Dr. Mysuru Nagaraja Sharma
ಸಂಚು ವಂಚನೆಗಳ ಲೋಕದಲ್ಲಿ
ಸಂಚು ವಂಚನೆಗಳ ಲೋಕದಲ್ಲಿ
Publisher - ಹರಿವು ಬುಕ್ಸ್
- Free Shipping Above ₹250
- Cash on Delivery (COD) Available
Pages - 196
Type - Paperback
ಪ್ರಸ್ತುತ ಕೃತಿಯಾದ ʻಸಂಚು ವಂಚನೆಗಳ ಲೋಕದಲ್ಲಿʼ ಎಂಬ ಈ ಸಂಚಿಕೆಯಲ್ಲಿ ಸಮಾಜಕ್ಕೆ ಪಾಠವಾಗಬಹುದಾದ ಕೆಲವು ಸಂದರ್ಭಗಳನ್ನು ಲೇಖಕರಾದ ಡಾ. ಮೈಸೂರು ನಾಗರಾಜ ಶರ್ಮಾರವರು ಆಸಕ್ತಿಕರವಾಗಿಯೇ ನಿರೂಪಿಸಿದ್ದಾರೆ ಎನ್ನಬೇಕು. ಸ್ವತ: ಚಿತ್ರಕಲಾವಿದರು, ಛಾಯಾಗ್ರಹಕರು ಹಾಗೂ ಲೇಖಕರೂ ಆದ ಡಾ. ಮೈ.ನಾ. ಶರ್ಮಾ ಅವರು ಎಂದಿನಂತೆ, ಈ ಕೃತಿಯಲ್ಲಿಯೂ ತಮ್ಮ ಎಲ್ಲಾ ಪ್ರತಿಭೆಗಳನ್ನೂ ಸಿಂಚನಗೊಳಿಸಿ ಪ್ರಸ್ತುತಪಡಿಸಿದ್ದಾರೆ. ಸತ್ಯಘಟನೆಗಳನ್ನು ನೀರಸವಾಗಿ ವಿವರಿಸದೆ, ಅದನ್ನು ಸ್ವಾರಸ್ಯಕರವಾದ ಒಂದು ಕಥಾರೂಪದಲ್ಲಿಯೇ ಸಮಾಜದ ಮುಂದಿಡುವ ಪ್ರಯತ್ನ ನಡೆಸಿದ್ದಾರೆ. ಪ್ರಾಚೀನ ಭಾರತೀಯ ನಿರೂಪಣೆಗಳಾದ; ಹಿತೋಪದೇಶ, ಪಂಚತಂತ್ರ ಹಾಗೂ ಕಾಕೋಲೋಕೀಯ ಮುಂತಾದ ಸಾಹಿತ್ಯಗಳಲ್ಲಿಯೂ ಇಂತಹುದೇ ಪಾಠ ಹಾಗೂ ರಂಜನೆಗಳ ಉಭಯ ಪ್ರಯತ್ನಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಸಮಾಜವನ್ನು ಎಚ್ಚರಿಸುವ ಈ ದಿಸೆಯಲ್ಲಿಯೇ ರಚಿತವಾದ ಒಂದು ವಿಶೇಷ ಕೃತಿ ಡಾ. ಮೈ.ನಾ. ಶರ್ಮಾರಿಂದ ಹೊರಬರುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಲೇಖಕರ ಮಾತಿನಲ್ಲಿಯೇ ಹೇಳುವುದಾದರೆ, ಇದು ತಾವು ನೀಡುವ ʻಎಚ್ಚರಿಕೆಯ ಗಂಟೆಯೂʼ ಹೌದೆನ್ನುತ್ತಾರೆ. ಒಮ್ಮೆ ಜಾರಿಬಿದ್ದ ನೆಲದಲ್ಲಿ ಮತ್ತೊಮ್ಮೆ ಕಾಲೂರದಂತೆ ಎಚ್ಚರ ವಹಿಸಲು ಎಲ್ಲರೂ ಪ್ರಯತ್ನಿಸುತ್ತಾರಾದರೂ, ಸಮಾಜದಲ್ಲಿನ ಪಾಶವೀ ಮನಸ್ಸಿನವರಿಂದ ಇಂತಹ ಹೊಸ ಹೊಸ ʻಜಾರಿಕೆಯ ನೆಲಗಳುʼ ನಿರಂತರವಾಗಿ ರೂಪಿಸಲಾಗುತ್ತಿದ್ದು, ಮುಗ್ಧರನ್ನು ಹಳ್ಳಕ್ಕೆ ಬೀಳಿಸುವುದು ಈ ಅಮಾನವೀಯ ವರ್ಗದ ನಿತ್ಯ ಕಾಯಕವಾಗಿರುತ್ತದೆ. ಅಂತೆಯೇ, ಈ “ಜಾರು ಬಜಾರಿನ” ಚಟುವಟಿಕೆಗಳ ಬಗೆಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡುವ ಇಂತಹ ಕೆಲಸಗಳು ನಿರಂತರವಾಗಿ ಸಾಗುತ್ತಲೇ ಇರಬೇಕಾದುದೂ ಅಪೇಕ್ಷಣೀಯ- ಎಂಬುದು ಓರ್ವ ವಿಶ್ರಾಂತ ಪೋಲೀಸು ಅಧಿಕಾರಿಯಾದ ನನ್ನ ಅನಿಸಿಕೆಯೂ ಹೌದು!.
ಜೆ.ಬಿ. ರಂಗಸ್ವಾಮಿ,
ವಿಶ್ರಾಂತ ಪೋಲೀಸು ಅಧಿಕಾರಿ. (ಮುನ್ನುಡಿಯಿಂದ)
Share
Subscribe to our emails
Subscribe to our mailing list for insider news, product launches, and more.