Girimane Shyamarao
ಸಂಪ್ರಾಪ್ತಿ
ಸಂಪ್ರಾಪ್ತಿ
Publisher - ಗಿರಿಮನೆ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 176
Type - Paperback
Couldn't load pickup availability
ನಮಸ್ಕಾರ-
ಮನುಷ್ಯ ಜೀವಿಗಳಲ್ಲಿ ವಿಭಿನ್ನ ಗುಣ ಸಹಜ. ವೈವಿಧ್ಯತೆ ಜಗತ್ತಿನ ನಿಯಮ. ಹಾಗಾಗಿ ಅತ್ಯುತ್ತಮ ಸಂಸ್ಕೃತಿ ಹೊಂದಿದವರಿರುವಂತೆ ಅತ್ಯಂತ ಕೀಳು ಮನಃಸ್ಥಿತಿಯವರೂ ಇದ್ದೇ ಇರುತ್ತಾರೆ. ಪ್ರತಿಯೊಬ್ಬರಲ್ಲೂ ಒಂದೊಂದು ಗುಣ ಪ್ರಧಾನವಾಗಿರುತ್ತದೆ. ಒಳ್ಳೆಯದು ಅಥವಾ ಕೆಟ್ಟದ್ದು. ತಪ್ಪೇ ಮಾಡದವರು ತಮ್ಮಿಂದ ಒಂದು ಸಣ್ಣ ತಪ್ಪಾದರೂ ಬದುಕೆಲ್ಲಾ ನೊಂದುಕೊಳ್ಳುತ್ತಾರೆ. ತಪ್ಪು ಮಾಡುವವರು ಯಾವ ಎಗ್ಗೂ ಇಲ್ಲದೆ ಅದನ್ನು ಮಾಡಿ ಮರೆತು ಬಿಡುತ್ತಾರೆ. ಅದರಲ್ಲೂ ದುಷ್ಟರು ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವುದು ಮುಗ್ಧರನ್ನು! ಏಕೆಂದರೆ ಗಟ್ಟಿಗರು ತಿರುಗೇಟು ನೀಡುತ್ತಾರೆ! ಆದರೆ ಯಾರು ಉತ್ತಮ ಗುಣ ಹೊಂದಿರುತ್ತಾರೋ, ಯಾರಿಗೆ ತನ್ನನ್ನು ತಾನು ತಿದ್ದಿಕೊಳ್ಳಬೇಕೆಂದಿರುತ್ತದೋ ಅವರು ಉತ್ತಮರಾಗುತ್ತಾರೆ.
ಜೊತೆಗೇ ಸ್ವಸ್ಥ ಮತ್ತು ಅಸ್ವಸ್ಥ ಮನಸ್ಸಿನ ಜನಗಳೂ ಇರುತ್ತಾರೆ. ಕೆಟ್ಟದು ಮಾಡಬೇಕೆಂಬ ಉದ್ದೇಶವಿಲ್ಲದಿದ್ದರೂ ಅಸ್ವಸ್ಥ ಮನಸ್ಸಿನವರಿಂದ ಇತರರಿಗೆ ತೊಂದರೆಯಾಗುತ್ತದೆ. ಅವರನ್ನು ಅರ್ಥಮಾಡಿಕೊಂಡು ಅವರಿಗೂ ಬದುಕಲು ಅವಕಾಶ ಮಾಡಿಕೊಡುವವರು ಉತ್ತಮರು ಎನಿಸಿಕೊಳ್ಳುತ್ತಾರೆ.
ಇದನ್ನು 'ಮನೋವೈಜ್ಞಾನಿಕ ಕಾದಂಬರಿ-4' ಎಂದು ಪ್ರಸ್ತುತ ಪಡಿಸುತ್ತಿದ್ದೇನೆ.
-ತಮ್ಮೆಲ್ಲರ ಸಹಕಾರಕ್ಕೆ ಕೃತಜ್ಞತೆಗಳೊಂದಿಗೆ ಗಿರಿಮನೆ ಶ್ಯಾಮರಾವ್
Share

Kadambari was very beautiful
Subscribe to our emails
Subscribe to our mailing list for insider news, product launches, and more.