Skip to product information
1 of 2

Ramakrishna Ashrama Mysore

ಶ್ರೀರಾಮಕೃಷ್ಣ ಉಪದೇಶಾಮೃತ

ಶ್ರೀರಾಮಕೃಷ್ಣ ಉಪದೇಶಾಮೃತ

Publisher - ರಾಮಕೃಷ್ಣ ಆಶ್ರಮ ಮೈಸೂರು

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 320

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಇಪ್ಪತ್ತುಕೋಟಿ ಭಾರತೀಯರ ಎರಡು ಸಾವಿರ ವರ್ಷಗಳ ಬಾಳುವೆಯನ್ನು ತಮ್ಮ ಒಂದು ಜೀವನದಲ್ಲಿ ಬಾಳಿದ ಮಹಾಪುರುಷರು ಶ್ರೀರಾಮಕೃಷ್ಣರು. ಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ ಇವರು. ಯಾವುದೋ ಒಂದು ಅಂಶವನ್ನು ಹಿಡಿದು ಇದು ಮಾತ್ರ ಸತ್ಯ, ಉಳಿದವೆಲ್ಲ ಮಿಥ್ಯವೆಂದು ಹೇಳಿದವರಲ್ಲ. ಸತ್ಯದೇಗುಲಕ್ಕೆ ಪಥಗಳು ಅನಂತ ಎಂದು ಸಾರಿದರು.

ಶ್ರೀರಾಮಕೃಷ್ಣರ ಜೀವನ ವೇದವೇದಾಂತಗಳಿಗೆ ಬರೆದಿರುವ ಸಚೇತನ ಭಾಷ್ಯ ಎಂದು ಸ್ವಾಮಿ ವಿವೇಕಾನಂದರು ಸಾರಿದರು. ಶ್ರೀರಾಮಕೃಷ್ಣರು ಗ್ರಂಥ ಬರೆಯುವ ಗೋಜಿಗೇ ಹೋಗಲಿಲ್ಲ. ಬಹಿರಂಗ ಉಪನ್ಯಾಸದ ಹವ್ಯಾಸವೇ ಇರಲಿಲ್ಲ ಇವರಿಗೆ. ಭಗವಂತನ ಸಾಕ್ಷಾತ್ಕಾರವೆಂಬ ತೈಲದಿಂದ ಪ್ರಜ್ವಲಿಸುತ್ತಿದ್ದ ದೀವಿಗೆಯಂತೆ ಇದೆ ಇವರ ಬಾಳು, ಬಂದ ಕೆಲವು ಭಕ್ತರಿಗೆ ಸರಳ ಮಾತಿನಲ್ಲಿ ಉಪದೇಶ ಮಾಡಿದರು. ಆ ಸರಳ ಮಾತು ವೇದ ಉಪನಿಷತ್ತಿಗೆ ಸರಿಸಮನಾಗಿವೆ; ಸಾಕ್ಷಾತ್ಕಾರದ ಅಗ್ನಿಕುಂಡದಿಂದ ಹಾರಿಬಂದ ಕಿಡಿಗಳಂತೆ ಇವೆ. ತಾಕಿದೆದೆಗೆ ಕಾವು ತಕ್ಷಣ ಅರಿವಾಗುವುದು.

View full details

Talk about your brand

Share information about your brand with your customers. Describe a product, make announcements, or welcome customers to your store.