Prof. G. S. Siddharamaiah
Publisher -
- Free Shipping
- Cash on Delivery (COD) Available
Couldn't load pickup availability
ಸನದಿಯವರು ಕನ್ನಡದ ಪಿಸುದನಿಯ ಕವಿ. ಅಬ್ಬರದಲ್ಲಿ ಮೆರೆದವರಲ್ಲ; ತನ್ನ ದನಿಯೇ ಮಿಗಿಲೆಂದು ಹಾರಾಡಿದವರಲ್ಲ. ಬರೆಯಬೇಕಾದ ಒಳಗಿನೊತ್ತಡದಲ್ಲಿ ಬರೆಯಲೇಬೇಕಾದ್ದನ್ನು ಬರೆಯುತ್ತಾ ಬಂದವರು. ತಾವು ನಂಬಿದ ಮಾನವತಾವಾದದಲ್ಲಿ ಇಂದಿಗೂ ನಂಬಿಕೆ ಕಳೆದುಕೊಳ್ಳದೆ ಬದ್ಧತೆಯಲ್ಲಿ ಬದುಕು ಕಟ್ಟಿಕೊಂಡವರು. ಆ ಯಾನ ಸುದೀರ್ಘವಾದಷ್ಟೇ ವೈವಿಧ್ಯ ಪೂರ್ಣವೂ ಆಗಿದೆ.
ಬೌದ್ಧಿಕ ಠೇಂಕಾರವಾಗಲಿ ಭಾವುಕ ಉನ್ಮಾದವಾಗಲಿ ಇವರಿಗೆ ಸಲ್ಲದವುಗಳು. ಒಳಗನ್ನು ನಿರೀಕ್ಷಿಸುತ್ತಾ ಹೊರಗನ್ನು ಅರಿಯುವ ಪರಿ ಇವರ ಕಾವ್ಯದ ದನಿಯಾಗಿದೆ. ಅಸಹನೆಯಲ್ಲಿ ಆರೋಪಿಸುವುದಕ್ಕಿಂತ ವಿಷಾದದಲ್ಲಿ ಆಪ್ತತೆಗಳನ್ನು ಅವುಗಳ ಸಂಬಂಧ ಸೂಕ್ಷ್ಮಗಳನ್ನು ವಿಶ್ಲೇಷಿಸುವ ಮನೋಧರ್ಮ ಇವರ ಕಾವ್ಯಧರ್ಮ, ದುರಾಸೆಯ ಸ್ವಾರ್ಥದಲ್ಲಿ ಭೂಖಂಡದ ಬದುಕನ್ನು ನರಕವಾಗಿಸುತ್ತಿರುವ ಸಾಮ್ರಾಜ್ಯಶಾಹಿ ಮನಸ್ಸುಗಳಿಗೆ ಸನದಿಯವರ ಕಾವ್ಯ ನೀಡುವ ಲೋಕದೃಷ್ಟಿ ವಿಹಿತ ಪ್ರಜ್ಞೆಯ ವಿವೇಕದ ನಡೆಯ ನೋಟವಾಗಿದೆ.
