Dr. K. S. Narayanacharya
ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ದ
ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ದ
Publisher - Sahithya Prakashana
- Free Shipping Above ₹350
- Cash on Delivery (COD) Available*
Pages - 128
Type - Paperback
Couldn't load pickup availability
ಶ್ರೀ ಕೃಷ್ಣಾವತಾರ, ಮುಗಿಯದ ಕಥೆ, ಮಾಗದ, ಮುಪ್ಪಾಗದ ಕಥೆ; ಭಾರತೀಯ ನಾನಾ ಭಾಷೆಗಳಲ್ಲಿ ಕಾವ್ಯ, ನಾಟಕ, ಯಕ್ಷಗಾನ, ಕೀರ್ತನೆ, ಸಣ್ಣಕಥೆ, ಕಾದಂಬರೀ, ನೀಳವಿತೆ, ಭಾವಗೀತೆ, ಚಿತ್ರಪಟದ ನಿರೂಪಣೆಗಳು, ಸಂಕೀರ್ತನೆ-ಶಿಲ್ಪ, ನಾಟ್ಯ, ಸಂಗೀತರೂಪಕ - ಏನೆಲ್ಲಾ ಕಲಾ ಮಾಧ್ಯಮಗಳಲ್ಲಿ ಎಷ್ಟೆಷ್ಟು ರೀತಿಗಳಲ್ಲಿ ಬರುತ್ತಿದ್ದರೂ ಇನ್ನೂ ನೋಡಬೇಕು, ಕೇಳಬೇಕು, ಓದಬೇಕು, ಅರಿಯಬೇಕು, ಸವಿಯಬೇಕು ಎಂಬ ತೃಷೆಯನ್ನುಂಟುಮಾಡುವ ಒಂದು ಚಮತ್ಕಾರ ಅದರ ಹೃದಯದಲ್ಲಿದೆ. ಅದೇ ದಿವ್ಯತೆಯ ರಹಸ್ಯ, ಅರಿತಷ್ಟೂ ಗೂಢ, ಗಾಢ ಹತ್ತಿರ ಸರಿದಷ್ಟೂ ಮಸಕಾಗುವ, ದೂರ ಸರಿದಷ್ಟೂ ಸ್ಪಷ್ಟವಾಗಿ ಕೈ ಬೀಸಿ ಕರೆಯುವ, ಬಿಟ್ಟರೂ ಅಂಟಿಕೊಳ್ಳುವ, ಅಂಟಿಕೊಂಡರೆ ಸಮರ್ಪಣೆ ಕೇಳುವ, ಸಮರ್ಪಿಸಿಕೊಂಡರೆ ನಮ್ಮ ವ್ಯಕ್ತಿತ್ವವನ್ನೇ ಹೀರಿಬಿಡುವ, ಹೀರಿ ನಮ್ಮನ್ನು ಹೊಸದಾಗಿಸುವ, ಹೊಸದಾಗಿ ಜೀವನವನ್ನು ಅರ್ಥೈಸುವ ಶಕ್ತಿ ಕೊಡುವ, ಸದಾ ಕಣ್ಣು ತೆರೆಸುವ ಏನೋ ಒಂದು ಮೋಡಿ, ಈ ಕಥೆಯಲ್ಲಿದೆ.....
ಏನೂ ಬಯಸದೆ ಹಾಗೆ ಸೇವೆ ಮಾಡಿದ ಸುಭಾಷ್, ಸಾವರ್ಕರ್, ಅರವಿಂದ, ವಿವೇಕಾನಂದರಿಗೆಲ್ಲ ಸ್ಫೂರ್ತಿ ಕೊಟ್ಟದ್ದು ಈ ಶ್ರೀಕೃಷ್ಣ ಚರಿತ್ರೆ. ಬಂಕಿಮಚಂದ್ರರು, ತಿಳಕರು, ಮಾಳವೀಯರು, ಪೊತ್ಪಾರ್, ಗೋಯೆಂಕಾ ಮೊದಲಾದ ಮಹನೀಯರೆಲ್ಲ ಈ ಸ್ಪೂರ್ತಿ ಪಡೆದವರೇ.
ಇಂಥವರ ಮಾರ್ಗದರ್ಶನ ಬಿಟ್ಟೇ ಇಂದು ನಾವು ಅಧಃಪಾತದ ರಾಜಕೀಯದಲ್ಲಿ, ಸಾಮಾಜಿಕ ದ್ವೇಷದ ವಿಷದ ಸುಳಿಗಳಲ್ಲಿ, ದಿಕ್ಕೇ ಅರಿಯದ ಅಂಧಕಾಸುರರ ನೇತೃತ್ವದಲ್ಲಿ ಪರಕೀಯರಿಗೆ ರಾಷ್ಟ್ರಸಾರಥ್ಯಸೂತ್ರ ವಹಿಸಿದ್ದೇವೆ! ನಾಚಿಕೆ ಎಂಬ ಭೂಷಣ ಸಾಮಾಜಿಕ ಸ್ತರಗಳಲ್ಲಿ ಎಲ್ಲೂ ಕಾಣಬರುತ್ತಿಲ್ಲ ! ಇಂದು ಎಲ್ಲೆಲ್ಲೂ ಕರ್ಣದುದ್ಯೋಧನ ಶಕುನಿಗಳೇ ಕಾಣುತ್ತಿದ್ದಾರೆ. ಅಂದರೆ ಮತ್ತೆ ಮಹಾಭಾರತ ಯುದ್ಧಕಾದಿದೆ!.
ಶ್ರೀಕೃಷ್ಣ ಮತ್ತೆ ನಮಗೆ ಸ್ಫೂರ್ತಿಯೀಯಲಿ !
Share

Subscribe to our emails
Subscribe to our mailing list for insider news, product launches, and more.