Skip to product information
1 of 2

Prof. M. Muniratnappa

ಸಂವೇದನೆ ಸಂವಹನ

ಸಂವೇದನೆ ಸಂವಹನ

Publisher - ಕದಂಬ ಪ್ರಕಾಶನ

Regular price Rs. 290.00
Regular price Rs. 290.00 Sale price Rs. 290.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 272

Type - Paperback

Gift Wrap
Gift Wrap Rs. 15.00

ಕರ್ನಾಟಕದಲ್ಲಿ ಅನೇಕ ಚಿಕ್ಕ ದೊಡ್ಡ ಪಟ್ಟಣಗಳಲ್ಲಿ ಕನ್ನಡ ಸಾಹಿತ್ಯದ 'ಚಿಂತನ ಮಂಥನ' ಕ್ಲಟ್ಗಳೊ, 'ಗೆಳೆಯರ ಬಳಗ'ಗಳೊ, 'ಅಕ್ಷರ ವೇದಿಕೆ'ಗಳೊ ಆರಂಭವಾಗಿ, ಕೆಲಕಾಲ ನಡೆದು ಸ್ಥಗಿತಗೊಂಡಿರುವುದು ನನಗೆ ಗೊತ್ತಿದೆ. ಆದರೆ ಕೋಲಾರದ ಓದುಗ ಕೇಳುಗ ಬಳಗ ಗಟ್ಟಿಯಾಗಿ ನಿಂತಿದ್ದು ಇದು ತಮ್ಮ ಮನೆಯದ್ದೇ ಸ್ವಂತ ಕಾರ್ಯಕ್ರಮವೆಂಬಂತೆ ಪ್ರತಿ ತಿಂಗಳು ನಡೆಸುತ್ತಾ 50ರ ಘಟ್ಟ ತಲುಪಿದ್ದು ಅಭಿನಂದನಾರ್ಹ.

-ನಾಗೇಶ ಹೆಗಡೆ

ಸಂಜೆ ಕತ್ತಲಲ್ಲಿ ಕತ್ತೆತ್ತಿ ನೋಡಿದೆ, ಆಕಾಶಕ್ಕೆ ಸಹಸ್ರ ಬಾಹುಗಳನ್ನು ಚಿಮ್ಮಿ ನನ್ನೊಳಗಿನ ಅಹಂಕಾರವನ್ನು ತುಳಿದ ತ್ರಿವಿಕ್ರಮನಂತೆ ನಿಂತಿತ್ತು ದೇವರ ವೃಕ್ಷ. ಈ ಮಾಂತ್ರಿಕ ಕ್ಷಣದಿಂದ ಎಚ್ಚೆತ್ತು, ಮತ್ತೆ ಹೊರಟಾಗ, ಅಮ್ಮನ ಕತೆಗಳು ಕಾಡಿನ ನಡುವೆ ದಾರಿ ತೋರಿದ್ದವು. ಬದುಕೊಂದು ಪಯಣವಾಗಿತ್ತು, ಪಯಣವೇ ಬದುಕಾಗಿತ್ತು. ಬದುಕು ಮತ್ತು ಪಯಣದ ನಡುವೆ ಅಂತರವಿರಲಿಲ್ಲ. ಅಂತರಂಗದ ಪಯಣ ಇದಾಗಿತ್ತು.

- ನೇಮಿಚಂದ್ರ

ಕವಿ ಎಂದರೆ ಯಾರು? ಎಂಬುದು ಕುತೂಹಲದ ಪ್ರಶ್ನೆ. ಚಂಚಲವೂ ಸ್ವಕೇಂದ್ರಿತವೂ ಆದ ಓದುಗನ ಮನಸ್ಸನ್ನು ತಾನು ಹೇಳಬೇಕಾದ ವಿಷಯಕ್ಕೆ ಕರೆತಂದು ತನ್ನ ವಿಷಯದ ಬಗ್ಗೆ ಅಲೋಚನೆ, ಕಲ್ಪನೆ ಮತ್ತು ಭಾವವನ್ನು ಮೂಡಿಸುವುದರಲ್ಲಿ ಯಶಸ್ವಿ ಆಗಬಲ್ಲವನೆ ಕವಿ. ಗ್ರಹಿಸಿದ ಕಷ್ಟದ ಜೊತೆಗೆ ಅದನ್ನು ಪರರಲ್ಲಿ ಪ್ರೇರಿಸುವ ಪಾಡು- ಸಂವಹನೆ!

-ಪ್ರೊ ಎಂ.ಆರ್. ನಾಗರಾಜು

ಕುವೆಂಪು ಅವರ "ಮಲೆನಾಡಿನ ಚಿತ್ರಗಳು" ಕೃತಿ ಎರಡು ದಡಗಳಾಗಿರುವ ಶಿಕಾರಿ ಸಾಹಿತ್ಯ ಮತ್ತು ಪ್ರಬಂಧ ಸಾಹಿತ್ಯ ಪ್ರಕಾರಗಳ ನಡುವಣ ಲಿಂಕ್ಷನ್ನು ತಿದ್ದುವ ಬಹುವಿಶಿಷ್ಟವಾದ ಸೇತು ರಚನೆಯಾಗಿದೆ. ಆದ್ದರಿಂದಲೇ ಇದನ್ನು "ಪರಿವರ್ತನ ಶೀಲ ಕೃತಿ" ಎಂದು ಕರೆಯಲಾಗಿದೆ.

-ವಿ. ಚಂದ್ರಶೇಖರ ನಂಗಲಿ

ಬಳಗದ ಹೆಸರು `ಓದುಗ ಕೇಳುಗ' ಎಂದಿದ್ದರೂ, ಇಲ್ಲಿನ ಓದುವಿಕೆ ಹಾಗೂ ಕೇಳುವಿಕೆಯ ವ್ಯಾಪ್ತಿ ದೊಡ್ಡದಾಗಿದೆ. ಇದು ಕಾಲಕ್ಷೇಪದ ಓದಲ್ಲ. ಹರಟೆಯ ರೂಪದ ಚರ್ಚೆಗಳ ಚಾವಡಿಯೂ ಇದಲ್ಲ. ಬಹುರೂಪಿ ಸಂವೇದನೆಗಳ ಸಮೀಕರಣದಂತಿರುವ `ಓದುಗ ಕೇಳುಗ' ಬಳಗ ತನ್ನ ತಿಂಗಳ ಕಾರ್ಯಕ್ರಮಗಳ ಮೂಲಕ ಸಮಕಾಲೀನ ಕನ್ನಡ ಸಾಹಿತ್ಯದೊಂದಿಗೆ ಅನುಸಂಧಾನ ನಡೆಸುತ್ತಿದೆ. ಇದು ಸಾಹಿತ್ಯಪ್ರೇಮಿಗಳ `ಹಣತೆ ಹಚ್ಚುವ ಕೆಲಸ'

-ಚ ಹ ರಘುನಾಥ

ಕಳೆದ ಐವತ್ತು ತಿಂಗಳಿಂದ, ಕೊವಿಡ್ ಸಂದರ್ಭದಲ್ಲೂ ಸೇರಿದಂತೆ, ನಿರಂತರವಾಗಿ, ಪ್ರತಿ ತಿಂಗಳ ಕೊನೆಯ ಭಾನುವಾರ ಒಂದು ಗಮನಾರ್ಹ ಕನ್ನಡ ಕೃತಿಯ ಬಗ್ಗೆ ಅಧ್ಯಕ್ಷರು ಸೇರಿದಂತೆ ನಾಡಿನ ಇಬ್ಬರು ಆಹ್ವಾನಿತ ತಜ್ಞ ಸಂಪನ್ಮೂಲ ವಿದ್ವಾಂಸರಿಂದ ಉಪನ್ಯಾಸ ಮತ್ತು ಕೇಳುಗರಿಂದ ವಿಚಾರ ವಿನಿಮಯದಂತಹ ಗಂಭೀರ ಸಾಹಿತ್ಯಕ ಕಾರ್ಯಕ್ರಮವನ್ನು ಒಂದು ಸಮಾನ ಮನಸ್ಕ ಗೆಳೆಯರ ಬಳಗ ನಡೆಸಿಕೊಂಡು ಬರುತ್ತಿರುವುದು ಅಸಾಮಾನ್ಯ ಸಂಗತಿಯೇ ಸರಿ.

-ಬಿ.ಆರ್. ಲಕ್ಷ್ಮಣರಾವ್

View full details