Skip to product information
1 of 2

Source : N. R. Navalekar, Translator : T. N. Vasudevamurthy

ಶ್ರೀರಾಮಚಂದ್ರ

ಶ್ರೀರಾಮಚಂದ್ರ

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 256

Type - Paperback

ಈ ಇಡೀ ಕೃತಿಯು ಕನ್ನಡದಲ್ಲಿಯೇ ರಚಿತವಾಗಿರುವಂತಹುದೋ ಏನೋ ಎನ್ನುವಷ್ಟರ ಮಟ್ಟಿಗೆ ಕೃತಿಯನ್ನು ಕನ್ನಡೀಕರಿಸಿದ್ದಾರೆ ಲೇಖಕರಾದ ಡಾ.ಟಿ.ಎನ್.ವಾಸುದೇವಮೂರ್ತಿಯರು. ಇಂತಹ ಕೃತಿಯನ್ನು ಕನ್ನಡಕ್ಕೆ ಕೊಟ್ಟ ಅವರು ನಿಜಕ್ಕೂ ಅಭಿನಂದನಾರ್ಹರು. ಕೃತಿಯ ಮುಖಪುಟದಲ್ಲಿ ರಾಮನನ್ನು ಪೂಜಿಸುವ ಪ್ರತಿಯೊಬ್ಬರೂ ಓದಬೇಕಾದ ಕೃತಿ ಎನ್ನುವ ಹೇಳಿಕೆಯೊಂದಿದೆ. ರಾಮನನ್ನು ಪೂಜಿಸುವವರು ಮಾತ್ರವಲ್ಲ, ನಿಂದಿಸುವವರೂ ಕೂಡ ಓದಲೇಬೇಕಾದ ಕೃತಿ ಇದು ಎನ್ನುವುದು ನನ್ನ ಅಭಿಪ್ರಾಯ!


ಇದು ಬರೀ ರಾಮ ರಾವಣರ ನಡುವಿನ ಯುದ್ಧವಲ್ಲ ಆರ್ಯ - ಅನಾರ್ಯ ಕುಲಗಳ ಪೈಕಿ ಯಾರು ಈ ಭೂಮಿಯನ್ನು ಆಳಬೇಕು ಎಂಬ ಅನಾದಿಕಾಲದ ವಿವಾದಕ್ಕೆ ಅಂತ್ಯ ಹಾಡುವ ಒಂದು ನಿರ್ಣಾಯಕ ಯುದ್ಧ ಇದಾಗಿದೆ. ಭಾರತೀಯರನ್ನು ಬಹುವಾಗಿ ಆವರಿಸಿರುವ ಕೃತಿ ರಾಮಾಯಣ. ಸುಮಾರು 24,000 ಶ್ಲೋಕವಿರುವ ಈ ಬೃಹತ್ ಕೃತಿ ಕಾಲಕಾಲಕ್ಕೆ ವ್ಯವಸ್ಥಿತವಾಗಿ ತಿರುಚಲ್ಪಟ್ಟಿರುವುದರಲ್ಲಿ ಸಂಶಯವೇ ಇಲ್ಲ. ರಾಮಾಯಣಕ್ಕೆ ಸಂಬಂಧಿಸಿದ ಇತರೆ ಕೃತಿಗಳನ್ನು ಕೂಲಂಕಷವಾಗಿ ಅಭ್ಯಸಿಸಿ, ಪ್ರಕ್ಷೇಪವನ್ನು ಪಕ್ಕಕ್ಕಿಟ್ಟು ವಾಲ್ಮೀಕಿಯೇ ಬರೆದದ್ದು ಎನ್ನಬಹುದಾದ ಸುಮಾರು 8000 ಶ್ಲೋಕಗಳನ್ನು ಮಾತ್ರ ಆಧರಿಸಿ ಎನ್.ಆರ್. ನಾವಲೇಕರ್ ಅವರು ಇಂಗ್ಲಿಷ್ ನಲ್ಲಿ 'A New Approach To The Ramayana' ಎಂದು ಹೊರತಂದ ಕೃತಿಯನ್ನು ಡಾ. ಟಿ.ಎನ್. ವಾಸುದೇವಮೂರ್ತಿ ಅವರು ಆಪ್ತವಾಗಿ ಸರಳವಾಗಿ ಕನ್ನಡೀಕರಿಸಿದ್ದಾರೆ.

– ಸೌಮ್ಯ ಕೋಡೂರು

ಇಷ್ಟುಕಾಲ ಪರಿವಾರ ಸಮೇತ ಕಂಗೊಳಿಸುತ್ತಿದ್ದ ಶ್ರೀರಾಮ ಇಂದು ಬಾಣವನ್ನು ಹೆದೆಗೇರಿಸಿ ಏಕಾಂಗಿಯಾಗಿ ನಿಂತ ಧೀರೋದಾತ್ತ ನಾಯಕನಂತೆ ಪೂಜೆಗೊಳ್ಳುತ್ತಿದ್ದಾನೆ. ಸೌಮ್ಯಮೂರ್ತಿಯಾದ ಶ್ರೀರಾಮನ ಈ ವೀರಾವೇಶದ ನಿಲುವನ್ನು ಹಿಂದೂಧರ್ಮ ಹಿಂಸಾಮಾರ್ಗಕ್ಕೆ ಒಲಿಯಲಾರಂಭಿಸಿದೆ ಎಂದು ವ್ಯಾಖ್ಯಾನಿಸುವವರು ಇಲ್ಲದಿಲ್ಲ. ಆದರೆ ಈ ಕೃತಿ ಆ ಬಗೆಯ ವ್ಯಾಖ್ಯಾನಗಳ ಗೊಡವೆಗೆ ಹೋಗದೇ ರಾಮನ ಏಕಾಂಗಿತನಕ್ಕೆ ತಾತ್ವಿಕ ಸಮರ್ಥನೆಯನ್ನು ನೀಡುತ್ತದೆ; ಮಾತ್ರವಲ್ಲ, ರಾಮನನ್ನು ಪರಿವಾರ ಸಮೇತವಾಗಿ ನೋಡದೇ ಏಕಾಂಗಿಯಾಗಿ ಪರಿಭಾವಿಸಿದಾಗ ಮಾತ್ರ ಅವನ ಕೊಡುಗೆಗಳು ನಮಗರ್ಥವಾಗುತ್ತವೆ ಎಂದು ನಿರೂಪಿಸುತ್ತದೆ. ರಾಷ್ಟ್ರನಿರ್ಮಾಣಕ್ಕೆ ಸಮರ್ಪಿಸಿಕೊಂಡ ಪ್ರತಿಯೊಬ್ಬ ಜನನಾಯಕರೂ ಕೌಟುಂಬಿಕವಾಗಿ ವಿಫಲರಾಗಿರುತ್ತಾರೆ, ವಿಘಟಿತರಾಗಿರುತ್ತಾರೆ ಎಂಬುದು ಈ ಕೃತಿಯ ಪ್ರತಿಪಾದನೆಯಾಗಿದೆ. ಕೌಟುಂಬಿಕ ಮೌಲ್ಯಗಳಿಂದಾಚೆಗೂ ಶ್ರೀರಾಮನ ಹಿರಿಮೆ ವಿಸ್ತರಿಸಿದೆ.

- ಟಿ.ಎನ್. ವಾಸುದೇವಮೂರ್ತಿ


View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)