Dr. D. V. Guruprasad
ಸಿಲ್ಕ್ ರೂಟ್
ಸಿಲ್ಕ್ ರೂಟ್
Publisher - ಮನೋಹರ ಗ್ರಂಥಮಾಲಾ
- Free Shipping Above ₹350
- Cash on Delivery (COD) Available*
Pages - 244
Type - Paperback
Couldn't load pickup availability
ರೇಷ್ಮೆ ಎಂದರೆ ಮನಸ್ಸಿನಲ್ಲೊಂದು ನವಿರಾದ ಭಾವ ಸರಿದುಹೋಗುತ್ತದೆ. ಒಂದು ಕಾಲದಲ್ಲಿ ಈ ರೇಷ್ಮೆ ಬಂಗಾರ, ಬೆಳ್ಳಿಗಿಂತ ಅಮೂಲ್ಯವಾಗಿತ್ತು. ಇದು ಸಾಗಿದ ರಸ್ತೆಯೇ "ದ ಗ್ರೇಟ್ ಸಿಲ್ಕ್ ರೋಡ್' ಎಂದು ಕರೆಯಲ್ಪಡುವ ರೇಷ್ಮೆ ರಸ್ತೆ. ಜಗತ್ತಿನ ಅನೇಕ ಪ್ರಾಚೀನ ನಾಗರಿಕತೆಗಳನ್ನು ಬೆಸೆದ, ಮೂರು ಖಂಡಗಳಿಗೆ ಸಂಪರ್ಕ ಕಲ್ಪಿಸಿದ ರಸ್ತೆ ಇದು. ಎರಡು ಸಾವಿರ ವರ್ಷಗಳ ಹಿಂದೆ ಈ ರಸ್ತೆಯಲ್ಲಿ ವ್ಯಾಪಾರ ಹೇಗೆ ಸಾಗುತ್ತಿತ್ತು? ಭಾರತೀಯ ವರ್ತಕರು ಈ ರಸ್ತೆಯ ಮೂಲಕ ಹೇಗೆ ವ್ಯಾಪಾರಕ್ಕೆ ಸಾಗಿದರು? ಎಂತೆಂಥ ಆಶ್ಚರ್ಯಕರ ಸಂಗತಿಗಳು ಇಡೀ ಜಗತ್ತನ್ನು ವ್ಯಾಪಿಸಲು ಕಾರಣವಾಯಿತು? ಅದರ ಪರಿಣಾಮದಿಂದ ಜಗತ್ತಿನಲ್ಲಿ ಎಂತೆಂಥ ಬದಲಾವಣೆಗಳು ಉಂಟಾದವು ಎಂಬ ಸಂಗತಿಗಳನ್ನೆಲ್ಲ ಈ ಕೃತಿ ಆಪ್ತವಾಗಿ ತೆರೆದಿಡುತ್ತದೆ. ಇತಿಹಾಸ-ವರ್ತಮಾನ ಎರಡನ್ನೂ ಹೋಲಿಸಿ ನೋಡುತ್ತ, ಓದುಗರನ್ನು ಹೊಸ ಅರಿವಿನೆಡೆಗೆ ಕರೆದೊಯ್ಯುತ್ತದೆ.
ಪ್ರವಾಸವನ್ನು ಬಹುವಾಗಿ ಇಷ್ಟಪಡುವ ಖ್ಯಾತ ಲೇಖಕ, ವಾಗ್ಮಿ ಡಾ. ಡಿ. ವಿ. ಗುರುಪ್ರಸಾದ್, 50ಕ್ಕೂ ಹೆಚ್ಚು ದೇಶಗಳನ್ನು ಸುತ್ತಾಡಿದವರು. ಈ ಅನುಭವಗಳನ್ನು ಅಕ್ಷರರೂಪದಲ್ಲೂ ದಾಖಲಿಸಿದವರು. ವಿದೇಶೀಯರು ಯಾವ್ಯಾವ ದೇಶಗಳಿಂದ ಯಾವ್ಯಾವ ಮಾರ್ಗದಲ್ಲಿ ನಮ್ಮ ದೇಶಕ್ಕೆ ಬಂದರು ಎಂದು ತರಗತಿಯಲ್ಲಿದ್ದ ಜಗತ್ತಿನ ಭೂಪಟ ನೋಡುತ್ತ, ತಾನೂ ಆ ವಿದೇಶೀಯರ ತಾಯ್ಯಾಡು ಮತ್ತು ಅವರು ಪಯಣಿಸಿದ ದೇಶಗಳಿಗೆ ಹೋಗಬೇಕೆಂದು ಹೈಸ್ಕೂಲಿನಲ್ಲಿದ್ದಾಗಲೇ ಆಸೆಪಟ್ಟಿದ್ದರು. ಮುಂದೆ ಅದಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಅಧ್ಯಯನ ಮಾಡಿದ್ದರು. ಹೀಗಾಗಿ ಅವರ ಈ ಹೊಸ ಪುಸ್ತಕ ಪ್ರವಾಸ ಕಥನವಷ್ಟೇ ಆಗಿರದೆ ಇತಿಹಾಸದ ಚಿತ್ರಣ ಕಟ್ಟಿಕೊಡುವ ಆಕರಗ್ರಂಥವಾಗಿ ರೂಪುಗೊಂಡಿದೆ. ಎಲ್ಲ ವಯೋಮಾನದವರೂ ಓದಲೇಬೇಕಾದ ಕುತೂಹಲಕರ ಪುಸ್ತಕವಿದು.
ಇದು ಅವರ ನೂರನೆಯ ಪುಸ್ತಕವೂ ಹೌದು.
-ರವೀಂದ್ರ ಮಾವಬಂಡ
ಮುಖ್ಯ ಉಪಸಂಪಾದಕ, ಸಂಯುಕ್ತ ಕರ್ನಾಟಕ
Share

Subscribe to our emails
Subscribe to our mailing list for insider news, product launches, and more.