K. V. Iyer
ಶಾಂತಲಾ
ಶಾಂತಲಾ
Publisher -
- Free Shipping Above ₹400
- Cash on Delivery (COD) Available*
Pages - 360
Type - Paperback
Couldn't load pickup availability
ಶಾಂತಲಾ
ಹೊಯಿಸಳೇಶ್ವರ ಶ್ರೀ ವಿಷ್ಣುವರ್ಧನನ ಕಾಂತೆ, ಹಿರಿಯರಸಿ, ಪಟ್ಟಮಹಾದೇವಿ.
ಬೇಲೂರಿನಲ್ಲಿ ವಿಜಯನಾರಾಯಣದೇವರನ್ನು ಶ್ರೀ ವಿಷ್ಣು ಪ್ರತಿಷ್ಠೆ ಮಾಡಿಸಿದ ಹತ್ತಿರದಲ್ಲಿಯೆ ಶಾಂತಲಾದೇವಿ ಚೆನ್ನಕೇಶವ ದೇವರನ್ನು ಪ್ರತಿಷ್ಠೆ ಮಾಡಿಸಿದ್ದಾಳೆ.
ವಿಜಯನಾರಾಯಣನ ದೇವಾಲಯದ ಪೂರ್ವದ್ವಾರದ ಬಲಗಡೆ ಶಾಂತಲಾದೇವಿ, ಶ್ರೀ ವಿಷ್ಣುವಿನ ಸಭೆಯಲ್ಲಿ ಪತಿಯ ವಾಮಭಾಗದಲ್ಲಿ ಮಂಡಿಸಿರುವ ಹಾಗೆ ಶಿಲೆಯಲ್ಲಿ ಕೆತ್ತನೆಯ ಕೆಲಸವಿದೆ.
ಅದೇ ದೇವಾಲಯದ ನವರಂಗದಲ್ಲಿ, ನೈಋತ್ಯದ ಕಂಬದ ತುದಿಯ 'ನೃತ್ಯ ಸರಸ್ವತಿ' ಎಂಬ ಮದನಿಕಾ ವಿಗ್ರಹವು ಶಾಂತಲಾದೇವಿಯ ಪ್ರತಿಬಿಂಬವೆಂದು ಪ್ರತೀತಿ.
ಶಾಂತಲಾದೇವಿ ತನ್ನ ಧರ್ಮಗುರುಗಳ ಹೆಸರಿನಲ್ಲಿ ತನ್ನ ಇಷ್ಟದೈವವಾದ ಶಾಂತಿಜಿನನ ಪ್ರತಿಬಿಂಬವನ್ನು ಶ್ರವಣಬೆಳ್ಗೊಳದ ಚಂದ್ರಗಿರಿಯ ಮೇಲೆ ಪ್ರತಿಷ್ಠೆ ಮಾಡಿಸಿದ್ದಾಳೆ.
ಹಳೆಯಬೀಡಿನ ಹೊಯಿಸಳೇಶ್ವರ-ಶಾಂತಳೇಶ್ವರ ಬೃಹತ್ ದೇವಾಲಯವು ಈ ರಾಜದಂಪತಿಗಳ ಅನ್ನೋನ್ಯತೆಯ ನೆನಪಿಗಾಗಿ ಕೇತಮಲ್ಲನಾಯಕನು ಕಟ್ಟಿಸಿದ್ದು.
ಸಕಲಮಂಗಳ ಲಕ್ಷಣೆವಂತೆಯಾದ ಶಾಂತಲಾದೇವಿಯ ಗುಣಾವಳಿಗಳನ್ನು ಹಾಸನ, ಬೇಲೂರು, ಶ್ರವಣಬೆಳ್ಗೊಳಗಳ ಶಾಸನಗಳು ಮುಕ್ತಕಂಪದಿಂದ ಕೊಂಡಾಡುತ್ತವೆ.
ಕರ್ನಾಟಕದ ಶಿಲ್ಪದಲ್ಲೂ ಶಾಸನಗಳಲ್ಲೂ ಹೀಗೆ ನೆನಪಾಗಿಸುವ ಶಾಂತಲಾದೇವಿಯ ಶಾಶ್ವತವಾದ ಹೆಸರು ಈ ಕೃತಿಯಲ್ಲಿ ಹೂವಾಗಿ ಪರಿಮಳಿಸಿ, ಹಣ್ಣಾಗಿ ರಸತುಂಬಿ, ಶಾಂತಲೆಯ ಭಗವಂತನ ಪಾದಗಳಲ್ಲಿ ಭಕ್ತಿಯಿಂದ ಸಮರ್ಪಿತವಾಗಿದೆ.
ವಿಷ್ಣುವರ್ಧನನ ಕಾಲದ ವೀರಜೀವನವೂ ದೈವಭಕ್ತಿಯೂ ಸಕಲಸಮಯ ಸಮಾನ ಗೌರವವೂ ಕಲಾಪ್ರೇಮಗಳೂ ಈ ರಚನೆಯಲ್ಲಿ ಪುನರ್ಜನ್ಯವನ್ನು ಪಡೆದು ಬಂದಿದೆ.
ಹೊಯಿಸಳೇಶ್ವರನ ಸಾಮ್ರಾಜ್ಯ ಸಂಸಾರದ ಏರು ತಗ್ಗುಗಳ ಕಾಂಡಪಟದ ಮೇಲೆ ರಾಜಮಾತೆಯ, ರಾಜಪತ್ನಿಯ ಗೃಹಜೀವನದ ಸಂಕಟ-ಸಮ್ಯಗಳೂ ಸುಖ-ದುಃಖಗಳೂ ಆಶೆ ನಿರಾಶೆಗಳೂ ಇಲ್ಲಿ ಬಣ್ಣ ಬಣ್ಣವಾಗಿ ಚಿತ್ರಿತವಾಗಿದೆ.
ತಾಯಿ-ಮಕ್ಕಳ, ಅರಸು-ಮಂತ್ರಿಗಳ, ರಾಜ-ಮಂತ್ರಿಗಳ, ಪತಿ-ಪತ್ನಿಯರ, ಪತ್ನಿ-ಸಪತ್ನಿಯರ, ಸಹೋದರರಲ್ಲದಿದ್ದರೂ, ಸೋದರಿಕೆಯನ್ನು ಆದರ್ಶವಾಗಿ ಸಾಧಿಸಿದವರ, ಸ್ವರ್ಗ-ಮರ್ತ್ಯಗಳ ಸಂಬಂಧದ ಸೊಗಸನ್ನು ಈ 'ಶಾಂತಲಾ' ಆಚ್ಚುಕಟ್ಟಾಗಿ ತನ್ನಲ್ಲಿ ಅಡಕಮಾಡಿಕೊಂಡಿದೆ.
ತಂದೆಯಾದ ಮಾರಸಿಂಗಮಯ್ಯ ತಮ್ಮ ಮುದ್ದುಮಗಳಾದ ಶಾಂತಲೆಯ ನೆನಪಿಗೆ ಅಕ್ಷರರೂಪದ ಒಂದು ಮಸ್ತಿಕಲ್ಲನ್ನು ಸ್ಥಾಪಿಸಿದ್ದುದಾದರೆ, ಅದು ಈ 'ಶಾಂತಲಾ' ರೂಪದಲ್ಲಿ ಇದ್ದಿರಬಹುದು ಎನ್ನಿಸುತ್ತದೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.