Alex. M. George, Aman Madan
ಶಾಲೆಗಳಲ್ಲಿ ಸಮಾಜ ವಿಜ್ಞಾನ ಬೋಧನೆ
ಶಾಲೆಗಳಲ್ಲಿ ಸಮಾಜ ವಿಜ್ಞಾನ ಬೋಧನೆ
Publisher -
- Free Shipping Above ₹300
- Cash on Delivery (COD) Available
Pages - 144
Type - Paperback
Couldn't load pickup availability
ಶಾಲೆಗಳಲ್ಲಿ ಸಮಾಜ ವಿಜ್ಞಾನದ ಬೋಧನೆ ಕೃತಿಯು ಎನ್‌ಸಿಇಆರ್‌ಟಿ ಭಾರತೀಯ ಶಾಲೆಗಳಲ್ಲಿ ಸಾಮಾಜಿಕ ವಿಜ್ಞಾನವನ್ನು ಕಲಿಸುವ ಹೊಸ ವಿಧಾನದ ಪಠ್ಯಪುಸ್ತಕವನ್ನು ಪರಿಚಯಿಸಿದ ಸಂದರ್ಭದಲ್ಲಿ ಈ ಬೋಧನಾ ವಿಧಾನದ ಹಿಂದಿರುವ ವಿವೇಚನೆಯನ್ನು ಪರಿಶೀಲಿಸಲು ಮತ್ತು ವಿವರಿಸಲು ಇಂಗ್ಲಿಷ್‌ನಲ್ಲಿ ರಚಿಸಿದ್ದಾಗಿದೆ. ಈ ಪುಸ್ತಕವನ್ನು ಶಿಕ್ಷಣ ಕ್ಷೇತ್ರದ ಪ್ರಮುಖ ಭಾಗೀದಾರರಾದ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರ ಕಾಳಜಿಗಳನ್ನು ಉದ್ದೇಶಿಸಿ ಚರ್ಚಿಸುವ ರೀತಿಯಲ್ಲಿ ಕ್ರಮವಾಗಿ ವಿಂಗಡಿಸಿ ಸಂಯೋಜಿಸಲಾಗಿದೆ.
ಈ ಕೃತಿಗೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕದಾಚೆಗೆ ಬೌದ್ಧಿಕ ಸ್ವಾತಂತ್ರ್ಯ, ವಿಮರ್ಶಾತ್ಮಕ ಚಿಂತನೆ, ಸಮಾಜಮುಖಿ ವಿಚಾರಗಳು ಪಠ್ಯಪುಸ್ತಕದ ಕೇಂದ್ರದಲ್ಲಿರಬೇಕಾದ ಅಗತ್ಯವನ್ನು ಒತ್ತಿಹೇಳುವ ವಿಸ್ತ್ರತವಾದ ಉದ್ದೇಶವೂ ಇದೆ. ಸಮಾಜ ವಿಜ್ಞಾನದ ಪಠ್ಯಪುಸ್ತಕಗಳು ಒಂದಿಲ್ಲೊಂದು ಶಿಕ್ಷಣೇತರ ಉದ್ದೇಶಗಳಿಗೆ ವಿವಾದಕ್ಕೊಳಗಾಗುತ್ತಿರುವ ಸನ್ನಿವೇಶದಲ್ಲಿ, ಈ ಪುಸ್ತಕವು ಶಿಕ್ಷಣ ಕ್ಷೇತ್ರದ ಭಾಗೀದಾರರೆಲ್ಲರೂ ಗಮನಿಸಬೇಕಾದ ಅಂಶಗಳನ್ನು ಚರ್ಚೆಗೆ ಮುಂದಿಡುತ್ತದೆ. ಹೊಸ ರೀತಿಯಲ್ಲಿ ಸಮಾಜ ವಿಜ್ಞಾನದ ಪಠ್ಯಪುಸ್ತಕಗಳನ್ನು ರೂಪಿಸಬೇಕಾದ ಅಗತ್ಯವನ್ನು ಚರ್ಚಿಸುತ್ತದೆ. ಇಂತಹ ವಿಚಾರಗಳು ಪಠ್ಯಪುಸ್ತಕದ ರಚನೆಯ ಚರ್ಚೆಗಳಿಗೆ ಸೂಕ್ತ ದಿಕ್ಕನ್ನು ನೀಡಬಲ್ಲದು ಮತ್ತು ಚರ್ಚೆಯನ್ನು ಮತ್ತೆ ಶೈಕ್ಷಣಿಕ ಅಗತ್ಯಗಳ ಚೌಕಟ್ಟಿಗೆ ತರಬಲ್ಲದು ಎನ್ನುವ ಆಶಯ ಈ ಪುಸ್ತಕದ್ದು....
Share


Subscribe to our emails
Subscribe to our mailing list for insider news, product launches, and more.