Dr. Swami Ambaprasad Tejasvi Guruji
ಶ್ರೀ ಪ್ರತ್ಯಂಗಿರಾ ವ್ರತಕಲ್ಪಃ
ಶ್ರೀ ಪ್ರತ್ಯಂಗಿರಾ ವ್ರತಕಲ್ಪಃ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 68
Type - Paperback
Couldn't load pickup availability
ದೇವಿ-ದೇವತೆಗಳ ವ್ರತಗಳೆಲ್ಲವೂ ಪುರಾಣೋಕ್ತವಾಗಿವೆ. ಋಷಿ, ಮುನಿಗಳಿಂದ, ದೈವಾಂಶ ಸಂಭೂತರಾದ
ವಸಿಷ್ಠ ವ್ಯಾಸ ಮಹರ್ಷಿಗಳಂತಹ ಋಷಿ ಪುಂಗರುಗಳಿಂದ ರಚಿತವಾಗಿವೆ. ವ್ರತಾಚರಣೆಗಳು ಕಾಮ್ಯಸಾಧನಾ ಪ್ರಯೋಗಗಳಾಗಿ (ಕಾಮ್ಯ ಪ್ರಯೋಗಗಳು) ವ್ರತಾಚರಣೆಗೆ ಬ್ರಹ್ಮಚಾರಿಗಳಾಗಲೀ, ಗೃಹಸ್ಥರಾಗಲೀ, ಯಾರಾದರೂ ಯಾವುದೇ ವ್ರತವನ್ನು ಆಚರಿಸಬಹುದು. ವ್ರತಗಳಿಗೆ ಅವುಗಳದ್ದೇ ಆದ ಫಲವಿರುವುದರಿಂದ ಅಂತಹ ವ್ರತವನ್ನು ಒಂದೇ ದಿನ ಆಚರಿಸಬಹುದು ಅಥವಾ ಅನೇಕ ದಿನಗಳೂ, ಅನೇಕ ಮಾಸಗಳೂ ಆಚರಿಸಬಹುದು.
ಶ್ರೀ ವರಸಿದ್ಧಿ ವಿನಾಯಕ ವ್ರತ-ವರ್ಷಕ್ಕೆ ಒಂದು ಬಾರಿ, ಆದರೆ ಸಂಕಷ್ಟಹರ ಗಣಪತಿ ವ್ರತ-ಪ್ರತಿ ತಿಂಗಳೂ ಆಚರಿಸುತ್ತಾರೆ. ಹಾಗೆಯೇ ವರ್ಷಕ್ಕೊಮ್ಮೆ ಬರುವ ಕೇದಾರೇಶ್ವರ ವ್ರತ, ಉಮಾಮಹೇಶ್ವರ ವ್ರತ, ಶಿವರಾತ್ರಿ ವ್ರತ, ಹೀಗೆ ಅನೇಕ ವ್ರತಗಳನ್ನು ನಾವು ಸಟೀಕಾ ವ್ರತ ರತ್ನಮಾಲಾ ಎಂಬ ಪುಸ್ತಕದಲ್ಲಿ ಕಾಣಬಹುದು. ಶ್ರೀ ರಮಾ ಸಹಿತ ಶ್ರೀ ಸತ್ಯನಾರಾಯಣ ವ್ರತವನ್ನು ಪ್ರತಿ ಪೌರ್ಣಮಿ ತಿಥಿಯಲ್ಲಿ ಆಚರಿಸುವ ರೂಢಿಯಲ್ಲಿದೆ.
ಈಗ ನಾವು ಬರೆದಿರುವ ಶ್ರೀ ಪ್ರತ್ಯಂಗಿರಾ ವ್ರತಕಲ್ಪವು ಶ್ರೀ ದೇವಿಯೇ ಸಾಕ್ಷಾತ್ ಉಪದೇಶಿಸಿ ನನ್ನಿಂದ ಬರೆಸುತ್ತಿದ್ದಾಳೆ. ನಮ್ಮ ಉದ್ದೇಶವು ಮಾನವನು ಜೀವನದಲ್ಲಿ ಸುಖಶಾಂತಿಗಳಿಲ್ಲದೆ ಬಳಲುತ್ತಿದ್ದಾನೆ. ಆದುದರಿಂದ ಪ್ರತಿ ಮಾನವನೂ ಸುಖವಾಗಿರಬೇಕು. ಎಲ್ಲ ಹಳ್ಳಿಯ ಗ್ರಾಮದ, ನಗರದ ಮತ್ತು ದೇಶದ ಪ್ರತಿಯೊಬ್ಬನೂ ಸುಖ ಸಂತೋಷಗಳಿಂದ ಇರಬೇಕೆನ್ನುವುದೇ ನನ್ನ ಈ ಕಿರುಗ್ರಂಥದ ಮುಖ್ಯ ಉದ್ದೇಶವಾಗಿದೆ.
ಪ್ರಪಂಚದ ಯಾವ ದೇಶವೂ ಸುಖಸಂವೃದ್ಧಿಯಿಂದ ಕೂಡಿಲ್ಲ ಪ್ರಕೃತಿಯ ಅತಿವೃಷ್ಟಿ ಅನಾವೃಷ್ಠಿಗಳಿಂದ ಸಂಭವಿಸಬಹುದಾದ ಅವಾಂತರಗಳಿಂದ ಮನುಷ್ಯನು ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಅಸಮರ್ಥನಾಗಿದ್ದಾನೆ. ಮನುಷ್ಯನು ಮನುಷ್ಯನಿಂದಲೇ ಭಯಪಡುತ್ತಿದ್ದಾನೆ. ಇದಕ್ಕೆ ಕಾರಣ ಜಿದ್ದು, ದ್ವೇಷ, ಕೋಪ, ಕೀರ್ತಿ ಇತ್ಯಾದಿಗಳಿಂದ ಅಮಾಯಕರಿಗೆ ಕಷ್ಟಗಳುಂಟಾಗುತ್ತವೆ. ಇಂತಹುಗಳಿಗೆ ಮಾನವನು ದೈವದ ಸಹಾಯವನ್ನು ಆಶಿಸುತ್ತಾನೆ. ಇದರಿಂದಾಗಿ ನಾನು ಈಗಾಗಲೇ ಶ್ರೀ ಪ್ರತ್ಯಂಗಿರಾ ಉಪಾಸನಾ ಕಲ್ಪ, ಉಗ್ರ ಪ್ರತ್ಯಂಗಿರಾ, ಪ್ರತ್ಯಂಗಿರಾ ಕವಚ, ಪ್ರತ್ಯಂಗಿರಾ ಕವಚ, | ಪ್ರತ್ಯಂಗಿರಾ ಹೋಮ ಪದ್ಧತಿ ಇತ್ಯಾದಿ ಇತ್ಯಾದಿ ಬಹು ಅಮೂಲ್ಯವಾದ ಗ್ರಂಥವನ್ನು ಬರೆದು ಪ್ರಚಾರಪಡಿಸಿರುತ್ತೇನೆ. ಆ ಪುಸ್ತಕಗಳೆಲ್ಲವೂ ಶ್ರೀ ಪ್ರತ್ಯಂಗಿರಾ ದೇವಾಲಯದಲ್ಲಿ ಲಭ್ಯವಿರುತ್ತದೆ.
ಪ್ರತಿ ದೇವತೆಗೂ ತನ್ನದೇ ಆದ ಮಂತ್ರವಿರುತ್ತದೆ. ಅವುಗಳು ವೈದಿಕ ಮಂತ್ರವಾಗಬಹುದು ಅಥವಾ ತಾಂತ್ರಿಕ ಮಂತ್ರವಾಗಬಹುದು. ಶೈವಾಗಮ ಶಸ್ತ್ರಾಗಮ ಪ್ರಕಾರವಾಗಿ ಶಿವಶಕ್ತಿಯರಿಗೇ ಹೆಚ್ಚು ಮಹತ್ವವಿರುತ್ತದೆ. ಮಂತ್ರಗಳು ಆಯಾ ದೇವತೆಗಳ ಸೂಕ್ಷ್ಮರೂಪವಾಗಿರುತ್ತವೆ.
ಮಂತ್ರಗಳ ಮೂಲಕ ಸಾಧಕನು ತನ್ನ ಉಪಾಸನಾ ದೇವತಾ ಸ್ವರೂಪಗಳನ್ನು ಮಂತ್ರಗಳ-ತಂತ್ರಗಳ ಮೂಲಕ ತಿಳಿದುಕೊಂಡು ಆಯಾ ದೇವತಾ ಪೂಜೆ, ಜಪ ಹೋಮ, ವ್ರತಗಳನ್ನಾಚರಿಸುವ ಮೂಲಕ ತನ್ನ ಇಷ್ಟಾರ್ಥಗಳನ್ನು ಪಡೆಯಬಹುದಾಗಿದೆ. ಈ ಪವಿತ್ರ ಶಕ್ತಿಶಾಲಿ ವ್ರತ ವಿಧಾನವನ್ನು ಅನುಸರಿಸಿ ಪ್ರತಿಯೊಬ್ಬರು ತಮ್ಮ ಕಾಮನೆಗಳನ್ನು ನೆರವೇರಿಸಿಕೊಂಡು, ಸುಖಮಯ ಜೀವನ ಹೊಂದಲಿ ಎಂದು ದೇವಿಯಲ್ಲಿ ಪ್ರಾಥಿಸಿ. ಆಸ್ತಿಕ ಸಜ್ಜನರಿಗೆ ಶುಭ ಕೋರುತ್ತೇನೆ.
Share

Subscribe to our emails
Subscribe to our mailing list for insider news, product launches, and more.