Skip to product information
1 of 1

Dr. G. Krishnappa

ಶ್ರೀರಾಮಾಯಣ ದರ್ಶನಂ ಪಾತ್ರಗಳ ಕಥಾವಳಿ

ಶ್ರೀರಾಮಾಯಣ ದರ್ಶನಂ ಪಾತ್ರಗಳ ಕಥಾವಳಿ

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಎಲ್ಲ ಮಹತ್ವದ ಪ್ರಾಚೀನ ಪಠ್ಯಗಳೂ ಕಾಲ ಸರಿದಂತೆ ಸೂತಕಗೊಳ್ಳುತ್ತವೆ, ಮತ್ತಾವುದೋ ಉದ್ದೇಶ, ಹಿತಾಸಕ್ತಿಗಳಿಗೆ ಎರವಾಗುತ್ತಾ ಹೋಗುತ್ತವೆ. ಹಾಗೆಂದು ಅಂತಹ ಪಠ್ಯಗಳನ್ನು ವಿಸರ್ಜಿಸಲಾಗದು. ಅದು ಪ್ರತಿ ಯುಗಧರ್ಮದಲ್ಲೂ ತತ್ಕಾಲೀನ ಮೌಲ್ಯಗಳಿಗೆ ಅನುಗುಣವಾಗಿ ಹೊಸ ಅವತಾರ ಪಡೆಯುತ್ತಿರುತ್ತದೆ. 'ಶ್ರೀರಾಮಾಯಣ ದರ್ಶನಂ' ನಮ್ಮ ಯುಗಕ್ಕೆ ಪ್ರಾಪ್ತಿಯಾಗಿರುವ ಅಂತಹ ಒಂದು ಭಾಗ್ಯವಾಗಿದೆ. ಇದರ ಕೆಲವು ಮಹತ್ವದ ಪಾತ್ರಗಳು ಈ ಕೃತಿಯಲ್ಲಿ ತಿಳಿಗನ್ನಡ ರೂಪದಲ್ಲಿ ಸಿಗುತ್ತಿರುವುದು ಹೊಸಕಾಲದ ಓದುಗರ ಸೌಭಾಗ್ಯವಾಗಿದೆ.

ಕುವೆಂಪು ಅವರ ಎರಡು ಮಹಾಕಾದಂಬರಿಗಳಲ್ಲಿ ಮಲೆನಾಡ ಬದುಕಿನ ವಿರಾಟ್ ದರ್ಶನವಾದರೆ, 'ಮಲೆನಾಡಿನ ಚಿತ್ರಗಳು' ಕಿರುಹೊತ್ತಗೆಯಲ್ಲಿ ಆ ವಿಸ್ತಾರ ಬದುಕಿನ ಒಂದು ಕಿರುನೋಟ ಓದುಗನಿಗೆ ಲಭಿಸುತ್ತದೆ. ಆ ಕಿರುನೋಟವೇ ಅವರ ಮಹತ್ಕಾದಂಬರಿಗಳೊಳಗೆ ಪ್ರವೇಶಿಸಲು ಸಹೃದಯನನ್ನು ಪ್ರೇರೇಪಿಸುತ್ತದೆ. ಅಂತೆಯೇ ಜಿ.ಕೃಷ್ಣಪ್ಪನವರ ಒಂಬತ್ತು ಪಾತ್ರಗಳನ್ನು ಒಳಗೊಂಡ 'ಶ್ರೀರಾಮಾಯಣ ದರ್ಶನಂ ಪಾತ್ರಗಳ ಕಥಾವಳಿ'ಯು ಮಹಾಕಾವ್ಯದ ಒಂದು ಇಣುಕು ನೋಟವನ್ನು ಮತ್ತು ಮಹಾಕಾವ್ಯವನ್ನೋದುವ ಒಂದು ಪ್ರೇರಣೆಯನ್ನು ಓದುಗನಿಗೆ ನೀಡುತ್ತದೆ.

ಟಿ.ಎನ್. ವಾಸುದೇವಮೂರ್ತಿ.

ವಂಶಿ ಪಬ್ಲಿಕೇಷನ್ಸ್.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)