Gundurao Desai
ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು
ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು
Publisher - ಅಭಿನವ ಪ್ರಕಾಶನ
- Free Shipping Above ₹350
- Cash on Delivery (COD) Available*
Pages -
Type - Paperback
Couldn't load pickup availability
ಸೊಳ್ಳೆ ಅಂತಹ ಕನಿಷ್ಠ ಅಂದುಕೊಳ್ಳುವ ಜೀವಿ ಈ ಕಾದಂಬರಿ ತುಂಬ ಜೀವತುಂಬಿಕೊಂಡು ಓಡಾಡಿದೆ. ಬಿಟ್ಟೂ ಬಿಡದೆ ಮಾತಾಡಿದೆ, ಸಾಹಸ ಮಾಡಿದೆ. ಮನುಷ್ಯನನ್ನೂ ಯಕಶ್ಚಿತ್ ಎನ್ನುವಂತೆ ತೋರಿಸಿಯೂ ಬಿಟ್ಟಿದೆ. ಹೊಸಗಾಲದ ಫ್ಯಾಂಟಿಸಿ ಕನ್ನಡದಲ್ಲಿ ಬಿಡುಬೀಸಾಗಿ ಅರಳುತ್ತಿಲ್ಲ ಎನ್ನುವ ಕೊರಗಿದೆ. ಕನ್ನಡದ ಮನಸ್ಸುಗಳು ಇನ್ನೂ ಹಿಂಜರಿಕೆ ಅನುಭವಿಸುತ್ತಿವೆ. ಪಾಶ್ಚಾತ್ಯರಲ್ಲಿ ಸಾಕಷ್ಟು ಹೊಸಲೋಕ ಕಾಣಿಸಿಕೊಂಡಾಗಿಯೂ ನಮ್ಮಲ್ಲಿ ಅದೇಕೋ ಸಂಕೋಚ. ಪಂಚತಂತ್ರದಂತಹ, ನಮ್ಮ ಜನಪದ ಕತೆಗಳಿಂದ ಒಂದಿಷ್ಟೆಲ್ಲ ಬೇರೆಯದೇ ಆದ ಹೊರಳು ಈ ಕಾದಂಬರಿಯದು. ನಮ್ಮ ಹೊಸಗಾಲದ ಸಂವೇದನೆಗಳಿಗೆ ದಾರಿ ಮಾಡಿಕೊಡುವ ಬಗೆ ಇಲ್ಲಿನದು. ಇದುವರೆಗೆ ಲಲಿತ ಬರಹಗಳನ್ನ, ಹಾಸ್ಯತುಂಬಿದ ಬರಹಗಳನ್ನ ಸೃಷ್ಟಿಸುತ್ತಿದ್ದ ಗುಂಡುರಾವ್ ಇಲ್ಲಿ ಒಮ್ಮೆಲೆ ಹೊಸ ಅವತಾರ ತಳೆದಂತಾಗಿದೆ. ಕನ್ನಡಕ್ಕೆ ಇದೆಲ್ಲ ಬೇಕು, ಬೇಕು, ಬೇಕು. ಮಕ್ಕಳ ಸಾಹಿತ್ಯ ಹೊಸ ಉಸಿರಿನೊಂದಿಗೆ ತನ್ನ ಅಸ್ತಿತ್ವ ತೋರಿಸಿಕೊಳ್ಳಲು ಕನ್ನಡ ಸಜ್ಜಾಗಬೇಕಿದೆ ಇನ್ನೂ ಗುಂಡುರಾವ್ ಅವರು ನಗಿಸುತ್ತಲೇ ಇನ್ನೇನನ್ನೋ, ಮತ್ತೇನನ್ನೋ ಹೇಳಲು ಕಾದಂಬರಿಯಲ್ಲಿ ತವಕಿಸಿದ್ದಾರೆ.
-ಡಾ. ಆನಂದ ಪಾಟೀಲ
ಎಲ್ಲರೂ ಸೊಳ್ಳೆಯನ್ನು ದೂರವಿಡಲು ನೋಡಿದರೆ, ಗುಂಡುರಾವ್ ದೇಸಾಯಿ ಅದನ್ನು ಒಳ್ಳೆ ಫ್ರೆಂಡ್ ಮಾಡಿಕೊಂಡು ತಮ್ಮ ಕಾದಂಬರಿಯ ವಸ್ತುವಾಗಿಸಿಕೊಂಡವರು. ಸೊಳ್ಳೆಯೊಂದಿಗೆ ಸಂಭಾಷಣೆಗಿಳಿದು ಲೋಕದ ಅರಿವು ಮೂಡಿಸುವ ಮತ್ತು ಚಂಚಲ ಮನಸ್ಸಿನ ಎಳೆಯ ಓದುಗರಿಗೆ ಕುತೂಹಲ ಹುಟ್ಟಿಸುವ ರೀತಿಯಲ್ಲಿ ಸಾಗುವ ಈ ಕಾದಂಬರಿ 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಗಮನ ಸೆಳೆದಿತ್ತು. ಮಕ್ಕಳಿಗೆ ಆಪ್ತವಾಗುವ ಸನ್ನಿವೇಶಗಳು, ಸ್ವಾರಸ್ಯಕರ ಪ್ರಸಂಗಗಳು, ರಾಯಚೂರು ಭಾಷೆಯ ಸೊಗಡು ಮತ್ತು ಲೇಖಕರ ಆಸಕ್ತಿದಾಯಕ ಲಲಿತ ಪ್ರಬಂಧದ ಶೈಲಿ ಕಾದಂಬರಿಯ ವಿಶೇಷತೆಯಾಗಿದೆ..
-ರಾಜಶೇಖರ ಕುಕ್ಕುಂದಾ
ಓದುಗನನ್ನು ಸೆಳೆದು ಆವರಿಸಿಕೊಳ್ಳುವ ಈ ಕಾದಂಬರಿ ಸೊಳ್ಳೆಯ ಮೂಲಕ ಗೆಲುವಾಗಿಯೇ ಒಳಿತನ್ನು ಬಿತ್ತುತ್ತದೆ. ಆನಂದ ಪಾಟೀಲರ 'ಪುಟ್ಟಾರಿ ಆನೆ ಪುಟ್ ಪುಟ್' ನೆನಪಿಸುವ ಈ "ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು" ಕಾದಂಬರಿ ತನ್ನದೇ ಆದ ರೀತಿಯಲ್ಲಿ ಓದುಗನ ಫ್ರೆಂಡ್ ಆಗುತ್ತದೆ. ಈಗಾಗಲೇ 'ಮಕ್ಕಳೇನು ಸಣ್ಣವರಲ್ಲ' ಎನ್ನುವ ಕಥಾ ಸಂಕಲನದಲ್ಲಿ ಹೊಸ ಉಣಿಸನ್ನು ತಂದಿದ್ದ ಗುಂಡುರಾವ್ ದೇಸಾಯಿ ಅವರು ಇಲ್ಲಿ ಪ್ಯಾಂಟಿಸಿಯನ್ನು ಬಳಸಿಕೊಂಡು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಓದುಗರಿಗೆ ಮತ್ತಷ್ಟು ಖುಷಿಯ ಉಣಿಸನ್ನು ನೀಡಿದ್ದಾರೆ. ಕನ್ನಡದ ಮಕ್ಕಳ ಲೋಕದ ಖುಷಿಯನ್ನು ಈ ಕಾದಂಬರಿ ವಿಸ್ತರಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
-ತಮ್ಮಣ್ಣ ಬೀಗಾರ
Share

Great concept and wonderfully articulated.! Ask your kids to read this
Subscribe to our emails
Subscribe to our mailing list for insider news, product launches, and more.