K. Satyanarayana
ಸಾವಿನ ದಶಾವತಾರ
ಸಾವಿನ ದಶಾವತಾರ
Publisher - ಅಭಿನವ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 175
Type - Paperback
Couldn't load pickup availability
ಕೆ. ಸತ್ಯನಾರಾಯಣರ ಸಾವಿನ ದಶಾವತಾರ ಒಬ್ಬ ಭಿನ್ನಮತೀಯ ಕಾದಂಬರಿಕಾರನ ಕೃತಿ. ಕನ್ನಡದ ಮಟ್ಟಿಗಂತೂ ಒಂದು ಹೊಸ ಕಾದಂಬರಿಯ ಮೀಮಾಂಸೆಯನ್ನು ಮಾಡುತ್ತಿದೆ.
ಕತೆಯ ವ್ಯಾಕರಣ ಬೇರೆ. ಸಾಮಾಜಿಕ ವಾಸ್ತವದ ವಿವರಣಾ ರೂಪಿಯಾದ ವ್ಯಾಖ್ಯಾನವೂ ಬೇರೆ ಎಂಬುದು ಇದರ 'ಭಿನ್ನಮತ'. ಅದಕ್ಕಾಗಿ ಇವರು ಒಂದು ಹೊಸ ಪ್ರಕಾರದ, ರಿಪ್ಲೆಕ್ಟಿವ್ ಆದ, ಚಿಕಿತ್ಸಕವಾದ ನಿರೂಪಣೆಯ ಕ್ರಮವನ್ನು ಕಟ್ಟಲು ಹೊರಟಿದ್ದಾರೆ.
ಸತ್ಯನಾರಾಯಣರ ಮೀಮಾಂಸೆಯ ಕ್ರಮ ಇದು. ಕತೆಯ ವಿನ್ಯಾಸವನ್ನು ಬಿಟ್ಟು ಮಾತುಕತೆಯ ವಿನ್ಯಾಸವನ್ನು ನೆಚ್ಚಿಕೊಂಡಿರುವಂಥದ್ದು.
ಈ ಕಾದಂಬರಿ ಕತೆಯ ಹಂಗನ್ನು ಬಿಟ್ಟಿರುವಂಥದ್ದು. ಕೃತಿಯ ವಸ್ತು ವಿಷಯವೂ ಕೂಡ ಕತೆಯ ಮಿತಿಯನ್ನು ತೋರಿಸುವ ಸಾವೇ. ಇದನ್ನು ಓದುವಾಗ ನನಗೆ ನೆನಪಾದದ್ದು ವಡ್ಡಾರಾಧನೆ. ನಿರೂಪಕ ತನ್ನ ಜೀವನದ ಬಗ್ಗೆ ಹೇಳಿಕೊಳ್ಳುವ ವಿಚಾರಗಳನ್ನು ಒಂದರ ನಂತರ ಒಂದನ್ನು ಜೋಡಿಸಿ ನೋಡಿದಾಗ ಅವನ ಜೀವನವನ್ನು ನಾವೇ ಚಿಕಿತ್ಸಕವಾಗಿ ನೋಡಲು ಸಾಧ್ಯವಾಗುತ್ತದೆ. ಕಾದಂಬರಿಯ ನಿಜವಾದ ಕಸುಬುಗಾರಿಕೆ ಇರುವುದು ಇಲ್ಲಿ.
ಕಾದಂಬರಿಯ ಸತ್ವ ಇರುವುದು ಒಂದು ಗಡುಸಾದ, ಅನುಭವ ನಿಷ್ಠವಾದ, ಸಹಜ ದನಿಯಲ್ಲಿ. ಅದರಲ್ಲಿ ಒಂದು ಗಹನವಾದ ವಿಷಣ್ಣತೆ ಇದೆ. ಆದರೆ ಅದು ಸೆಂಟಿಮೆಂಟಲ್ ಆದದ್ದಲ್ಲ.
ಸತ್ಯನಾರಾಯಣರಲ್ಲಿ ಕಾಣುವ ಒಂದು ಅಂಶವೆಂದರೆ ಫಿಲಾಸಫಿಕಲ್ ಸೆಂಟಿಮೆಂಟಲಿಸ್ಟ್ ಆದ ಧ್ವನಿಯ ಗೈರುಹಾಜರಿ ವಿ. ಎಸ್. ನೈಪಾಲರಂತಹ ಬರಹಗಾರರಿಗೆ ಸಿದ್ದಿಸಿದ ಧ್ವನಿ ಅದು.
ಎ. ಪಿ. ಅಶ್ವಿನ್ ಕುಮಾರ್
ಸೀನಿಯರ್ ಫೆಲೋ, ಅಹಮದಾಬಾದ್ ವಿಶ್ವವಿದ್ಯಾನಿಲಯ
Share
Subscribe to our emails
Subscribe to our mailing list for insider news, product launches, and more.