Skip to product information
1 of 2

Vishaka George translated by Prasad naik

ಸ್ನೇಹಗ್ರಾಮದ ಸಂಸತ್ತು

ಸ್ನೇಹಗ್ರಾಮದ ಸಂಸತ್ತು

Publisher - ಬಹುರೂಪಿ

Regular price Rs. 152.00
Regular price Rs. 152.00 Sale price Rs. 152.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 152

Type - Paperback

Gift Wrap
Gift Wrap Rs. 15.00

...ವಿಸ್ತಾರವಾದ ತೋಟದಂತೆ ಕಾಣುತ್ತಿದ್ದ ಪರಿಸರದ ನಡುವಿನಿಂದ ಕಲ್ಲಿನ ಕಟ್ಟಡಗಳು ಎದ್ದು ಕಾಣುತ್ತಿತ್ತು. ಅನತಿ ದೂರದಲ್ಲಿ ಭಾರಿ ಘಟ್ಟಸಾಲು. ಸ್ನೇಹಗ್ರಾಮ... ನಿಜಕ್ಕೂ ತುಂಬಾ ಸುಂದರವಾಗಿತ್ತು.

ಹೊಸ ಶಾಲೆ, ಅಪರಿಚಿತವಾದ ಹೊಸ ಭಾಷೆ, ನಿರೀಕ್ಷೆಗೂ ಮೀರಿ ಪ್ರೋತ್ಸಾಹ ನೀಡುವ ಕೊಠಡಿಯ ಜೊತೆಗಾರ... ಇದೆಲ್ಲವನ್ನೂ ನಿಭಾಯಿಸುವ ಬಗೆ ತಿಳಿಯದೆ ಆಯೋಮಯನಾಗಿ ನಿಂತಿದ್ದ ಕೃಷ್ಣ. ಈತನ ಪಾಲಕರು ಎಚ್ಐವಿ ಸೋಂಕಿಗೆ ಬಲಿಯಾದ ನಂತರದಲ್ಲಿ ಆತ ಇಲ್ಲಿಗೆ ಬಂದು ತಲುಪಿದ್ದ. ಸ್ವತಃ ತಾನೂ ಎಚ್ಐವಿ ಬಾಧಿತ ಎಂಬ ವಾಸ್ತವ ಆತನಿಗೆ ತಿಳಿದಿತ್ತು. ಹುಟ್ಟಿದಾಗಿನಿಂದಲೂ ತನ್ನದೇ ಪ್ರಪಂಚ ಎಂದುಕೊಂಡಿದ್ದ ತನ್ನ ಮನೆಯನ್ನು ತೊರೆಯಬೇಕಾಗಿ ಬಂದಿದ್ದರಿಂದ, ಆತ ಪರಿತಪಿಸುತ್ತಿದ್ದ.

ಅತಿ ಶೀಘ್ರದಲ್ಲೇ ಆತ ಹೊಸ ಭಾವನೆಗಳಿಗೆ ತೆರೆದುಕೊಳ್ಳಬೇಕಾಗಿತ್ತು. ಶಾಲೆಯ ಓಟದ ಮೈದಾನದಲ್ಲಿ ಅತ್ಯಂತ ಉಲ್ಲಾಸದಿಂದ ಓಡುತ್ತಾ, ಗುರಿಸಾಧಿಸಿ ಹೆಮ್ಮೆಯಿಂದ ಬೀಗುವ ಅವಕಾಶ ಅವನಿಗಾಗಿ ಕಾಯುತ್ತಿತ್ತು, ಜತೆಗೆ ಶಾಲೆಯ ಸಂಸತ್ತಿನಲ್ಲಿ ಪ್ರಧಾನಮಂತ್ರಿ ಸ್ಥಾನವನ್ನು ತನ್ನದಾಗಿಸಿಕೊಳ್ಳಲು ತನ್ನ ಪರಮಾಪ್ತ ಸ್ನೇಹಿತನ ಜತೆ ತುರುಸಿನ ಪೈಪೋಟಿ ನಡೆಸುವ ರೋಮಾಂಚನಕ್ಕೆ ಆತ ಒಳಗಾಗಬೇಕಿತ್ತು.

ಜೀವನದ ಅನಿರೀಕ್ಷಿತ ಹಾದಿಯಲ್ಲಿ ಸಾಗುವಾಗಲೇ ದಿಢೀರನೆ ಎಲ್ಲ ಒಳಿತುಗಳೂ ನಮ್ಮೆಡೆಗೆ ಸಾಗಿಬರುತ್ತವೆ ಎಂಬುದಕ್ಕೆ ಈ ಕಥೆ ಉತ್ತಮ ಉದಾಹರಣೆ. ಹೃತೂರ್ವಕವಾಗಿ ಪ್ರೀತಿಸುವ ಸ್ನೇಹಿತರ ಬೆಂಬಲದೊಂದಿಗೆ ಅನಾರೋಗ್ಯದ ಬಾಧೆ ಮರೆತು ಸಾಧನೆಯ ಉತ್ತುಂಗಕ್ಕೇರುವ ಹದಿಹರೆಯದ ದಿಟ್ಟ ಯುವಕನೊಬ್ಬನ ನಿಜಜೀವನದ ಘಟನೆ ಆಧರಿಸಿದ ಕಥೆಯನ್ನು ವಿಶಾಖಾ ಜಾರ್ಜ್ ಕಟ್ಟಿಕೊಟ್ಟಿದ್ದಾರೆ.

View full details