Skip to product information
1 of 2

Gururaj Desai

ಸಂಬಳಿಗೋಲು

ಸಂಬಳಿಗೋಲು

Publisher -

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 128

Type - Paperback

Gift Wrap
Gift Wrap Rs. 15.00

...ಜಾತಿ ತಾರತಮ್ಯದಿಂದ ಬೇಯುತ್ತಿರುವ ಹಳ್ಳಿಯೊಂದರ ಕಥೆ ಇದು. ಮೇಲ್ಟಾತಿಯವರ ಕ್ರೌರ್ಯಕ್ಕೆ ಬಲಿಯಾದ ದಲಿತ ಜೀವಗಳ ದುರಂತ ಕಥೆ ಇಲ್ಲಿದೆ....ಪೊಲೀಸ್ ವ್ಯವಸ್ಥೆ ಮೇಲ್ಟಾತಿಯ ಧನಿಕರ ಕಪಿಮುಷ್ಠಿಯಲ್ಲಿರುವುದು ಚಿತ್ರಿತವಾಗಿದೆ. ಸಂಘಟನೆಯ ಮೂಲಕ ದಲಿತ 'ಕೇರಿಯಲ್ಲಿ ಮೂಡಿಸಿದ ಜಾಗೃತಿ ಸಾರ್ಥಕ್ಯ ಕಂಡಿದೆ. ಬಲಿಯಾದ ಜೀವಗಳು ಸ್ಮಾರಕಗಳಾಗಿವೆ. ಶೋಷಕರು ಶಿಕ್ಷೆ ಅನುಭವಿಸಿದ್ದಾರೆ. ಕೊನೆಗೆ ಮಾನವಿಯತೆ ಮರುಸ್ಥಾಪನೆಯಾಗಿದೆ. ಪ್ರಜಾಪ್ರಭುತ್ವ ಹೊಸ ಅರ್ಥವನ್ನು ಪಡೆದುಕೊಂಡಿದೆ. ಚಳುವಳಿಯಿಂದ ಬದಲಾವಣೆ ಸಾಧ್ಯ ಎಂಬುದು ಸಾಬೀತಾಗಿದೆ. ಸಮಬಾಳು. ನೆಲೆಯೂರಿದೆ. ಕೃತಿಯ ಕಥಾನಕ ಮೌಲ್ಯಯುತವಾಗಿದೆ...... ತಮ್ಮ ಕುಟುಂಬದಲ್ಲಿಯೇ ನಡೆದ ದೌರ್ಜನ್ಯದ, ಶೋಷಣೆಯ ವಿವರಗಳನ್ನು ನೀಡುವ ಗುರುರಾಜ ದೇಸಾಯಿಯವರ ಎದೆಗಾರಿಕೆಯನ್ನು ಮೆಚ್ಚಲೇಬೇಕು. ತಮ್ಮ ಕುಟುಂಬದೊಳಗಿನ ಕಹಿಯನ್ನೆಲ್ಲ ಕೃತಿಗಿಳಿಸಿ ಕೃತಿಕಾರ ಅದರಿಂದ ಬಿಡುಗಡೆಗೊಂಡು ಸಮಾನತೆಯತ್ತ ಸಾಗಿರುವುದು ಹೋರಾಟಗಾರನ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ನಾಗ್ಯಾನ ಹೆಗಲಮೇಲೆ ಕೈಹಾಕಿ ನಡೆಯುವ ಕೊನೆಯ ದೃಶ್ಯ ಬಹುತ್ವ ಭಾರತದ ಆಶಯವೆನಿಸಿದೆ. ಒಟ್ಟಾರೆ ಕೃತಿ ಕಟ್ಟಿಕೊಡುವ ಮೌಲ್ಯ ಇಂದಿನ ತುರ್ತು ಎನ್ನಬಹುದು.

ಸಾವಿತ್ರಿ ಮುಜುಮದಾರ

ಸದಸ್ಯರು

ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು.

*

ಇದು ನನ್ನೂರಿನಲ್ಲಿ ಶೋಷಿತರ ಮೇಲೆ ನಡೆದ ದೌರ್ಜನ್ಯ, ನಾನು 6 (1992) ವರ್ಷದವನಾಗಿದ್ದಾಗ ನಡೆದ ಘಟನೆ. ನನ್ನ ಚಿಕ್ಕಪ್ಪನ ತೋಟದಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯಕ್ಕೆ ಹಾಗೂ ಕುರುಬ ಸಮುದಾಯಕ್ಕೆ ಸೇರಿದ ಇಬ್ಬರೂ ವ್ಯಕ್ತಿಗಳು ತೋಟದಲ್ಲಿ 100ರೂ ಗಿಂತ ಕಡಿಮೆ ಬೆಲೆಯ ಸಾಮಗ್ರಿ ಕದ್ದರೆಂದು, ಅವರನ್ನು ಕಂಬಕ್ಕೆ ಕಟ್ಟಿ ಹಿಂಸೆ ನೀಡಲಾಯಿತು. ಪೊಲೀಸ್ ಠಾಣೆಯವರೆಗೆ ಅವರನ್ನು ಬೈಕ್ಗೆ ಹಗ್ಗ ಕಟ್ಟಿ ಧರಧರನೇ ಎಳೆದುಕೊಂಡು ಹೋಗಲಾಯಿತು. ಈ ಘಟನೆ ನನ್ನನ್ನು ಮಾನಸಿಕವಾಗಿ ಹಿಂಸಿಸಿತ್ತು. ಆಗಾಗ ನೆನಪಾಗಿ ನನ್ನ ಮನಸನ್ನು ಕದಡುತ್ತಿತ್ತು. ಯಾರಾದರೂ ನಿಮ್ಮೂರು ಯಾವುದು ಎಂದಾಗ ಈ ಘಟನೆ ತಟ್ಟನೆ ನನ್ನ ಕಣ್ಮುಂದೆ ಹಾದು ಹೋಗುತ್ತಿತ್ತು. ಮಾನಸಿಕವಾಗಿ ನನ್ನನ್ನು ಕುಗ್ಗಿಸುತ್ತಿತ್ತು. ಬಹುಶಃ ಈ ಘಟನೆಯು ನಾನು ಶೋಷಿತರ ಧ್ವನಿಯಾಗಿ ನಿಲ್ಲಲು ಚಳುವಳಿಯಲ್ಲಿ ತೊಡಗಲು ಕಾರಣವಾಯಿತು.

ಗುರುರಾಜ ದೇಸಾಯಿ

View full details