ಕನ್ನಡ ಸಾಹಿತ್ಯ ಪರಿಷತ್ತು
Publisher:
Regular price
Rs. 60.00
Regular price
Sale price
Rs. 60.00
Unit price
per
Shipping calculated at checkout.
Couldn't load pickup availability
ಗ್ರಂಥದ ವಿಷಯ ಈಗ ಮೂವತ್ತು ನಾಲ್ವತ್ತು ವರುಷಗಳ ಹಿಂದೆ ಕನ್ನಡ ವಿದ್ಯಾಭ್ಯಾಸ ಮಾಡಿದ ಬಾಲಕರಲ್ಲಿ ಸೋಮೇಶ್ವರ ಶತಕವನ್ನು ಓದದಿದ್ದವರು ಇರಲೇ ಇಲ್ಲವೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಈಗಲೂ ಈ ಶತಕದಲ್ಲಿಯ ಅನೇಕ ವಾಕ್ಯಗಳನ್ನು ಕನ್ನಡಿಗರು ತಾವಾಡುವ ಮಾತಿನಲ್ಲಿ ಗಾದೆಗಳಂತೆ ಉಪಯೋಗಿಸುತ್ತಿರು \ವರು. ಆದರೆ ಈಚೆಗೆ ಈ ಗ್ರಂಥದ ಪ್ರಾಚುರ್ಯವು ಕಡಿಮೆಯಾಗುತ್ತ ಬಂದು ಈಗಿನ ಕನ್ನಡ ಶಾಲೆಗಳಲ್ಲಿಯ ಬಾಲಕ ಬಾಲಕಿಯರಿಗೆ ಇದರ ವಿಷಯವೇ ತಿಳಿಯದಂತಾಗಿದೆ. ಈ ಕವಿತೆಯ ಪ್ರತಿಗಳಲ್ಲಿ ಅಬದ್ಧಗಳು ಕ್ರಮೇಣ ಹೆಚ್ಚುತ್ತ ಬಂದು ಕೆಲವರು ಅವನ್ನು ತಮಗೆ ತೋರಿದ ರೀತಿಯಲ್ಲಿ ತಿದ್ದಿರುವುದರಿಂದ ಈಗ ಕೆಲವು ಪದ್ಯಗಳಲ್ಲಿ ಕವಿಯ ಅಭಿಪ್ರಾಯವು ಏನೆಂಬುದು ಸ್ಪಷ್ಟವಾಗಿ ತಿಳಿಯದಂತಾಗಿದೆ. ಇದರ ಜೊತೆಗೆ ಮುದ್ರಣಕಾರರು ಜನಸಾಮಾನ್ಯಕ್ಕೆ ಪುಸ್ತಕವನ್ನು ಅಗ್ಗವಾಗಿ ದೊರಕಿಸಬೇಕೆಂಬ ಕುತೂಹಲದಿಂದ ಬಹಳ ಕೀಳರದ ಕಾಗದವನ್ನುಪಯೋಗಿಸಿ ಮುದ್ರಣದ ತಪ್ಪುಗಳನ್ನು ತಿದ್ದುವ ಶ್ರಮವನ್ನು ಕಡಿಮೆ ಮಾಡಿಕೊಂಡಿರುವುದರಿಂದಲೂ, ಗ್ರಂಥದಲ್ಲಿ ಕೆಲವು ಬಾಲಿಕೆಯರು ಓದಲು ಅರ್ಹವಾದುದಲ್ಲವೆಂದು ಕೆಲವರು ಅಭಿಪ್ರಾಯಪಟ್ಟಿರುವಂತೆ , ತೋರುತ್ತದೆ. ಈ ಕುಂದು ಕೊರತೆಗಳನ್ನು ಸಾಧ್ಯವಾದಮಟ್ಟಿಗೆ ದೂರಮಾಡಿ ಈ ನೀತಿ ಶತಕವು ಬಾಲಕ ಬಾಲಿಕೆಯರಿಗೆ ಉಪಯೋಗವಾಗುವಂತೆ ಮಾಡಬೇಕೆಂಬುದೇ ನಮ್ಮ ಈ ಮುದ್ರಣದ ಮುಖ್ಯೋದ್ದೇಶವಾಗಿರುವುದು.
