1
/
of
1
Sapna Book House
ಯುಗಯಾತ್ರೀ ಶ್ರವಣಬೆಳಗೊಳ
ಯುಗಯಾತ್ರೀ ಶ್ರವಣಬೆಳಗೊಳ
Publisher - ಸಪ್ನ ಬುಕ್ ಹೌಸ್
Regular price
Rs. 650.00
Regular price
Rs. 650.00
Sale price
Rs. 650.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ವಿಚಾರಪಟ್ಟ ಕ್ಷುಲ್ಲಕದೀಕ್ಷೆ ಕೈಗೊಂಡುದು12-12-1969ರಂದು. 12-12-2019ನೆಯ ತೇದಿಗೆ 50 ವರ್ಷ. ಪೂಜ್ಯಶ್ರೀಗಳು ಸಂಸಾರದಿಂದ ಸನ್ಯಾಸಮಾರ್ಗಕ್ಕೆ ಹೊರಳು ದಾರಿಯಲ್ಲಿ ಬಂದು ನಿಂತ ಸ್ಥಿತ್ಯಂತರದ ಸುವರ್ಣ ಮಹೋತ್ಸವವನ್ನು ಸ್ಮರಣೀಯವಾಗಿಸುವ ಪ್ರಯತ್ನದ ಫಲವಾಗಿ ಮೈತಳೆದರು ಈ ಯುಗಯಾತ್ರಿ ಶ್ರವಣಬೆಳಗೊಳ ಸಂಭಾವನ ಗ್ರಂಥ. ವಿಶ್ವವಿಖ್ಯಾತ ಬಾಹುಬಲಿಯ ಬೃಹನ್ಮೂರ್ತಿಗೆ ಅವಿಸ್ಮರಣೀಯ ಮಹಾಮಸ್ತಕಾಭಿಷೇಕವಸಗಿ ಶ್ರವಣಬೆಳಗೊಳವನ್ನು ಜಗತ್ತಿನ ಭೂಪಟದಲ್ಲಿ ಹೊಳೆಯುವಂತೆ ಮಾಡಿದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರಿಗೆ ಇದು ಗೌರವ ನಮನ, ಯುಗಪುರುಷರೆನಸಿರುವ 'ಚಾರುಶ್ರೀ'ಗಳಿಗೆ ಯುಗಯಾತ್ರೀ ಶ್ರವಣಬೆಳಗೊಳ ಅಕ್ಷರಾಭಿಷೇಕ.
ಶ್ರವಣಬೆಳಗೊಳದ ಹಾಸು ಬೀಸು ಕುರಿತು ಏನು ಹೇಳಿದರೂ ಇನ್ನೂ ತುಸು ಉಳಿದೇ ಇರುತ್ತದೆ. ಬೆಳಗೊಳದಲ್ಲಿ ಕಲ್ಲು ಬಂಡೆಗಳೂ ಮಾತಾಡುತ್ತವೆ. ಅಡಿಯಿಟ್ಟ ಕಡೆ ಅಕ್ಕರಗಳು ಉಲಿಯುತ್ತವೆ. ಸುಳಿದ ಗಾಳಿಯಲ್ಲೂ ಶಾಸನಗಳು ತೇಲಾಡುತ್ತ ಋಷಿಮುನಿ ಕಂತಿಯರ, ರಾಜರಾಣಿ ಸಚಿವ ಸೇನಾನಿಗಳ ಯಶೋಗಾಥೆಯನ್ನು ನಿನದಿಸುತ್ತವೆ. ಬೆಳುಗೊಳ ಒದಗಿಸಿರುವ ಸಾವಿರಾರು ವರ್ಷಗಳ ಸಾಮಗ್ರಿಯನ್ನೂ ಮಹತ್ವವನ್ನೂ ಕುರಿತು ಕಳೆದ ನೂರಾರು ವರ್ಷಗಳಲ್ಲಿ ಅಚ್ಚಾಗಿರುವ ಬಹುಮಟ್ಟಿನ ಲೇಖನಗಳನ್ನು ಇಲ್ಲಿ ಅಳವಡಿಸಿದೆ.
ಶ್ರವಣಬೆಳಗೊಳ ಭಾರತದ, ಅದರಲ್ಲಿಯೂ ದಕ್ಷಿಣ ಭಾರತದ, ಇನ್ನೂ ವಿಶೇಷವಾಗಿ ಕರ್ನಾಟಕದ ಇತಿಹಾಸ, ಧರ್ಮ, ಸಂಸ್ಕೃತಿ, ವಾಸ್ತುಶಿಲ್ಪ, ಶಾಸನ, ಲಿಪಿಶಾಸ್ತ್ರ, ಸಾಹಿತ್ಯ ಕುರಿತ ಮಾಹಿತಿಗಳ ತಲಕಾವೇರಿ. ಸಾವಿರಾರು ವರ್ಷಗಳ ನಿರಂತರ ಚರಿತ್ರೆಯ ಆಯಾಮ, ಅನನ್ಯತೆ ಕುರಿತು ಕೃತಿಗಳೂ ಬಿಡಿಬಿಡಿ ಬರೆಹಗಳೂ ಕನ್ನಡ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ಹೊರಬಂದಿವೆ. ಕೆಲವು ಅಮೂಲ್ಯ ಲೇಖನಗಳು ನಾನಾ ಪುಸ್ತಕಗಳಲ್ಲಿ, ಸಂಪುಟಗಳಲ್ಲಿ, ನಿಯತ ಕಾಲಿಕೆಗಳಲ್ಲಿ ಚದರಿ ಹೋಗಿವೆ. ಆಸಕ್ತ ಅಭ್ಯಾಸಿಗಳ ಓದಿಗೆ ಇಂತಹ ಅಲಭ್ಯ ಹಾಗೂ ಅಪರೂಪದ ಬರೆಹಗಳು ಇಲ್ಲಿ ಸುಲಭವಾಗಿ ಸಿಗುತ್ತವೆ.

Share

Subscribe to our emails
Subscribe to our mailing list for insider news, product launches, and more.