Bedre Manjunath
Publisher - ನವಕರ್ನಾಟಕ ಪ್ರಕಾಶನ
- Free Shipping
- Cash on Delivery (COD) Available
Pages -
Type -
Couldn't load pickup availability
ಯಾವುದೇ ಶಾಲೆಯ ಮಾದರಿ ದಿನಚರಿಯಂತೆ ರಚಿತವಾಗಿರುವ ಈ 'ಸ್ಕೂಲ್ ಡೈರಿ' ಪಾಠಗಳಲ್ಲಿ ಕಾಣಿಸದ ಎಷ್ಟೋ ಹೊಸ ವಿಷಯಗಳನ್ನು ಪರಿಚಯ ಮಾಡಿಸುತ್ತದೆ. ಆಟ-ಪಾಠಗಳ ಜೊತೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಘಟನೆಗಳ ಸಂಕ್ಷಿಪ್ತ ಪರಿಚಯ ನೀಡುವ ಮೂಲಕ ಮಕ್ಕಳ ಅರಿವಿನ ಎಲ್ಲೆಯನ್ನು ವಿಸ್ತರಿಸುವುದಕ್ಕೆ ಸಹಾಯವಾಗುವಂತೆ ಈ ಡೈರಿಯನ್ನು ರಚಿಸಲಾಗಿದೆ. ಶಾಲೆಯ ಚಟುವಟಿಕೆಯೊಂದಿಗೆ ನಮ್ಮ ನಾಡಿನ ಪ್ರಮುಖ ದಿನಾಚರಣೆ, ಪ್ರಮುಖರ ಜನ್ಮದಿನಗಳ ಮಾಹಿತಿ ಇದರಲ್ಲಿದೆ. ಬುದ್ಧಿಮತ್ತೆ (ಐ.ಕ್ಯು.), ಶೈಕ್ಷಣಿಕ ಡೆಕಾಥಾನ್, ಮೇಧಾವಿಗಳ ಪರಿಷತ್ತು - ಮೆನ್ಸಾ, ವೆಬ್‌ಸೈಟ್, ವಿದ್ಯುನ್ಮಾನ ಪುಸ್ತಕ (ಇ-ಬುಕ್), ಭಾಷಾ ಕಲಿಕೆ ಮತ್ತು ವ್ಯಕ್ತಿತ್ವ ವಿಕಾಸ ಕುರಿತ ಮಾಹಿತಿ ಲೇಖನಗಳು ಅನುಬಂಧದಲ್ಲಿದ್ದರೆ ವ್ಯಕ್ತಿಚಿತ್ರಗಳ ವಿಭಾಗದಲ್ಲಿ ಜೋಸೆಫ್ ಪುಲಿಟ್ಟರ್, ಪಂಡಿತ ರಾಹುಲ ಸಾಂಕೃತ್ಯಾಯನ ಮತ್ತು ಯುಗದ ಕವಿ, ಜಗದ ಕವಿ, ಕುವೆಂಪು ಅವರ ಜೀವನಚಿತ್ರೆಗಳಿವೆ. ಇದೀಗ ಹೊಸದಾಗಿ ಇ-ಜೈನ್, ಇ-ಲರ್ನಿಂಗ್, ಡಿಜಿಟಲ್ ಅಸಿಸ್ಟೆಂಟ್ಸ್ ಸೇರ್ಪಡೆಗೊಂಡಿವೆ.
ಶಾಲಾ ಕಾಲೇಜುಗಳ ಗ್ರಂಥಾಲಯ ಮಾತ್ರವಲ್ಲದೇ ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕ, ಶಿಕ್ಷಣ ಅಧಿಕಾರಿ, ಶಿಕ್ಷಣ ಚಿಂತಕರ ಬಳಿ ಅಗತ್ಯವಾಗಿ ಇರಲೇಬೇಕಾದ ಈ 'ಸ್ಕೂಲ್ ಡೈರಿ' ಡಿ.ಇಡಿ., ಬಿ.ಇಡಿ., ಎಂ.ಇಡಿ. ತರಗತಿಗಳಿಗೆ ಪೂರಕ ಮಾಹಿತಿ ಒದಗಿಸುವ ಆಕರ ಗ್ರಂಥವಾಗಿ ರಾಜ್ಯದೆಲ್ಲೆಡೆ ಬಳಕೆಯಾಗುತ್ತಿದೆ. ಸರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಮಾಹಿತಿ ಸಾಹಿತ್ಯ ಕೈಪಿಡಿ ಇದು, ಸಂತಸ ಕಲಿಕೆಯ ದಾಖಲೆ ಇದು.
