Dr. D. L. Narasimhachar
Publisher -
Regular price
Rs. 200.00
Regular price
Sale price
Rs. 200.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಪ್ರಸಿದ್ಧ ಕವಿಗಳೂ ಪಂಡಿತರೂ ಆಗಿದ್ದವರ ಮನೆತನದಲ್ಲಿ ಹುಟ್ಟಿದವನು ಕೇಶಿರಾಜ. ಇವರ ನಡುವೆ ಬೆಳೆದು ಕಲಿತು ಕೇಶಿರಾಜನು ಕವಿಯೂ ಪಂಡಿತನೂ ಆದನು. ಅವನ ಸಹೃದಯತೆಯೂ ಅಭಿರುಚಿಯೂ ಅವನು ಕೊಟ್ಟಿರುವ ಪ್ರಯೋಗಗಳಲ್ಲಿ ಚೆನ್ನಾಗಿ ಮೈಗೊಂಡಿವೆ. ಇವು ಅವನ ಭಾವುಕತನವನ್ನೂ ರುಚಿಸಂಸ್ಕಾರದ ಉನ್ನತಿಯನ್ನೂ ತೋರಿಸುತ್ತವೆ. ಇಂಥ ಪ್ರಯೋಗಗಳು ವ್ಯಾಕರಣದ ಅಭ್ಯಾಸಕ್ಕೂ ರಸದ ಲೇಪವನ್ನು ಬಳಿಯುತ್ತವೆ. ಈ ಕವಿಮನಕ್ಕಿಂತ ಕೇಶಿರಾಜನ ಶಾಸ್ತ್ರಿಮನ ಹೆಚ್ಚು ಪ್ರಶಂಸನೀಯ. ನಿರಾಧಾರವಾಗಿ ಏನನ್ನೂ ಹೇಳದೆ ಪ್ರಯೋಗ ಬಲವನ್ನು ಅವಲಂಬಿಸಿರುವ ಶಾಸ್ತ್ರಪ್ರಜ್ಞೆ ಪ್ರಾಮಾಣಿಕತೆಗಳು, ಸಂದೇಹ ಬಂದಲ್ಲಿ ಹಾಗೆಂದು ಒಪ್ಪುವುದು, ವಿಷಯವನ್ನು ನಿರ್ಣಾಯಕವಾಗಿ ಹೇಳಲಾಗದಿದ್ದಾಗ ತೋರುವ ತಾಟಸ್ಥ್ಯ, ತನಗೆ ಒಪ್ಪಿಗೆಯಲ್ಲದಿರುವುದನ್ನು ಕಂಠೋಕ್ತವಾಗಿ ನಿಷೇಧಿಸುವುದು, ಗುಣದೋಷಗಳೆರಡಕ್ಕೂ ಒಬ್ಬನೇ ಕವಿಯ ಪ್ರಯೋಗಗಳನ್ನು ಕೊಡುವುದರಲ್ಲಿ ಕಾಣಿಸಿರುವ ನಿಷ್ಪಕ್ಷಪಾತ ದೃಷ್ಟಿ, ಆತ್ಮವಂಚನೆ ಪರವಂಚನೆ ಅಭಾವ ಇವೆಲ್ಲ ಕೇಶಿರಾಜನ ವೈಜ್ಞಾನಿಕ ಮನೋಧರ್ಮವನ್ನು ತೋರಿಸುತ್ತವೆ. ಆದ್ದರಿಂದ 'ಶಬ್ದಮಣಿದರ್ಪಣಂ' ಕಾವ್ಯವೂ ಹೌದು, ಶಾಸ್ತ್ರವೂ ಹೌದು, ಕಾವ್ಯ ಲೇಪವನ್ನು ಪಡೆದಿರುವ ಶಾಸ್ತ್ರವೆಂದರೂ ಸರಿಯೇ. ಕೇಶಿರಾಜನ ಮನಃ ಕ್ರೀಡೆ ಅದರಲ್ಲಿ ರಮ್ಯವಾಗಿ ರೂಪುಗೊಂಡಿದೆ.
–ಡಿ. ಎಲ್. ನರಸಿಂಹಾಚಾರ್
(ಪ್ರಸ್ತಾವನೆಯಿಂದ)
ಡಿ.ವಿ.ಕೆ. ಮೂರ್ತಿ ಪ್ರಕಾಶನ :: ಮೈಸೂರು
–ಡಿ. ಎಲ್. ನರಸಿಂಹಾಚಾರ್
(ಪ್ರಸ್ತಾವನೆಯಿಂದ)
ಡಿ.ವಿ.ಕೆ. ಮೂರ್ತಿ ಪ್ರಕಾಶನ :: ಮೈಸೂರು
