್ದರೂ ಗಮನಕ್ಕೆ ಬಾರದಷ್ಟು ಕಾದಂಬರಿ ಸೊಗಸಾಗಿ ಚಿತ್ರಿತವಾಗಿದೆ. ಸಮರ್ಥ ಚಿತ್ರ ನಿರ್ದೇಶಕರು ಆಸಕ್ತಿ ವಹಿಸಿದರೆ ಈ ಕಾದಂಬರಿಯನ್ನು ಚಲನಚಿತ್ರವಾಗಿಸಬಹುದು.
-ಮಾ.ವೆಂ. ಶ್ರೀನಾಥ, ಹಿರಿಯ ಲೇಖಕರುಸು
Share

Naveen.
ಸುಮಬಾಲೆ
ಗೌರವಯುತ R K ಆಶಾ ಪ್ರಮೋದ್ ಮೇಡಂ ರವರಿಗೆ ನಮಸ್ಕರಿಸುತ್ತಾ. ಮೇಡಂ ರವರ ಚೊಚ್ಚಲ ಕಾದಂಬರಿ ಸುಮಬಾಲೆಯನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿರುವ ನಿಮಗೆ ಅಭಿನಂದನೆಗಳು ಮೇಡಂ. ಈ ಕಾದಂಬರಿಯನ್ನು ಓದಿದ ನನಗೆ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಕುತೂಹಲ ದಿಂದಲೇ ಓದಿರುವೆ.12 ಪದರಗಳಾಗಿ ಎಳೆದಿರುವ ಸುಮಬಾಲೆ ಓದುವವರಿಗೆ ರಸದೂತಣ. ಮೇಡಂ ರವರ ಭಾವನೆಯಂತೆ ಸಮಾಜಕ್ಕೆ ತಮ್ಮಿಂದ ಏನಾದರೂ ಕೊಡುಗೆಯನ್ನು ನೀಡಬೇಕು ಎಂಬುದು ಎದ್ದು ಕಾಣುತ್ತದೆ, ಪ್ರತಿಯೊಂದು ಸಾಲುಗಳು ಮನಸ್ಸಿಗೆ ಮುಟ್ಟು ವಾಗಿ ರಚಿಸಿದ್ದಾರೆ. ಕಮಲಿ ಹೆಣ್ಣುಮಗು ತನ್ನ ಜೀವನ ಸಾಧನೆ ದಾರಿಯನ್ನು ಹೇಗೆ ಮುಟ್ಟಿದಳು ಎಂಬುದು ಕುತೂಹಲಕಾರಿ ಹಾಗೆ ತನ್ನ ಸಾಧನೆಗೆ ಸುತ್ತ ಮುತ್ತಲಿನವರು ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ,
ಕಮಲಿಯ ಒಳ್ಳೆಯ ಸಂಸ್ಕಾರಕ್ಕೆ ಅವರ ತಾಯಿಯೇ ಮುಖ್ಯ ಕಾರಣ ಕಮಲಿಗೆ ಸಿಕ್ಕ ಗೆಳತಿ ಶುಶಿ ಹಾಡಿಯಲ್ಲಿರುವ ಬೀರ ವೆಂಕಟ ಮಣಿ ಅಣ್ಣಂದಿರು ಅಕ್ಕನ ಸ್ಥಾನದಲ್ಲಿ ರೇಣುಕಾ ಗುರುಗಳ ಸ್ಥಾನದಲ್ಲಿ ಮನೋಜ್ ಕಮಲಿ ಪ್ರೀತಿಸಿದ ಹುಡುಗ ಮನೋಜ್ ಕಮಲಿ ಗೆ ಜೀವನ ಪಾಠ ತಿಳಿಸಿದ ಹಾಡಿಯ ಹಿರಿಯ ಜೀವ ಸಂಪಜ್ಜ ಪ್ರತಿಯೊಬ್ಬರ ಪಾತ್ರಗಳು ಕಾದಂಬರಿಯ ಜೀವ ತುಂಬಿಸುತ್ತದೆ. ಮೇಡಂ ರವರ ಭಾವನೆಯಂತೆ ಅವರ ವ್ಯಕ್ತಿತ್ವ. ಮಾನವೀಯತೆ. ನಡತೆ. ಪ್ರೀತಿ.ಸರಳತೆ. ಈ ಕಾದಂಬರಿಯಲ್ಲಿ ಎದ್ದು ಕಾಣುತ್ತದೆ ಹಳ್ಳಿಯ ಸೊಗಡು ಹಾಗೂ ನಗರ ಜೀವನದ ಶೈಲಿ ಎರಡನ್ನು ರಚಿಸಿದ್ದಾರೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಈ ಕಾದಂಬರಿಯ ಮೂಲಕ ನೀಡಿದ್ದಾರೆ. ನನ್ನ ಅನಿಸಿಕೆ ...
ಜೀವನದ ದಾರಿಯು ಸಾಧನೆಯ ಆದಿ ಮುಟ್ಟಬೇಕು,
ನಾನು ಮೊದಲ ಬಾರಿಗೆ ಕಾದಂಬರಿಯ ಕುರಿತು ನನ್ನ ಅನಿಸಿಕೆಯನ್ನು ಬರೆದಿರುವೆ ದಯವಿಟ್ಟು ಏನಾದರೂ ನನ್ನ ಪದಗಳಲ್ಲಿ ಲೋಪ ದೋಷಗಳು ಕಂಡುಬಂದರೆ ಕ್ಷಮೆ ಇರಲಿ,
ಹೃದಯಪೂರ್ವಕ ಧನ್ಯವಾದಗಳು💐🙏
ನಮ್ಮ ಪ್ರೀತಿಯ R K ಆಶಾ ಪ್ರಮೋದ್ ಮೇಡಂ ರವರಿಗೆ ನಮಸ್ಕರಿಸುತ್ತಾ. ಮೇಡಂ ರವರ ಚೊಚ್ಚಲ ಕಾದಂಬರಿ ಸುಮಬಾಲೆಯನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿರುವ ನಿಮಗೆ ಅಭಿನಂದನೆಗಳು ಮೇಡಂ. ಈ ಕಾದಂಬರಿಯನ್ನು ಓದಿದ ನನಗೆ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಕುತೂಹಲ ದಿಂದ ಓದಿರುವೆ.12 ಪದರಗಳಾಗಿ ಎಳೆದಿರುವ ಸುಮಬಾಲೆ ಓದುವವರಿಗೆ ರಸದೂತಣ. ಮೇಡಂ ರವರ ಭಾವನೆಯಂತೆ ಸಮಾಜಕ್ಕೆ ತಮ್ಮಿಂದ ಏನಾದರೂ ಕೊಡುಗೆಯನ್ನು ನೀಡಬೇಕು ಎಂಬುದು ಎದ್ದು ಕಾಣುತ್ತದೆ, ಪ್ರತಿಯೊಂದು ಸಾಲುಗಳು ಮನಸ್ಸಿಗೆ ಮುಟ್ಟು ವಾಗಿ ರಚಿಸಿದ್ದಾರೆ. ಕಮಲಿ ಹೆಣ್ಣುಮಗು ತನ್ನ ಜೀವನ ಸಾಧನೆ ದಾರಿಯನ್ನು ಹೇಗೆ ಮುಟ್ಟಿದಳು ಎಂಬುದು ಕುತೂಹಲಕಾರಿ ಹಾಗೆ ತನ್ನ ಸಾಧನೆಗೆ ಸುತ್ತ ಮುತ್ತಲಿನವರು ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ,
ಕಮಲಿಯ ಒಳ್ಳೆಯ ಸಂಸ್ಕಾರಕ್ಕೆ ಅವರ ತಾಯಿಯೇ ಮುಖ್ಯ ಕಾರಣ ಕಮಲಿಗೆ ಸಿಕ್ಕ ಗೆಳತಿ ಶುಶಿ ಹಾಡಿಯಲ್ಲಿರುವ ಬೀರ ವೆಂಕಟ ಮಣಿ ಅಣ್ಣಂದಿರು ಅಕ್ಕನ ಸ್ಥಾನದಲ್ಲಿ ರೇಣುಕಾ ಗುರುಗಳ ಸ್ಥಾನದಲ್ಲಿ ಮನೋಜ್ ಕಮಲಿ ಪ್ರೀತಿಸಿದ ಹುಡುಗ ಮನೋಜ್ ಕಮಲಿ ಗೆ ಜೀವನ ಪಾಠ ತಿಳಿಸಿದ ಹಾಡಿಯ ಹಿರಿಯ ಜೀವ ಸಂಪಜ್ಜ ಪ್ರತಿಯೊಬ್ಬರ ಪಾತ್ರಗಳು ಕಾದಂಬರಿಯ ಜೀವ ತುಂಬಿಸುತ್ತದೆ. ಮೇಡಂ ರವರ ಭಾವನೆಯಂತೆ ಅವರ ವ್ಯಕ್ತಿತ್ವ. ಮಾನವೀಯತೆ. ನಡತೆ. ಪ್ರೀತಿ.ಸರಳತೆ. ಈ ಕಾದಂಬರಿಯಲ್ಲಿ ಎದ್ದು ಕಾಣುತ್ತದೆ ಹಳ್ಳಿಯ ಸೊಗಡು ಹಾಗೂ ನಗರ ಜೀವನದ ಶೈಲಿ ಎರಡನ್ನು ರಚಿಸಿದ್ದಾರೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಈ ಕಾದಂಬರಿಯ ಮೂಲಕ ನೀಡಿದ್ದಾರೆ. ನನ್ನ ಅನಿಸಿಕೆ ಜೀವನದ ದಾರಿ ಸಾಧನೆಯ ಆದಿ ಮುಟ್ಟಬೇಕು.
ನಾನು ಮೊದಲ ಬಾರಿಗೆ ಕಾದಂಬರಿಯ ಕುರಿತು ನನ್ನ ಅನಿಸಿಕೆಯನ್ನು ಬರೆದಿರುವೆ ದಯವಿಟ್ಟು ಏನಾದರೂ ನನ್ನ ಪದಗಳಲ್ಲಿ ಲೋಪ ದೋಷಗಳು ಕಂಡುಬಂದರೆ ಕ್ಷಮೆ ಇರಲಿ,
Hello ಆಶಾ ಮೇಡಂ,
ನಿಮ್ಮ ಸುಮಬಾಲೆಯನ್ನು ಇಂದು ಮುಗಿಸಿದೆ. ಮೊದಲಿಗೆ ನಿಮ್ಮ ಬರವಣಿಗೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಚೊಚ್ಚಲ ಕಾದಂಬರಿಯಾದರು ಕಥೆಯನ್ನು ಎಷ್ಟು ಸರಾಗವಾಗಿ ಸಾಗಿಸಿದ್ದೀರಿ. ನಿರ್ಮಲ ಪ್ರೀತಿಯೊಂದಿಗೆ, ಮನುಷ್ಯತ್ವ, ಸರಳತೆ ಹಾಗೂ ಜ್ಞಾನದ ನಿಮ್ಮ ಒಲವು ನಿಮ್ಮ ಬರವಣಿಗೆಯಲ್ಲಿ ಎದ್ದು ಕಾಣುತ್ತದೆ. ಸಮಾಜದ ಕಡೆ ನಿಮಗೆ ಇರುವ ಕಾಳಜಿ, ಅದನ್ನು ಹೇಗಾದರೂ ಸರಿ ಪಡಿಸ ಬಹುದೇ?, ಎನ್ನುವ ನಿಮ್ಮ ಭಾವನೆ ನಿಮ್ಮ ಪಾತ್ರಗಳಲ್ಲಿ ಕಾಣಸಿಗುತ್ತವೆ. ಒಟ್ಟಾಗಿ ಹೇಳುವುದಾರೆ ನಾವು ಈ ಸಮಾಜಕ್ಕೆ ಸೇರಿದವರು, ಹೇಗೆ ನೆಡೆದು ಕೊಳ್ಳಬೇಕು ಅನ್ನೋ ನಿಮ್ಮ ವಿಚಾರಗಳು ಪದಗಳ ರೂಪ ತಾಳಿ ಒಂದು ಒಳ್ಳೆ ಸರಳ ಕಥೆಯಾಗಿ ಒರ ಹೊಮ್ಮಿದೆ.
ಧನ್ಯವಾದಗಳು🙏
[15/04, 12:37 pm] ಅ: ನನಗೆ ತೋಚಿದ್ದನ್ನು ಗೀಚಿದ್ದೇನೆ ..... ವ್ಯಾಕರಣ, ಸಾಲುಗಳು ಹಾಗು ಕಾದಂಬರಿಯ ಪಾತ್ರಗಳ ಹೆಸರುಗಳಲ್ಲಿ , ಸನ್ನಿವೇಶಗಳನ್ನು ಉಲ್ಲೇಖಿಸಿರುವ ವಿಚಾರದಲ್ಲಿ ತಪ್ಪಾಗಿದ್ದರೆ, ಕ್ಷಮಿಸಿ ..
[15/04, 12:38 pm] ಅ: ಸುಮಬಾಲೆ.... ನಾನು ಓದಿದ ಕಾದಂಬರಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕೆಲವು ಕೃತಿಗಳಲ್ಲಿ ಒಂದು ... ಎಂದು ಹೇಳಲು ಇಷ್ಟ ಪಡುತ್ತೇನೆ. ಇಲ್ಲಿ ಹಿಡಿದಿಟ್ಟಿರುವ ವಿಚಾರಗಳು, ಅನುಭವಗಳು,ಸಹಜತೆ, ಸಮಾಜದ ಅಭಿವ್ಯಕ್ತಿ , ಕಥಾ ಹೂರಣ , ಹೀಗೆ ಮುಂತಾದ ವಿಚಾರಗಳು ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ. ಲೇಖಕಿ ಯವರು ವಿವಿಧ ಪಾತ್ರಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ಬಹಳ ಸರಳವಾಗಿ ಮನ ಮುಟ್ಟುವಂತೆ ಚಿತ್ರಿಸಿದ್ದಾರೆ . ಹಾಗೆ ಕೆಲ ಸನ್ನಿವೇಶಗಳು ಬಾವನಾತ್ಮಕವ್ವಾಗಿಯೂ, ಸೂಕ್ಷ್ಮಗ್ರಾಹಿಯಾಗಿಯೂ ಓದುಗರನ್ನು ಮಾರ್ಪಡಿಸುತ್ತದೆ..
ಕಮಲಿಯ ಸುತ್ತಮುತ್ತ ಹರಿದಾಡುವ ಕಥೆ .... ಹಾಡಿಯಾ ಜೀವನ ...ಊರ ಮುಖ್ಯಸ್ಥ ಅಥವಾ ಹಿರಿತಲೆ ಎಂದೆನ್ನಬಹುದಾದ ಸಂಪಜ್ಜ ಬಹಳ ಪ್ರಮುಖ ಪಾತ್ರ ವಹಿಸುತ್ತಾರೆ. ಇಂದಿನ ಮೆಟ್ರೋ ನಗರಗಳಲ್ಲಿನ ಸ್ಲಂ ಅಥವಾ ವಲಸೆ ಬಂದ ಜನಗಳ ಜೀವನ , ಅವರ ಸಮಸ್ಯೆಗಳು, ಅವರನ್ನು ಬಳಸಿಕೊಳ್ಳುವ ರೀತಿ , ಅವರಿಗೆ ಬೇಕಾದ ಸೌಲಭ್ಯಗಳು ಹೀಗೆ ಮುಂತಾದ ವಿಷಯಗಳು ಕಥೆಯ ತಿರುಳಾಗಿ ಸಾಗುತ್ತ ನೈಜತೆಗೆ ಕನ್ನಡಿಹಿಡಿದ ಹಾಗೆ ಇದೆ.ಮೇಲು ಕೀಳು ಎಂಬ ಬಾವನೆ ಇನ್ನು ಸಮಾಜದಲ್ಲಿ ಬೇರೂರಿವುದು... ಕೆಲವೊಂದು ಸನ್ನಿವೇಶದಲ್ಲಿ ಹಾದು ಹೋಗುತ್ತದೆ . ಈ ಜಿಗ್ಯಾಸೆ ಹೊತ್ತು ತರುವ ಪಾತ್ರ ಹಾಗೆ ಅದಕ್ಕೆ ಸಾಂತ್ವನ ಕೊಡುವ ಸಂಪಜ್ಜ ಬಹಳಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿದೆ.
ಶಾಲೆಯ ಮೇಷ್ತ್ರು ಯಾವರೀತಿ ತನ್ನ ಶಿಷ್ಯರನ್ನು ಪೋಷಿಸಬೇಕು ಎಂಬ ಚಿಂತನೆ ಕಥೆಗೆ ಪೂರಕವಾಗಿದ್ದು . ಶೇಖರನ ಆತ್ಮಾವಲೋಕನ , ಪಾಶ್ಚ್ಯಾತಾಪ ಹಾಗು ತನ್ನ ವೃತ್ತಿನಿಷ್ಠೆ ಒಬ್ಬ ಒಳ್ಳೆಯ ವ್ಯಕ್ತಿಗೆ ಇರಬೇಕಾದ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಂತೆ ಇದೆ. ಮನೋಜ್ ಮತ್ತು ರೇಣುವಿನ ಪ್ರೇಮಕಥೆ , ಕಮಲಿ ಹಾಗು ಪವನ್ ನ ಪ್ರೇಮ ಕಥೆ .... ಸುಮಧುರವಾಗಿ ಕಾಣಸಿಗುತ್ತದೆ.. ಹಾಗು ಕಥೆಯ ವೋಟಕ್ಕೆ ಪೂರಕವಾಗಿದ್ದು ಹಾಗು ಸಾಂದರ್ಭಿಕವಾಗಿಯೂ ಆಗಬಹುದಾದ ವಿಷಯ ವೆಂದೆನ್ನಿಸದೆ ಇರಲಾರದು. ಅಷ್ಟರ ಮಟ್ಟಿಗೆ ಲೇಖಕಿ ಪ್ರೇಮದ ಇರುವಿಕೆಯನ್ನು ಪುಷ್ಟಿಕರಿಸುತ್ತಾ ಹೋಗುತ್ತಾರೆ.
ಈಗಿನ ಡಂಬಾಚಾರದ ಬದುಕು , ತೋರಿಕೆಯ ಜೀವನ , ಮತ್ತು ತುಚ್ಛ ಮನಸ್ಥಿತಿ ಸಾನ್ವಿ ಯಾ ಪಾತ್ರದ ಮೂಲಕ ಕಾಣಸಿಗುತ್ತದೆ. ಅದಕ್ಕೆ ವ್ಯತಿರಿಕ್ತವಾಗಿ ಅವನಗಂಡನ ನಡತೆ ... ಸಂಸಾರದ ಸಮತೋಲನವನ್ನು ನಿಂಬಾಯಿಸುವ ಶಕ್ತಿ ಯಾಗಿ ಕಾಣಸಿಗುತ್ತದೆ. ಇದರ ನಡುವೆ ಬರುವ ಊರಿನ ಪ್ರವಾಸ ಹಾಗು ತೋಟಕ್ಕೆ ಹೋಗುವ ಅಲ್ಲಿನ ಸ್ಥಿಗತಿಗಳ ವಿವರಣೆ .. ಎಲ್ಲರಿಗೂ ತಮ್ಮ ಜೀವನಕ್ಕೆ ಬಹಳ ಹತ್ತಿರವಿದೆ ಎಂದೆನ್ನಿಸದೆ ಇರಲಾರದು .
ಅಂತರ್ ಜಾತಿ ವಿವಾಹದ ಬಗ್ಗೆ ಯಾಗಲಿ, ಕೆಳಮಟ್ಟದ ಜನಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಹಿಸೋ ದೃಶ್ಯಗಳಾಗಲಿ , ಸಮಾನತೆ ಹಾಗು ಗೌರವ ಪೂರ್ಣ ಜೀವನದ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಸಾರುವ ಸನ್ನಿವೇಶಗಳು ಹಾಗು ಪಾತ್ರಗಳಾಗಲಿ .. ನನಗೆ ಕುವೆಂಪು ರವರ ಸಾಲುಗಳನ್ನು ಜ್ಞಾಪಿಸುತ್ತದೆ ... ಇಲ್ಲಿ ಯಾರು ಮುಖ್ಯರು ಅಲ್ಲ ಅಮುಖ್ಯರು ಅಲ್ಲ ......
ಹಾಗೆ ಕಮಲಿಯ ಪಾತ್ರ ಹೆಣ್ಣುಮಕ್ಕಳಿಗೆ ಇರುವ ಶಕ್ತಿ ಮತ್ತು ಯೋಗ್ಯತೆಗಳು ... ಅವರಿಗೆ ಸರಿಯಾಗಿ ಹಾರೈಸಿ ಪೋಷಿಸಿದರೆ ... ಏನೆಲ್ಲಾ ಸಾಧ್ಯತೆಗಳು ಇವೆ ಎನ್ನುವುದು ನೋಡಬಹುದು .
ಒಟ್ಟಾರೆ ಯಾಗಿ ಸಮಾಜದ ಉನ್ನತಿಗೆ ಬೇಕಾದ ಆಶೋತ್ತರಗಳು ಲೇಖಕಿಯಾ ಬರಹದಲ್ಲಿ ಮೂಡಿ ಬಂದಿದೆ ಎಂದು ಹಾಗು ಸರ್ವಧರ್ಮ ಸಮನ್ವಯತೆಯ ಭಾವ ಮೂಡಿಸುವ ಕಥಾನಕ . ರಾಣಿ ಚೆನ್ನಭೈರಾದೇವಿಯ ನೆನಪನ್ನು ಮೂಡಿಸುತ್ತದೆ ...
ಶ್ರೀಮತಿ ಆಶಾರವರು ಹೀಗೆ ಮತ್ತಷ್ಟು ಕಾದಂಬರಿಗಳನ್ನು ರಚಿಸಿ , ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿಸಲಿ .. ಹಾಗು ಕನ್ನಡತಾಯಿಯ ಏಳಿಗೆಗಾಗಿ ಶ್ರಮಿಸಲಿ ಎಂದು ಆಶಿಸುತ್ತೇನೆ ...
ನಾನು ಬರೆದಿರುವ ಈ ಸಣ್ಣ ಲೇಖನ ದಲ್ಲಿ ಏನೆ ತಪ್ಪುಗಳಾಗಿದ್ದರು ಕ್ಷಮಿಸಿ ... ನಾನು ನನ್ನ ಬುದ್ದಿಗೆ ಹಾಗು ಕೈಗಳಿಗೆ ಕೆಲಸ ಕೊಟ್ಟು ಬಹಳ ದಿವಸಗಳು ಆಗಿದ್ದವು ...
ಮತ್ತೆ ಅದನ್ನು ಕಾರ್ಯ ರೂಪಕ್ಕೆ ತರಲು ಕಾರಣರಾದ ನಿಮಗೆ
ಧನ್ಯವಾದ .
ಅಖಿಲಾಂಕ
Subscribe to our emails
Subscribe to our mailing list for insider news, product launches, and more.