Vallish Kumar. S
ಸಂತೆಯಲ್ಲಿ ಕನ್ನಡಿಗ
ಸಂತೆಯಲ್ಲಿ ಕನ್ನಡಿಗ
Publisher - ಹರಿವು ಬುಕ್ಸ್
- Free Shipping Above ₹350
- Cash on Delivery (COD) Available*
Pages - 169
Type - Paperback
Couldn't load pickup availability
ಈ ಪುಸ್ತಕವನ್ನು ಓದುತ್ತಿರುವ ನೀವು ವಿದ್ಯಾರ್ಥಿಯೋ, ಕೆಲಸ ಮಾಡುತ್ತಿದ್ದೀರೋ, ಬಿಸಿನೆಸ್ ಮಾಡುತ್ತಿದ್ದೀರೋ, ನಿವೃತ್ತರೋ ಗೊತ್ತಿಲ್ಲ. ಆದರೆ ನಾನು ಈ ಪುಸ್ತಕವನ್ನು ಬರೆದಿರುವುದು ಬಿಸಿನೆಸ್ಸಿನಲ್ಲಿ ತೊಡಗಲು-ಗೆಲ್ಲಲು ಹಾತೊರೆಯುತ್ತಿರುವ ಕನ್ನಡಿಗರಿಗೆ. ಬಿಸಿನೆಸ್ ಮಾಡುವ ಇಚ್ಛೆ ಇದ್ದೂ ಯಾವುದೊ ಕಾರಣಕ್ಕೆ ಮುಂದುವರೆಯದೇ ಉಳಿದಿರುವವರು, ಬಿಸಿನೆಸ್ ಮಾಡುತ್ತಿದ್ದರೂ ಅಂದುಕೊಂಡ ಮಟ್ಟದ ಬೆಳವಣಿಗೆ ಕಾಣದೆ ಇರುವವರು; ಕನ್ನಡಿಗರು ಬಿಸಿನೆಸ್ಸಿನಲ್ಲಿ ಹೆಚ್ಚಾಗಿ ತೊಡಗುವುದರ ಪ್ರಾಮುಖ್ಯತೆ ಏನೆಂದು ತಿಳಿಯ ಬಯಸುವವರು; ಅಥವಾ ಬಿಸಿನೆಸ್ ಬಗ್ಗೆ ಕೆಲವು ಋಣಾತ್ಮಕ ಕತೆಗಳನ್ನು ಕೇಳಿ ಪೂರ್ವಗ್ರಹ ಬೆಳೆಸಿಕೊಂಡು ಆ ಗೊಂದಲದಲ್ಲೇ ಸಿಲುಕಿ ಮುನ್ನಡೆಯಲು ಆಗದೇ ಇರುವವರು, ಕನ್ನಡಿಗರ ಬಿಸಿನೆಸ್ ಸುತ್ತ ಚಿಂತನೆಯಲ್ಲಿ ಸ್ಪಷ್ಟತೆ ಮತ್ತು ಹೊಸಮಾರ್ಗಗಳನ್ನು ಕಂಡುಕೊಳ್ಳಲು ಬಯಸುವವರಿಗೆ ಈ ಪುಸ್ತಕ ಹೊಸ ಚಿಂತನೆಗಳನ್ನು ನೀಡಬಲ್ಲದು ಎಂದು ನಂಬಿದ್ದೇನೆ.
- ವಲ್ಲೀಶ್ ಕುಮಾರ್ ಎಸ್
Share

MUST READ ಕನ್ನಡ ಬುಕ್!
ವಲ್ಲೀಶ್ ಕುಮಾರ್ ಎಸ್. ಅವರ 'ಸಂತೆಯಲ್ಲಿ ಕನ್ನಡಿಗ' ಕೇವಲ ಪುಸ್ತಕವಲ್ಲ, ಇದು ಕನ್ನಡ ನೆಲದಲ್ಲಿ ವ್ಯವಹಾರ ಪ್ರಾರಂಭಿಸಲು ಬಯಸುವವರಿಗೆ ಒಂದು ಕೈದೀಪ. 💡
ಕನ್ನಡಿಗರು ಉದ್ಯಮದಲ್ಲಿ ಎದುರಿಸುವ ಸವಾಲುಗಳು, ಅವಕಾಶಗಳು ಮತ್ತು ಅದನ್ನು ಗೆಲ್ಲುವ ಮಾರ್ಗಗಳ ಕುರಿತು ಲೇಖಕರು ಸರಳವಾಗಿ, ನೇರವಾಗಿ ವಿವರಿಸಿದ್ದಾರೆ.
ಬಿಸಿನೆಸ್ ಶುರು ಮಾಡುವ ಯೋಚನೆಯಲ್ಲಿರುವ ಪ್ರತಿಯೊಬ್ಬರೂ ಇದನ್ನು ಓದಲೇಬೇಕು. ನಿಮ್ಮ ಆಲೋಚನೆಗಳಿಗೆ ಒಂದು ಸ್ಪಷ್ಟ ದಾರಿ, ನಿಮ್ಮ ಪ್ರಯತ್ನಗಳಿಗೆ ಸರಿಯಾದ ಪ್ರೋತ್ಸಾಹ ಸಿಗುವುದು ಖಚಿತ!
ಈಗಲೇ ನಿಮ್ಮ ಪ್ರತಿಯನ್ನು ಪಡೆದುಕೊಳ್ಳಿ.
#ಸಂತೆಯಲ್ಲಿಕನ್ನಡಿಗ #ಕನ್ನಡ #ಕನ್ನಡಬುಕ್ #KannadaBook #Business #ಉದ್ಯಮ #Startup #VallishKumarS
ಈ ಕೃತಿ ಕನ್ನಡಿಗರ ಬಿಸಿನೆಸ್ ಚಿಂತನೆಗೆ ಹೊಸ ದಿಕ್ಕು ನೀಡುವ ಪ್ರಯತ್ನವಾಗಿದೆ. ಲೇಖಕರು ತಮ್ಮ ಅನುಭವಗಳ ಆಧಾರದ ಮೇಲೆ ಬಿಸಿನೆಸ್ ಪ್ರಾರಂಭಿಸಲು ಇಚ್ಛೆ ಇದ್ದರೂ ಹಿಂಜರಿಯುವ, ಅಥವಾ ಆರಂಭಿಸಿದರೂ ಯಶಸ್ಸು ಕಾಣದ ಕನ್ನಡಿಗರಿಗೆ ಸ್ಪಷ್ಟತೆ ನೀಡಲು ಈ ಪುಸ್ತಕವನ್ನು ರಚಿಸಿದ್ದಾರೆ.
Highlights of the book:
1. ಕನ್ನಡಿಗರ ಬಿಸಿನೆಸ್ ಚಿಂತನೆಗೆ ಸಂಬಂಧಿಸಿದ ನೈಜ ಉದಾಹರಣೆಗಳು.
2.ಓದುಗರಲ್ಲಿ ಆತ್ಮಪರಿಶೀಲನೆಗೆ ಪ್ರೇರಣೆ ನೀಡುವ ಶೈಲಿ.
3.ಹೊಸ ಮಾರ್ಗಗಳನ್ನು ಅನ್ವೇಷಿಸಲು ಪ್ರೇರಣೆಯಾದಂತಿದೆ.
Author explanation about: ಸರಳ, ನೇರ ಮತ್ತು ಪ್ರೇರಣಾತ್ಮಕ ಭಾಷೆ.
Author point of view: ಲೇಖಕರು ಕನ್ನಡಿಗರ ಮನೋಭಾವನೆ, ಸಾಮಾಜಿಕ ಪೂರ್ವಗ್ರಹಗಳು ಮತ್ತು ಬಿಸಿನೆಸ್ ಬಗ್ಗೆ ಇರುವ ಗೊಂದಲಗಳನ್ನು ಸ್ಪಷ್ಟವಾಗಿ ವಿವರಿಸುತ್ತಾರೆ.
Reason: ಕನ್ನಡಿಗರು ಉದ್ಯಮದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂಬ ದೃಷ್ಟಿಕೋನವನ್ನು ಬಿಂಬಿಸುತ್ತಾರೆ.
Honest opinion in one line: ಈ ಪುಸ್ತಕವು ಬಿಸಿನೆಸ್ ಪ್ರಾರಂಭಿಸಲು ಅಥವಾ ಮುಂದುವರಿಸಲು ಹಿಂಜರಿಯುವ ಕನ್ನಡಿಗರಿಗೆ ಬಹುಪಾಲು ಪ್ರೇರಣೆಯಾಗಿದೆ. ಲೇಖಕರ ನಿಷ್ಠೆ ಮತ್ತು ನೈಜ ಅನುಭವಗಳು ಓದುಗರಿಗೆ ಸ್ಪಷ್ಟತೆ ನೀಡುತ್ತವೆ.
ಬಿಸಿನೆಸ್ ಮಾಡಬೇಕು ಆದರೆ ಯಾರನ್ನು ವಿಚಾರಿಸಲಿ ?ಎಂಬ ಯೋಚನೆಯಲ್ಲಿರುವವರು ಓದಲೇ ಬೇಕಾದ ಪುಸ್ತಕ ಶ್ರೀ ವಲ್ಲೀಶ್ ಕುಮಾರ್ .ಎಸ್. ಬರೆದಿರುವ "ಸಂತೆಯಲ್ಲಿ ಕನ್ನಡಿಗ" ಒಂದು ಬಿಸಿನೆಸ್ ಚರ್ಚೆ. ಮೂರು ಅಧ್ಯಾಯಗಳು ವಿಧವಿಧ ವಿಷಯಗಳನ್ನು ಚರ್ಚಿಸುವುದರೊಂದಿಗೆ ಕೊನೆಯಲ್ಲಿ ಸಾರಾಂಶವನ್ನು ಹೊಂದಿರುವುದು ಓದುಗರಿಗೆ ತುಂಬಾ ಅನುಕೂಲಕರ ಎನಿಸುತ್ತದೆ. ಕನ್ನಡದ ಉದ್ಯಮಿಗಳನ್ನ ಕೇಂದ್ರೀಕರಿಸಿದ್ದ ರೂ, ವಿಚಾರಗಳು ವಿಶಾಲವಾಗಿ ಹಾಗೂ ಬೇರೆ ಬೇರೆ ಕಾಲಮಾನಗಳು ಮತ್ತು ಸಮುದಾಯಗಳಲ್ಲಿ ಪ್ರಚಲಿತವಾಗಿರುವ ಹಲವಾರು ವಿಷಯಗಳ ತೌಲನಿಕ ಅಧ್ಯಯನವಾಗಿ ಮುಂದೆ ಸಾಗಿದೆ. ಸಾಧಕ ಕನ್ನಡಿಗರ ಯಶೋಗಾಥೆಗಳನ್ನು ಸಂಕ್ಷಿಪ್ತವಾಗಿ ಹೇಳುತ್ತಾ ,ಅವರಲ್ಲಿ ಮೈಗೂಡಿರುವ ಶಿಸ್ತು ನಿಯಮಗಳನ್ನು ಕುರಿತ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಯುವಕರಿಗೆ ಸ್ಪೂರ್ತಿ ನೀಡಲು ಇತರರು ಅವರನ್ನು ಯಾವ ರೀತಿ ಬೆಂಬಲಿಸಬೇಕು? ಎಂಬುದನ್ನು ಹೇಳುತ್ತಾ ,ಈ ನಿಟ್ಟಿನಲ್ಲಿ ಎದುರಾಗುವ ಅಡೆತಡೆಗಳ ಬಗ್ಗೆಯೂ ಎಚ್ಚರ ನೀಡಿದ್ದಾರೆ. ಭಾಷೆ ಸರಳ ಹಾಗೂ ಓದುಗರಿಗೆ ಹತ್ತಿರವಾಗಿರುವುದರೊಂದಿಗೆ ಹೊಸ ಪದಗಳ ಬಳಕೆ ಇದೆ. ಯಶಸ್ವಿ ಕಂಪನಿಗಳು ಅಳವಡಿಸಿಕೊಂಡಿರುವ ಸೂಕ್ಷ್ಮ ತಂತ್ರಜ್ಞಾನಗಳು ಆಸಕ್ತರಿಗೆ ದಾರಿದೀಪವಾಗುತ್ತದೆ. ಕನ್ನಡದ ಗಾದೆಗಳು ಸಂದರ್ಭಕ್ಕೆ ಅನುಗುಣವಾಗಿ ಬಳಕೆಯಾಗಿದೆ. ಇದರೊಂದಿಗೆ ಓದಲೇ ಬೇಕಾದ ಪುಸ್ತಕಗಳನ್ನ ಪ್ರಾಸಂಗಿಕವಾಗಿ ಚರ್ಚಿಸಿದೆ. ಯುವ ಮನಸ್ಸುಗಳಿಗೂ ಮಾರುಕಟ್ಟೆಯ ಸಂಪ್ರದಾಯಕ್ಕೂ ಮಧ್ಯೆ ಕೊಂಡಿಯಾಗಿ ಲೇಖಕ ತಮ್ಮ ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸಿದ್ದಾರೆ . ಸುಸ್ಥಿರ ಚುರುಕು ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಲೇಖಕರ ದೃಷ್ಟಿಕೋನ ಸ್ಪಷ್ಟವಾಗಿದೆ .ಸಂಸ್ಥೆ ಹಾಗೂ ಸಂಘಟನೆಯ ಸೂಕ್ಷ್ಮ ವ್ಯತ್ಯಾಸದ ವಿವರಣೆ ನೀಡುತ್ತಲೇ ಒಟ್ಟಾರೆಯಾಗಿ ಪರೋಕ್ಷವಾಗಿ ಓದುವರನ್ನು ವೃತ್ತಿಪರತೆಯಲ್ಲಿ ಯೋಚಿಸುವಂತೆ ಮಾಡುವಲ್ಲಿ ಪುಸ್ತಕ ಯಶಸ್ವಿಯಾಗಿದೆ. ನಗರ ಪ್ರದೇಶದ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗಿದೆ ಎನಿಸಿದರೂ ಲೇಖಕರೇ ಹೇಳಿರುವಂತೆ ಇದೊಂದು ಚರ್ಚೆ ಎಂಬುದನ್ನು ನೋಡಿದಾಗ ಮುಂಬರುವ ದಿನಗಳಲ್ಲಿ ಚರ್ಚೆ ಮುಂದುವರೆಯಲಿ ಎಂದು ಶುಭ ಆಶಿಸುತ್ತಾ...
ಕಾಮಾಕ್ಷಿ. ಎಸ್.
"ಸಂತೆಯಲ್ಲಿ ಕನ್ನಡಿಗ” ಪುಸ್ತಕವು ವ್ಯವಹಾರ ಮತ್ತು ಮಾರುಕಟ್ಟೆ ಬಗ್ಗೆ ಆಳವಾದ ಚಿಂತನೆಗಳನ್ನು ತುಂಬಾ ಸರಳವಾಗಿ ಓದುಗರಿಗೆ ತಲುಪಿಸುತ್ತದೆ. ಬರಹಗಾರ ವಲ್ಲಿಶ್ ಕುಮಾರ್ ಎಸ್ ಅವರು ನೈಜ ಉದಾಹರಣೆಗಳು, ಸರಳ ಭಾಷೆ ಮತ್ತು ಪ್ರೇರಣಾದಾಯಕ ಶೈಲಿಯ ಮೂಲಕ ಓದುಗರನ್ನು ವ್ಯವಹಾರದ ಜಗತ್ತಿನತ್ತ ಒಯ್ಯುತ್ತಾರೆ.
ಈ ಪುಸ್ತಕವು ಕೇವಲ ವ್ಯವಹಾರಿಗಳಿಗೆ ಮಾತ್ರವಲ್ಲ, ವ್ಯವಹಾರದ ಬಗ್ಗೆ ಆಸಕ್ತಿ ಹೊಂದಿರುವ ಪ್ರತಿಯೊಬ್ಬರಿಗೂ ದಾರಿದೀಪವಾಗುತ್ತದೆ. ಮಾರುಕಟ್ಟೆಯಲ್ಲಿ ನಡೆಯುವ ಸವಾಲುಗಳು, ಅವಕಾಶಗಳು ಹಾಗೂ ಯಶಸ್ಸಿನ ತತ್ವಗಳನ್ನು ತಿಳಿಯಲು ಇದು ಅತ್ಯುತ್ತಮ ಗ್ರಂಥ.
ಒಟ್ಟಾರೆ, “ಸಂತೆಯಲ್ಲಿ ಕನ್ನಡಿಗ” ಒಂದು ಪ್ರೇರಣಾದಾಯಕ, ತಿಳುವಳಿಕೆಯನ್ನು ವಿಸ್ತರಿಸುವ ಮತ್ತು ಓದಿದವರ ಮನದಲ್ಲಿ ಹೊಸ ಚೈತನ್ಯವನ್ನು ತುಂಬುವ ಕೃತಿ.
ಆಸಕ್ತಿ ಹೊಂದಿರುವ ಪ್ರತಿಯೊಬ್ಬರಿಗೂ ದಾರಿದೀಪವಾಗುತ್ತದೆ. ಮಾರುಕಟ್ಟೆಯಲ್ಲಿ ನಡೆಯುವ ಸವಾಲುಗಳು, ಅವಕಾಶಗಳು ಹಾಗೂ ಯಶಸ್ಸಿನ ತತ್ವಗಳನ್ನು ತಿಳಿಯಲು ಇದು ಅತ್ಯುತ್ತಮ ಗ್ರಂಥ. ಒಟ್ಟಾರೆ, “ಸಂತೆಯಲ್ಲಿ ಕನ್ನಡಿಗ” ಒಂದು ಪ್ರೇರಣಾದಾಯಕ, ತಿಳುವಳಿಕೆಯನ್ನು ವಿಸ್ತರಿಸುವ ಮತ್ತು ಓದಿದವರ ಮನದಲ್ಲಿ ಹೊಸ ಚೈತನ್ಯವನ್ನು ತುಂಬುವ ಕೃತಿ.
Subscribe to our emails
Subscribe to our mailing list for insider news, product launches, and more.