Skip to product information
1 of 2

Dr. Pradeep Beluru

ಸುಡೋಕು

ಸುಡೋಕು

Publisher - Upasana Books

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 80

Type - Paperback

Gift Wrap
Gift Wrap Rs. 15.00

ಆಧುನಿಕ ಕನ್ನಡ ಸಪುಷ್ಟವಾಗಿ ಹದಗೊಳ್ಳಲು ಮುಖ್ಯ ಕಾರಣಗಳಲ್ಲಿ ವಿರಾಟ್ ರೂಪವಾಗಿ ಬೆಳೆದ ಸಣ್ಣ ಕಥೆಗಳ ವ್ಯಾಪಕ ಬೆಳವಣಿಗೆ ಕೂಡ ಒಂದು. ಬದುಕಿನ ಬೇರೆ ಬೇರೆ ರಂಗಗಳಲ್ಲಿ, ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಕೂಡ ತುಸು ಪರಿಶ್ರಮ ಪಟ್ಟರೆ ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಮುದವಾಗಿ ಕನ್ನಡವನ್ನು ಬಳಸಿ ಕಥೆ ಕಟ್ಟಲು ಸಾಧ್ಯ ಎಂಬುದು ಅತ್ಯಂತ ಸಂತಸದ ಸಂಗತಿ.

ಇದನ್ನು ಯಾಕೆ ಇಲ್ಲಿ ಪ್ರಸ್ತಾಪಿಸಿದ್ದೇನೆಂದರೆ ಪ್ರದೀಪ್ ಬೇಲೂರು ಅವರು ತಮ್ಮ ಸ್ವಪ್ರಯತ್ನದಿಂದ ಕಥೆ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆದರೂ ಬರವಣಿಗೆ ಅವರ ಹವ್ಯಾಸ. ಇವರು ಇದುವರೆಗೆ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ "ಎಲವೋ ವಿಭೀಷಣ" ಕಥಾಸಂಕಲನಕ್ಕೆ ಎರಡು ಸಾಹಿತ್ಯ ಪ್ರಶಸ್ತಿಗಳು ಬಂದಿವೆ. "ಸುಡೋಕು" ಪ್ರದೀಪ್ ಅವರ ಹೊಸಾ ಕಥಾ ಸಂಕಲನ. ಇದರಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ವೈವಿಧ್ಯಮಯ ಕಥಾವಸ್ತು ಮತ್ತು ಪ್ರಸ್ತುತಿ ತಂತ್ರವನ್ನು ಇವರು ಈ ಕಥಾ ಸಂಕಲನದಲ್ಲಿ ಬಳಸಿದ್ದಾರೆ.

ಸಂಕಲದ ಪ್ರಮುಖ ಕಥೆ "ಸುಡೋಕು" ಶೀರ್ಷಿಕೆಯಿಂದ ಗಮನ ಸೆಳೆಯುತ್ತದೆ. ಇದೊಂದು ಪತ್ತೆದಾರಿ ಕತೆ ಎನ್ನಬಹುದು. ಒಂದು ಕೊಲೆಯ ಜಾಡು ಹಿಡಿದು ಹೋದಾಗ ಕೊಲೆಗಾರ ಸಿಕ್ಕಿದರೂ ಪೋಲಿಸಿಗೆ ಸಮಾಧಾನ ಸಿಗದು. ಕೊನೆಯಲ್ಲಿ ಯಾರು ಯಾಕೆ ಕೊಲೆಯನ್ನು ಮಾಡಿರುತ್ತಾರೆ ಎಂದು ಕೊಟ್ಟಿರುವ ತಿರುವು ಓದುಗರನ್ನು ರಂಜಿಸುತ್ತದೆ.

-ಡಾ ಕೊಳ್ಳಪ್ಪೆ ಗೋವಿಂದ ಭಟ್

View full details