Skip to product information
1 of 2

Tukurama B Jadhav

ಸತ್ಯ ದರ್ಶನ

ಸತ್ಯ ದರ್ಶನ

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 110

Type - Paperback

Gift Wrap
Gift Wrap Rs. 15.00

ವಿಶ್ವಸಂತ, ಭಗವಾನ್ ಬುದ್ದಿಜೀ, ಎಂದು ಜನಮಾನಸದಲ್ಲಿ ಸ್ಥಾಪಿತರಾದ ಪರಮಪೂಜ್ಯ ಸಿದ್ದೇಶ್ವರ ಅಪ್ಪಗಳು 1954 ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಗುರುದೇವರನ್ನು ಕಂಡು ಅವರ ಶ್ರೀಪಾದಗಳಿಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡವರು. ಅದೇ ದಿನ ಮೊದಲ ಬಾರಿಗೆ ನಮ್ಮ ಕುಟುಂಬದವರು ಗುರುದೇವರ ದರ್ಶನಕ್ಕೆ ಹೋದದ್ದು ಒಂದು ಯೋಗಾಯೋಗ.

ನಂತರ ದ ಸುಮಾರು 7 ದಶಕಗಳಲ್ಲಿ ಅವರ ವ್ಯಕ್ತಿತ್ವವು ಜ್ಞಾನ -   ಅನುಭಾವಗಳ ಮಹಾವೃಕ್ಷವಾಗಿ "ಜಗದಗಲ ಮುಗಿಲಗಲವಾಗಿ" ಬೆಳೆದುದನ್ನು ಕಣ್ಣಾರೆ ಕಂಡ ಸೌಭಾಗ್ಯ ನಮ್ಮದು. ತಮ್ಮ ಗುರುದೇವರ ಆಣತಿಯಂತೆ ತಮ್ಮ ಬದುಕಿನ ಪ್ರತಿ ಕ್ಷಣವನ್ನೂ ಜ್ಞಾನದಾಸೋಹಕ್ಕೆ ಸಮರ್ಪಿಸಿದರು. ಮರ, ಹೂ - ದುಂಬಿ, ಪಶು - ಪಕ್ಷಿ ಪ್ರಾಣಿಗಳ ಕಥೆಗಳ ಮೂಲಕ ಜನಮಾನಸದಲ್ಲಿ ಅರಿವನ್ನು ಮೂಡಿಸಿ ಅಧ್ಯಾತ್ಮದ ಕಿಡಿ ಹೊತ್ತಿಸಿ ಆತ್ಮ ವಿಮರ್ಶೆಗೆ ತೊಡಗಿಸಿದರು. ಜಗತ್ತಿನ ಎಲ್ಲ ದಾರ್ಶನಿಕರ ತತ್ವಗಳನ್ನು ಭಾರತೀಯ ತತ್ವ ಜ್ಞಾನದೊಡನೆ ಸಮೀಕರಿಸಿ ಹೇಳುವ ಅವರ ರೀತಿ ಅದ್ಭುತವಾದದ್ದು. ಅವರದು ಗುರುಸಮ್ಮಿತೋಪದೇಶವಾಗಿತ್ತು. ಅವರ ಪ್ರವಚನಗಳು ಸುಮಧುರ ಮಹಾಕಾವ್ಯದಂತೆ ರಸದೌತನ ಉಣಬಡಿಸಿ  ಮನಸ್ಸನ್ನು ಮಧುರಗೊಳಿಸಿ ಭಕ್ತಿಯ ಪವಿತ್ರಗಂಗೆಯಲ್ಲಿ ಮೀಯಿಸುತ್ತಿದ್ದವು. ಲೌಕಿಕದ ಯಾವ ಮೋಹಗಳಿಗೂ ಅಂಟಿಕೊಳ್ಳದೆ, ತಮ್ಮ ಅಸ್ತಿತ್ವ ಆರಾಧನೆಗಳಿಂದ ದೂರಾಗಿ, "ಬಯಲಿಂದ ಬಂದು, ಬಯಲಲ್ಲಿ ನಿಂದು, ಬಯಲ ಸ್ವರೂಪವನ್ನರುಹಿ, ಬಯಲಾಗುವ ಮಾರ್ಗ ತೋರಿದ ಜ್ಞಾನ ಸೂರ್ಯರಿವರು." ಇದಕ್ಕೆ ಅವರ "ಅಂತಿಮ ಅಭಿವಂದನಾ ಪತ್ರವೇ" ಸಾಕ್ಷಿಯಾಗಿದೆ.

ಆ ಪವಿತ್ರ ದಿವ್ಯಾನುಭವದ ನುಡಿಗಳನ್ನು ಕೇಳಿದ ಅನೇಕ ಭಕ್ತ ಹೃದಯಗಳು ತಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಅನೇಕ ಮಾರ್ಗಗಳನ್ನು ಅನುಸರಿಸುತ್ತಿವೆ. ಅಂತಹವರಲ್ಲಿ ಪೂಜ್ಯ ಸಿದ್ದೇಶ್ವರ ಅಪ್ಪಗಳ ಅಪ್ಪಟ ಭಕ್ತಹೃದಯಿಯಾದ ಶ್ರೀಯುತ ತುಕಾರಾಮ ಜಾಧವರೂ ಒಬ್ಬರು.

ಇವರು ಮುಂದಿನ ಪೀಳಿಗೆಗೆ ಅಪ್ಪಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ನೀಡುವ ನಿಟ್ಟಿನಲ್ಲಿ "ಸತ್ಯದರ್ಶನ” ಎಂಬ ಚಿಕ್ಕ ಪುಸ್ತಕವನ್ನು ಮಕ್ಕಳಿಗೂ ತಿಳಿಯುವಂತೆ ಚಿತ್ರಗಳ ಸಹಿತವಾಗಿ, ಮನಮುಟ್ಟುವಂತೆ ಚಂದಾಮಾಮ ಪುಸ್ತಕದ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದಾರೆ.

"ನಾನು ಯಾರು" ಎಂಬ ಗಂಭೀರ ಪ್ರಶ್ನೆಗೆ ಉತ್ತರದ ರೂಪದಲ್ಲಿ ಬರುವ ಸತ್ಯಾನ್ವೇಷಣೆಯನ್ನು ಕಥಾನಕವಾಗಿ ಸೃಷ್ಟಿಸಿರುವ ಇವರ ಪ್ರಯತ್ನ ಅತ್ಯಂತ ಸುಂದರವಾಗಿದೆ. ಇಂತಹ ಇನ್ನೂ ಅನೇಕ ಕೃತಿಗಳು ಇವರಿಂದ ಹೊರಬರಲಿ ಹಾಗೂ ಪೂಜ್ಯರ ತತ್ವಗಳ ಸುವಾಸನೆ ಜನಮನಗಳಿಗೆ ಹರಡಲೆಂದು ಆಶಿಸುತ್ತೇನೆ. ಈ ನಾಲ್ಕು ನುಡಿಗಳು ಗುರುಗಳ ಪದಕಮಲಗಳಿಗೆ ಸಮರ್ಪಿತ.

-ಸೋನಮ್ಮತಾಯಿ ಪಾಟೀಲ ತಪೋವನ, ಹುಣಸಿಯಾಳ (ಬಸವನಬಾಗೇವಾಡಿ)

View full details