Dr. H. R. Krishnaiah Gowda
ಸಮಗ್ರ ಅರ್ಥಶಾಸ್ತ್ರ
ಸಮಗ್ರ ಅರ್ಥಶಾಸ್ತ್ರ
Publisher - ಸಪ್ನ ಬುಕ್ ಹೌಸ್
- Free Shipping Above ₹350
- Cash on Delivery (COD) Available*
Pages -
Type -
Couldn't load pickup availability
ಡಾ. ಎಚ್.ಆರ್. ಕೃಷ್ಣಯ್ಯಗೌಡರು ಅರ್ಥಶಾಸ್ತ್ರ ಲೇಖಕರಾಗಿ ನಾಡಿನಾದ್ಯಂತ ಪರಿಚಿತರು. 'ಅಭಿವೃದ್ಧಿ ಅರ್ಥಶಾಸ್ತ್ರ,' ಪರಿಸರ ಅರ್ಥಶಾಸ್ತ್ರ, ಗ್ರಾಮೀಣ ಅರ್ಥಶಾಸ್ತ್ರ ಮತ್ತು ಸಹಕಾರ ವಿಷಯಗಳಲ್ಲಿ ವಿಶೇಷ ಅಧ್ಯಯನ ನಡೆಸಿರುವ ಇವರು 170 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುತ್ತಾರೆ ಮತ್ತು ಹಲವಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುತ್ತಾರೆ. ಅಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುತ್ತಾರೆ.
ಶ್ರೀಯುತರು "ಭಾರತದಲ್ಲಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘಗಳ ಕಾರ್ಯನಿರ್ವಹಣೆಯ ಮೇಲೆ ಒಂದು ಅಧ್ಯಯನ" ಎಂಬ ವಿಷಯದಲ್ಲಿ ಸಂಶೋಧನೆಯನ್ನು ಮಾಡಿ 2002ನೇ ಇಸವಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದಿರುತ್ತಾರೆ. 'ಭಾರತ ಆರ್ಥಿಕ ವ್ಯವಸ್ಥೆ', 'ಪ್ರೌಢ ಸಾರ್ವಜನಿಕ ಅರ್ಥಶಾಸ್ತ್ರ', 'ನೈಸರ್ಗಿಕ ಸಂಪನ್ಮೂಲಗಳ ಮತ್ತು ಪರಿಸರ ಸಂಬಂಧಿ ಅರ್ಥಶಾಸ್ತ್ರ', 'ಆರ್ಥಿಕ ಚಿಂತನೆಯ ಚರಿತ್ರೆ', 'ಆಧುನಿಕ ಅರ್ಥಶಾಸ್ತ್ರ', 'ಪ್ರೌಢ ಅಭಿವೃದ್ಧಿ ಅರ್ಥಶಾಸ್ತ್ರ, 'ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆ', 'ಆರ್ಥಿಕ ಸಿದ್ಧಾಂತ', 'ಆರ್ಥಿಕ ವಿಶ್ಲೇಷಣೆ', 'ಸ್ವಸಹಾಯ ಗುಂಪುಗಳು', 'ಜನಸಂಖ್ಯಾ ಅಧ್ಯಯನ ಅರ್ಥಶಾಸ್ತ್ರ', 'ಕ್ಷೇಮಾಭಿವೃದ್ಧಿ ಅರ್ಥಶಾಸ್ತ್ರ', 'ಪ್ರೌಢ ನಿರ್ವಹಣ ಅರ್ಥಶಾಸ್ತ್ರ, 'ಕಾರ್ಯಾತ್ಮಕ ನಿರ್ವಹಣೆ', 'ಹಣಕಾಸಿನ ನಿರ್ವಹಣೆ', 'ಭಾರತದಲ್ಲಿ ಗುಡ್ಡಗಾಡು ಪ್ರದೇಶಗಳ ಸಹಕಾರಿ ಸಂಸ್ಥೆಗಳು', 'ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ', 'ಪ್ರೌಢ ಕರ್ನಾಟಕ ಆರ್ಥಿಕತೆ, 'ಪ್ರೌಢ ಸೂಕ್ಷ್ಮ ಆರ್ಥಿಕ ಸಿದ್ಧಾಂತ', 'ಕೃಷಿ ಅರ್ಥಶಾಸ್ತ್ರ', 'ಪ್ರೌಢ ಹಣಸಂಬಂಧಿ ಅರ್ಥಶಾಸ್ತ್ರ', 'ಬ್ಯಾ೦ಕೋದ್ಯಮ ಸಿದ್ಧಾಂತ, ಕಾನೂನು ಮತ್ತು ಆಚರಣೆ', 'ಪ್ರೌಢ ಅಂತರರಾಷ್ಟ್ರೀಯ ಅರ್ಥಶಾಸ್ತ್ರ' 'ಭಾರತೀಯ ಅರ್ಥಶಾಸ್ತ್ರ' 'ಪ್ರೌಢ ಸಮಗ್ರ ಆರ್ಥಿಕ ಸಿದ್ಧಾಂತ', 'ಆರೋಗ್ಯ ಅರ್ಥಶಾಸ್ತ್ರ', 'ಕೈಗಾರಿಕಾ ಅರ್ಥಶಾಸ್ತ್ರ', 'ಶ್ರಮಸಂಬಂಧಿ ಅರ್ಥಶಾಸ್ತ್ರ', 'ಸಂಶೋಧನಾ ವಿಧಾನಶಾಸ್ತ್ರ' ಮುಂತಾದ ಕೃತಿಗಳನ್ನು ಒಳಗೊಂಡ ಇವರ ಬರಹಗಳು ವೈವಿಧ್ಯತೆ ಮತ್ತು ವ್ಯಾಪಕತೆಯಿಂದ ಕೂಡಿವೆ.
ಈ ಗ್ರಂಥಗಳು ವಿದ್ಯಾರ್ಥಿಗಳ, ಉಪನ್ಯಾಸಕರ ಹಾಗೂ ವಿದ್ವಾಂಸರ ಪ್ರಶಂಸೆಗೆ ಪಾತ್ರವಾಗಿವೆ. ಶ್ರೀಯುತರು ಕನ್ನಡದಲ್ಲಿ ಅರ್ಥಶಾಸ್ತ್ರದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಹಾಗೂ ಆಂಗ್ಲ ಭಾಷೆಯಲ್ಲಿ ಅರ್ಥಶಾಸ್ತ್ರ ಮತ್ತು ಸಹಕಾರ ವಿಷಯಗಳ ಮೇಲಿನ ಬರಹಗಳಿಗೆ ವಿಶಿಷ್ಟ ಕೊಡುಗೆ ಸಲ್ಲಿಸಿರುತ್ತಾರೆ.
ಪ್ರಕಾಶಕರು-ಸಪ್ನ ಬುಕ್ ಹೌಸ್
Share

Subscribe to our emails
Subscribe to our mailing list for insider news, product launches, and more.