Dr. K. N. Ganeshaiah
ಸಿಗೀರಿಯ
ಸಿಗೀರಿಯ
Publisher - ಅಂಕಿತ ಪುಸ್ತಕ
- Free Shipping Above ₹350
- Cash on Delivery (COD) Available*
Pages - 104
Type - Paperback
Couldn't load pickup availability
'ಸಿಗೀರಿಯ' - ವಿಚಿತ್ರ ಹೆಸರಿನ ಇದು ಸಿಂಹಳ ದೇಶದಲ್ಲಿರುವ ಒಂದು ದುರ್ಗಮ ಬೆಟ್ಟ. ಭಾರತದ ರಾಜನೊಬ್ಬ ಈ ಪ್ರದೇಶವನ್ನು ಆಳಿದನೆಂಬ ವಿಷಯವೇ ರೋಮಾಂಚನವುಂಟು ಮಾಡುವಂತದ್ದು. ಈಗಾಗಲೇ ಪ್ರಚಲಿತವಾಗಿರುವ ಚರಿತ್ರೆಯನ್ನಷ್ಟೇ ಕೇಳಿ ಸುಮ್ಮನಾಗುವವರಲ್ಲ ಗಣೇಶಯ್ಯನವರು. ತಮ್ಮ ಬರವಣಿಗೆಗೆ ಮುಂಚೆ ಅದನ್ನೆಲ್ಲಾ ಕೂಲಂಕಷವಾಗಿ ಅಧ್ಯಯನ ಮಾಡುತ್ತಾರೆ, ನಿಜವಾದ ಇತಿಹಾಸ ಹೀಗೆ ನಡೆದಿರಬಹುದೇ ಎಂದು. ಇತಿಹಾಸಕ್ಕೆ ತಮ್ಮ ಕಲ್ಪನೆ ಸೇರಿಸಿ ಚಿತ್ತಾಕರ್ಷಕವಾಗಿ ಕಥೆ ಹೆಣೆಯುತ್ತಾರೆ. ಪೂರಕ ನಕ್ಷೆ ಒದಗಿಸುತ್ತಾರೆ. ಉಲ್ಲೇಖಗಳನ್ನು ನೀಡುತ್ತಾರೆ. ಫೋಟೋಗಳನ್ನು ಲಗತ್ತಿಸುತ್ತಾರೆ. ಸ್ಥಳೀಯರು ನೀಡುವ ಮಾಹಿತಿಯನ್ನು ಕಲೆಹಾಕುತ್ತಾರೆ. ಅವರ ಕಥನ ಶೈಲಿಗೆ ಇದರಲ್ಲಿರುವ ಮೂರೂ ಕಥೆಗಳು ಸಾಕ್ಷಿ ಒದಗಿಸುತ್ತವೆ.
ಸತತ ಸಂಶೋಧನೆ ಮತ್ತು ಅಧ್ಯಯನದ ಮೂಲಕ ಚರಿತ್ರೆಯನ್ನು ಅನಾವರಣಗೊಳಿಸುವುದರೊಂದಿಗೆ, ಆಧುನಿಕ ತಂತ್ರಜ್ಞಾನ / ಜಾಗತೀಕರಣದ ಭಯಾನಕ ಮುಖಗಳನ್ನು ಜೀವ ವಿಕಾಸದ ವಿವಿಧ ಮಜಲುಗಳನ್ನು ಇಲ್ಲಿ ಪರಿಚಯಿಸಿದ್ದಾರೆ.
'ಶಾಲ ಭಂಜಿಕೆ', 'ಪದ್ಮಪಾಣಿ', 'ನೇಹಲ' ಕಥಾ ಸಂಕಲನಗಳ ಮೂಲಕ ಈಗಾಗಲೇ ಕನ್ನಡ ಓದುಗರಿಗೆ ಪರಿಚಿತರಾಗಿರುವ ಗಣೇಶಯ್ಯನವರು 'ಸಿಗೀರಿಯ' ಮತ್ತು ಇತರ ಕೃತಿಗಳ ಮೂಲಕ ಕನ್ನಡ ಕಥನ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
Share

Subscribe to our emails
Subscribe to our mailing list for insider news, product launches, and more.