Skip to product information
1 of 2

T. K. Venugopaladasaru

ಶ್ರೀಮದ್ಭಾಗವತ(12 ಸ್ಕಂಧಗಳು)

ಶ್ರೀಮದ್ಭಾಗವತ(12 ಸ್ಕಂಧಗಳು)

Publisher - ಶ್ರೀನಿಧಿ ಪ್ರಕಾಶನ

Regular price Rs. 330.00
Regular price Rs. 330.00 Sale price Rs. 330.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 474

Type - Hardcover

'ಭಕ್ತ್ಯಾಭಾಗವತಂ ಶಾಸ್ತ್ರಂ' ಮುಕ್ತಿಗೆ ಭಕ್ತಿಯೇ ಕಾರಣವೆಂಬುದು ಆಚಾರ್ಯರ ಸ್ಪಷ್ಟ ನುಡಿ, ಮುಮುಕ್ಷುಗಳಿಗೆಲ್ಲರಿಗೂ ಭಕ್ತಿ ಅತ್ಯಂತ ಅವಶ್ಯಕ, ಭಕ್ತಿಯ ಉದ್ದೀಪನಕ್ಕೆ ಭಾಗವತದಂತಹ ಉತ್ತಮಗ್ರಂಥ ಮತ್ತೊಂದಿಲ್ಲ.

ಪರಮ ಪೂಜ್ಯರಾದ ಹರಿದಾಸರತ್ನಂ, ಹರಿಕಥಾಂಬುಧಿಚಂದ್ರ ಮೊದಲಾದ ಬಿರುದಾಂಕಿತರಾದ ಶ್ರೀ ಟಿ.ಕೆ. ವೇಣುಗೋಪಾಲದಾಸರು ಇಂತಹ ಭಾಗವತವನ್ನು ಮೈಗೂಡಿಸಿಕೊಂಡ ಭಕ್ತಿಯ ಪ್ರತಿಮೂರ್ತಿಗಳು. ಪಂಡಿತೋತ್ತಮರಾದ ಶ್ರೀ ದೊಡ್ಡಬಳ್ಳಾಪುರ ವಾಸುದೇವಾಚಾರ್ಯರಲ್ಲಿ ಸಮಗ್ರ ಭಾಗವತವನ್ನು ಅಧ್ಯಯನ ಮಾಡಿ ಅದನ್ನು ಕೀರ್ತನ ಕಲೆಗೆ ಅಳವಡಿಸಿಕೊಂಡುದು ಶ್ರೀದಾಸರ ಚಾತುರ್ಯ ರಾಮಾಯಣ, ಭಾರತ, ಭಾಗವತಾದಿ ಗ್ರಂಥಗಳನ್ನು ಕೀರ್ತನ ಕಲೆಗೆ ಅಳವಡಿಸಿ ಶೋತೃಗಳ ಮನೋಭಿತ್ತಿಯಲ್ಲಿ ಭಕ್ತಿ ಕಾರಂಜಿಯನ್ನು ಪುಟಿಸಿ ಕೀರ್ತನ ರಂಗಕ್ಕೆ ಆಯಾಮವನ್ನೇ ಸೃಷ್ಟಿಸಿಕೊಟ್ಟ ಕಲಾನಿಪುಣರು. ಭಾಗವತದ ಕಥೋಪಕಥೆಗಳಿಗೆ ದಾಸಸಾಹಿತ್ಯ ಮೆರುಗನ್ನಿತ್ತು ಭಕ್ತಿ ಭಾವವು ಪುಟಿದೇಳುವಂತೆ, ಆ ಭಾವವು ರಸಗಂಗೆಯಾಗಿ ಆನಂದಾಶ್ರುಗಳು ಮೈದಳೆಯುವಂತೆ ಮಾಡುವ ಇವರ ಅದ್ಭುತ ಕಥನ ಕೌಶಲಕ್ಕೆ ಬೆರಗಾಗದವರೇ ಇಲ್ಲ.

''ಸಂತತಂ ಚಿಂತಯೇನಂತಂ" ಎಂಬ ಆಚಾರ್ಯರ ಅಪ್ಪಣೆಯನ್ನು ಜೀವನದ ಉಸಿರನ್ನಾಗಿಸಿಕೊಂಡು ಸದಾ ಭಾಗವತ ಲೇಖನ, ಅಧ್ಯಯನ, ವಾಚನ ಇವುಗಳನ್ನೇ ತಪಸ್ಸನ್ನಾಗಿ ಮೈಗೂಡಿಸಿಕೊಂಡ ಮಹಾನುಭಾವರು ಇವರು.

ಇಂತಹ ಪರಿಪಕ್ವ ಜೀವನಾನುಭವಗಳನ್ನು ಚಿಂತನಶೀಲತೆಗೆ ಅಳವಡಿಸಿ ಪಂಡಿತೋತ್ತಮರನ್ನು ತಲೆದೂಗುವಂತೆ ಮಾಡಿದೆ.

ಈ ಎಲ್ಲ ಅನುಭವಗಳ ಸಾರಸರ್ವಸ್ವವೂ ಈ ಸಂಗ್ರಹರೂಪ ಭಾಗವತದ ಹೊತ್ತಿಗೆಯಲ್ಲಿ ಮೂಡಿಬಂದಿದೆ. ಜೊತೆಗೆ ಸರಳವೂ, ಸರಸವೂ ಆದ ಭಾಷೆಯು ಮುಖ್ಯ ವಿಷಯಕ್ಕೆ ಮುಕ್ತಾಭರಣವಿಟ್ಟಂತಿದೆ. ಇಂತಹ ಭಾಗವತ ಕಥೆ ಭಕ್ತಿ ಗಂಗೆಯ ಉತ್ತುಂಗ ತರಂಗಗಳಲ್ಲಿ ಮಿಂದು ಸಕಲ ಸಜ್ಜನರೂ ಪುನೀತರಾಗುವುದರಲ್ಲಿ ಸಂಶಯವಿಲ್ಲ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)