Skip to product information
1 of 2

Keshava Prasad. B.

ಸ್ಟಾಕ್ ಮಾರ್ಕೆಟ್‌ನಲ್ಲಿ ಸಂಪತ್ತು ಸೃಷ್ಟಿಸುವುದು ಹೇಗೆ?

ಸ್ಟಾಕ್ ಮಾರ್ಕೆಟ್‌ನಲ್ಲಿ ಸಂಪತ್ತು ಸೃಷ್ಟಿಸುವುದು ಹೇಗೆ?

Publisher - ಸ್ನೇಹ ಬುಕ್ ಹೌಸ್

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 208

Type - Paperback

Gift Wrap
Gift Wrap Rs. 15.00

ಪ್ರತಿಯೊಬ್ಬರ ಜೀವನದಲ್ಲಿಯೂ 'ಖರ್ಚು-ಉಳಿತಾಯ-ಹೂಡಿಕೆ' ಎಂಬ ಮೂರು ಲೆಕ್ಕಾಚಾರಗಳು ಬಂದೇ ಬರುತ್ತವೆ. ಬದುಕಿನಲ್ಲಿ ಸಿರಿ ಸಂಪತ್ತು ವೃದ್ಧಿಸಬೇಕಿದ್ದರೆ, ಶ್ರೀಮಂತರಾಗಿ ನಮ್ಮ ಕನಸುಗಳನ್ನು ನನಸುಗೊಳಿಸಬೇಕಿದ್ದರೆ, ಬದುಕನ್ನು ಹಸನುಗೊಳಿಸಬೇಕಿದ್ದರೆ, ಸರಿಯಾದ ರೀತಿಯಲ್ಲಿ ಹೂಡಿಕೆಯನ್ನು ಮಾಡಲೇಬೇಕು. ಈ ಹಿಂದೆ ಸಾಂಪ್ರದಾಯಿಕವಾಗಿ ಅಂಚೆ ಇಲಾಖೆಯ ಸಣ್ಣ ಉಳಿತಾಯ, ಬ್ಯಾಂಕ್ಗಳ ನಿಶ್ಚಿತ ಠೇವಣಿ, ಚಿನ್ನ, ಬೆಳ್ಳಿ, ಸೈಟ್, ಮನೆ, ಜಮೀನುಗಳಲ್ಲಿ ಜನ ಹೂಡಿಕೆ ಮಾಡುತ್ತಿದ್ದರು. ಆದರೆ ಹೆಚ್ಚುತ್ತಿರುವ ಹಣದುಬ್ಬರದ ಎದುರು ಸಾಂಪ್ರದಾಯಿಕ ಹೂಡಿಕೆಗಳಲ್ಲಿ ಸಿಗುವ ಆದಾಯ ಕಡಿಮೆಯಾಗಿದೆ. ಆದ್ದರಿಂದ ಷೇರು ಮಾರುಕಟ್ಟೆ ಇತ್ತೀಚಿನ ವರ್ಷಗಳಲ್ಲಿ ಜನರನ್ನು ಅತ್ಯಂತ ಆಕರ್ಷಿಸುತ್ತಿದೆ. ಉದಾಹರಣೆಗೆ ಭಾರತದಲ್ಲಿ 2024ರ ಒಂದೇ ವರ್ಷದಲ್ಲಿ 4 ಕೋಟಿ 60 ಲಕ್ಷಕ್ಕೂ ಹೆಚ್ಚು ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ! ಮ್ಯೂಚುವಲ್ ಫಂಡ್ ಸಿಪ್ ಮೂಲ ಪ್ರತಿ ತಿಂಗಳು 25-26 ಸಾವಿರ ಕೋಟಿ ರುಪಾಯಿ ಷೇರು ಮಾರುಕಟ್ಟೆಗೆ ಹರಿದು ಬರುತ್ತಿದೆ! ಆದರೆ ಷೇರುಗಳಲ್ಲಿ ಹೂಡಿಕೆಗೆ ಮುನ್ನ ಅದರ ಬಗ್ಗೆ ಜ್ಞಾನವನ್ನು ಗಳಿಸುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ 'ಸ್ಟಾಕ್ ಮಾರ್ಕೆಟ್ನಲ್ಲಿ ಸಂಪತ್ತು ಸೃಷ್ಟಿಸುವುದು ಹೇಗೆ?' ಕೃತಿಯನ್ನು ತಪ್ಪದೆ ಓದಿರಿ! ಕೋಟಿಗಳ ಲೆಕ್ಕದಲ್ಲಿ ಗಳಿಸಿ!

-ಕೇಶವ ಪ್ರಸಾದ್ ಬಿ. 

View full details