Vishweshwar Bhat
ಸಂಪಾದಕರ ಸದ್ಯಶೋಧನೆ - 7
ಸಂಪಾದಕರ ಸದ್ಯಶೋಧನೆ - 7
Publisher - ವಿಶ್ವವಾಣಿ ಪುಸ್ತಕ
- Free Shipping Above ₹350
- Cash on Delivery (COD) Available*
Pages - 216
Type - Paperback
Couldn't load pickup availability
ಸಂಪಾದಕನಾದವನು ಓದಬೇಕು ಹಾಗೂ ಬರೆಯಬೇಕು. ಇವೆರಡರ ಮಧ್ಯೆ ಸಮಯ ಮಾಡಿಕೊಂಡು ಸಂಶೋಧನೆ, ಅಧ್ಯಯನ, ವಿವಿಧ ರಂಗಗಳ ಜನರ ಭೇಟಿ ಮತ್ತು ಪ್ರವಾಸವನ್ನು ಮಾಡಬೇಕು. ಇವೇನು ವಿಶೇಷ ಗುಣಗಳಲ್ಲ. ಸಂಪಾದಕ ಇರಬೇಕಾದುದೇ ಹಾಗೆ. ಆಗಲೇ ನಿರಂತರವಾಗಿ ಬರೆಯಲು ಸಾಧ್ಯ. ಇಲ್ಲದಿದ್ದರೆ ಬರವಣಿಗೆ ಶುಷ್ಕವಾಗುತ್ತದೆ, ಸೋಲುತ್ತದೆ. ಅವನ್ನು ಒಂದು ತಪಸ್ಸಿನಂತೆ ಪಾಲಿಸಿದರೆ, ದೈನಂದಿನ ಅಂಕಣ ಬರೆಯುವ ಆತ್ಮವಿಶ್ವಾಸ ಮೂಡುತ್ತದೆ. ಅಂಕಣ ಬರೆಯುವ ಸಂಪಾದಕನಿಗೆ ತನ್ನ ಅನುಭವವೇ ಮೂಲದ್ರವ್ಯ. ಸುಮಾರು ಅರ್ಧ ಶತಮಾನ ಕಾಲ ಜಗತ್ತಿನ ನೂರಾರು ಪತ್ರಿಕೆಗಳಿಗೆ ಅಂಕಣ ಬರೆದ ಆರ್ಟ್ ಬುಕ್ವಾಲ್ಡ್ ಒಂದೆಡೆ, I'm working when I'm fighting with my wife. I constantly ask myself-how can I use this stuff to literary advantage ಎಂದು ಬರೆಯುತ್ತಾನೆ. ಆತ ಹೆಂಡತಿಯೊಂದಿಗಿನ ಕ್ಷುಲ್ಲಕ ಜಗಳವನ್ನೂ ತನ್ನ ಅಂಕಣದಲ್ಲಿ ಸ್ವಾರಸ್ಯದ ಸರಕಾಗಿಸುತ್ತಿದ್ದ. ಬರಹ ಬಹು ಆಯಾಮ ಪಡೆಯುವುದು ಆಗಲೇ. ದೈನಂದಿನ ಅಂಕಣ ಬರೆಯುವಾಗ ಪ್ರತಿ ದಿನವೂ 'ತಲೆ ಮೇಲೆ ಸೇಬು ಹಣ್ಣು ಬೀಳುವುದಿಲ್ಲ'. ಆದರೆ ಓದುಗರ ಮುಂದೆ ನೆಪಗಳನ್ನು ಹೇಳಲಾಗುವುದಿಲ್ಲ. ಪ್ರತಿದಿನವೂ ಓದುಗರಿಗೆ 'ಯುರೇಕಾ' ಕ್ಷಣಗಳನ್ನು ಕಟ್ಟಿಕೊಡಬೇಕಾದುದು ಅಂಕಣಕಾರನ ಕರ್ತವ್ಯ. The number one rule of thieves is that nothing is too small to steal. ಮಾತು ಅಂಕಣಕಾರನಿಗೂ ಅನ್ವಯ. ಆತನಿಗೆ ಯಾವ ವಿಷಯವೂ ವರ್ಜ್ಯವಲ್ಲ. ಎಲ್ಲ ವಿಷಯಗಳನ್ನು ತುಂಬಿಕೊಳ್ಳುತ್ತಾ ಹೋಗಬೇಕು. ತುಂಬಿಕೊಳ್ಳುವಾಗಲೇ ಪ್ರತ್ಯೇಕಿಸಿ (segregate) ತುಂಬಿಕೊಳ್ಳುವುದು ಕಸವನ್ನು ಮಾತ್ರ. ಈ ಕೃತಿ ಓದುವಾಗ, ನಿಮಗೆ ಅನೇಕ ಹೊಸ ಹೊಳಹುಗಳು ಸಿಗಬಹುದು.
-ವಿಶ್ವೇಶ್ವರ ಭಟ್
Share

Subscribe to our emails
Subscribe to our mailing list for insider news, product launches, and more.