Skip to product information
1 of 2

Girish Karnad

ಸೊನಾಟಾ ಧರ್ಮಪುತ್ರ ವಾಸಾಂಸಿ ಜೀರ್ಣಾನಿ

ಸೊನಾಟಾ ಧರ್ಮಪುತ್ರ ವಾಸಾಂಸಿ ಜೀರ್ಣಾನಿ

Publisher - ಮನೋಹರ ಗ್ರಂಥಮಾಲಾ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 144

Type - Paperback

Gift Wrap
Gift Wrap Rs. 15.00

ಶ್ರೀ ಮಹೇಶ ಎಲಕುಂಚವಾರ ಅವರು ಮಹಾರಾಷ್ಟ್ರದ ಪರ್ವಾ ಎಂಬಲ್ಲಿ ೯ ಅಕ್ಟೋಬರ್ ೧೯೩೯ರಂದು ಜನಿಸಿದರು. ನಾಲ್ಕನೆಯ ವರ್ಷದಲ್ಲೇ ತಂದೆ-ತಾಯಿಗಳಿಂದ ದೂರವಾಗಿ ಶಿಕ್ಷಣಕ್ಕಾಗಿ ಪಟ್ಟಣ ಸೇರಿ ಏಕಾಂಗಿಯಾಗಿ ಬೆಳೆದರು. ನಾಗಪುರದಲ್ಲಿ ಮ್ಯಾಟ್ರಿಕ್ಯುಲೇಶನ್ ಮುಗಿಸಿ, ಮೊರಿಸ್ ಕಾಲೇಜಿನಲ್ಲಿ ಬಿ.ಎ., ನಾಗಪುರ ವಿಶ್ವವಿದ್ಯಾಲಯದಿಂದ ಎಂ.ಎ. ಮುಗಿಸಿದರು. ಇದೇ ವೇಳೆಯಲ್ಲಿ ೧೯೬೫ರಲ್ಲಿ ಸಿನೇಮಾ ನೋಡಲೆಂದು ಹೋದವರು ಟಿಕೆಟ್ ಸಿಗದೆ ನಾಟಕವನ್ನು ವಿಕ್ಷಿಸಿದರು. ವಿಜಯಾ ಮೆಹತಾ ನಿರ್ದೇಶಿಸಿದ ವಿಜಯ ತೇಂಡೂಲ್ಕರ ಅವರ 'ನಾನು ಗೆದ್ದೆ, ನಾನು ಸೋತೆ' ಎಂಬ ನಾಟಕ ವೀಕ್ಷಿಸಿದ ಮೇಲೆ ನಾಟಕಕಾರನಾಗುವ ನಿರ್ದಾರ ಕೈಗೊಂಡರು.

ನಾಗಪುರ ಧರ್ಮಪೀಠ ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ಮತ್ತು ಪಿ.ಡಿಯೊ. ಮೆಮೊರಿಯಲ್ ಸೈನ್ಸ್ ಕಾಲೇಜದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಬೋಧಿಸುತ್ತ ನಿವೃತ್ತಿಗೊಂಡರು. ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟಿನಲ್ಲಿ ೨೦೦೦-೨೦೦೧ರಲ್ಲಿ Screen Play Writing ದ ಪ್ರಾಧ್ಯಾಪಕರಾಗಿ ಹಾಗೂ ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ್ದಾರೆ.

ಶ್ರೀ ಮಹೇಶ ಎಲಕುಂಚವಾರ ಅವರು ಮರಾಠಿಯಲ್ಲಿ ಅನೇಕ ನಾಟಕಗಳನ್ನು ಬರೆದಿದ್ದಾರೆ. ನಂತರ ಅವು ಅನೇಕ ಭಾರತೀಯ ಮತ್ತು ವಿದೇಶೀ ಭಾಷೆಗಳಲ್ಲಿ ಭಾಷಾಂತರಗೊಂಡಿವೆ (ಇಂಗ್ಲಿಷ್, ಫ್ರೆಂಚ್, ಜರ್ಮನ್ ಇತ್ಯಾದಿ).

ಪ್ರತಿಬಿಂಬ, ಚಿರೆಬಂದಿವಾಡೆ, ಪಾರ್ಟಿ, ಸುಲ್ತಾನ ಮತ್ತು ಯುಗಾಂತ ಇವರ ಪ್ರಸಿದ್ದ ನಾಟಕಗಳು. 

ಸೊನಾಟಾ, ಧರ್ಮಪುತ್ರ ಮತ್ತು ವಾಸಾಂಸಿ ಜೀರ್ಣಾನಿ ಎಂಬ ಮೂರು ನಾಟಕಗಳನ್ನು ಕನ್ನಡದ ಶ್ರೇಷ್ಠ ನಾಟಕಕಾರರಾದ ಶ್ರೀ ಗಿರೀಶ ಕಾರ್ನಾಡ ಅವರು ಅನುವಾದಿಸಿದ್ದು ಅವರ ನಾಟಕಪ್ರೀತಿಯನ್ನು ಎತ್ತಿ ತೋರಿಸುತ್ತದೆ.

ಸಂಗಿತ ನಾಟಕ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಸ್ವತಿ ಸಮ್ಮಾನ, ಕಾಳಿದಾಸ ಸಮ್ಮಾನ ಹಾಗೂ ಇತರ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಲಭಿಸಿವೆ. 

View full details