G. S. Shivarudrappa
ಸಮಗ್ರ ಕಾವ್ಯ
ಸಮಗ್ರ ಕಾವ್ಯ
Publisher - ಸಪ್ನ ಬುಕ್ ಹೌಸ್
- Free Shipping Above ₹300
- Cash on Delivery (COD) Available
Pages - 722
Type - Hardcover
Couldn't load pickup availability
ಮೂವತ್ತಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಸೃಷ್ಟಿಯಾದ ಕಾವ್ಯ ಇಲ್ಲಿದೆ. ಇಲ್ಲಿಯ ಕವನಗಳಲ್ಲಿ ಆಧುನಿಕ ಕನ್ನಡ ಕಾವ್ಯದ ಇಡೀ ಚರಿತ್ರೆ ಪ್ರತಿಫಲಿಸುತ್ತದೆ. ನವೋದಯ, ನವ್ಯ, ನವೋತ್ತರ ಹೀಗೆ ಮೂರೂ ಕಾವ್ಯ ಮಾರ್ಗಗಳು ಇಲ್ಲಿ ತಮ್ಮ ಅಸ್ತಿತ್ವವನ್ನು ಸಾರಿವೆ. ಆದರೆ ಇವೆಲ್ಲವುಗಳ ಹಿಂದೆ ಬದಲಾವಣೆಗಳಿಂದಾಗಿ ಕರಗಿಹೋಗದ, ಕೊಚ್ಚಿಹೋಗದ ಸ್ಪೋಪಜ್ಞ ವ್ಯಕ್ತಿತ್ವವೊಂದು ಕಾಣುತ್ತದೆ.
ಕೆಲವು ಮೂಲಭೂತ ಗುಣಗಳು ಈ ಸಮಗ್ರ ಕಾವ್ಯದ ಉದ್ದಕ್ಕೂ ಹರಿದಿವೆ. ಎಲ್ಲವನ್ನೂ ಇಲ್ಲಿ ಹೇಳಲು ಸಾಧ್ಯವಿಲ್ಲವಾದ್ದರಿಂದ, ಒಂದು ಪ್ರಮುಖ ಗುಣವನ್ನು ಮಾತ್ರ ಪ್ರಸ್ತಾಪಿಸಬಹುದು: ಅದು ಒಂದು ಬಗೆಯ ಪ್ರಸನ್ನತೆ, ವಿಷಾದ ವ್ಯಂಗ್ಯಗಳ ಪದರುಗಳೊಳಗೂ, ಸಹಿಷ್ಣುತೆ, ಪ್ರಸನ್ನತೆ ಹರಡಿರುತ್ತದೆ. ಇಂತಹ ಗುಣದ ಕಾರಣ- ಕ್ಕಾಗಿಯೇ ಕಾವ್ಯವನ್ನು ಚಾರಿತ್ರದ ಅಭಿವ್ಯಕ್ತಿ ಎಂದು ಕರೆಯುವುದು. ಜಿ.ಎಸ್.ಎಸ್.ರವರ ಕಾವ್ಯಕ್ಕಂತೂ ಈ ಮಾತು ಪೂರ್ಣವಾಗಿ ಅನ್ವಯವಾಗುತ್ತದೆ.
ಈ ಸಮಗ್ರ ಕಾವ್ಯದ ಉದ್ದಕ್ಕೂ ಅನೇಕ ಪುನರ್‌ಜನ್ಮಗಳಿವೆ. ಆದರೆ ಈ ಹೊಸ ಹುಟ್ಟಿನಲ್ಲಿ ಹಳೆಯ ನೆನಪುಗಳು, ಲಯಗಳು ವಾಸನೆಗಳು ಇಂಗಿ ಹೋಗುವುದಿಲ್ಲ. ಹೀಗೆ ಪುನರ್‌ಜನ್ಮಗಳನ್ನು ಪಡೆಯಬಲ್ಲ ಶಕ್ತಿ ಪ್ರತಿಭಾವಂತ ಕವಿಗಳಿಗೆ ಮಾತ್ರ ಸಾಧ್ಯ. ಜಿ.ಎಸ್. ಶಿವರುದ್ರಪ್ಪನವರು ಈ ರೀತಿಯ ಕವಿ ಎಂಬುದಕ್ಕೆ ಉದ್ದಕ್ಕೂ ಸಮರ್ಥನೆಗಳು ಸಿಗುತ್ತವೆ.
-ಡಾ.ಡಿ.ಆರ್. ನಾಗರಾಜ್
ಒಬ್ಬ ಒಳ್ಳೆಯ ಕವಿಯಲ್ಲಿ ಅವಶ್ಯವಾಗಿ ಇರಬೇಕಾದದ್ದು ಸರ್ವತೋಮುಖವಾದ ಮತ್ತು ಸೂಕ್ಷ್ಮಗ್ರಾಹಿಯಾದ ಪರಿಸರ ಪ್ರಜ್ಞೆ ಈ ಪ್ರಜ್ಞೆಯಿಂದ ತನ್ನ ಜೀವಂತ ಅನುಭವಗಳನ್ನು ಸ್ವೀಕರಿಸುವ ಮತ್ತು ಬೆಲೆಕಟ್ಟುವ ಸಾಮರ್ಥ ಮತ್ತು ಯಾವುದೇ ಸಿದ್ಧಾಂತಕ್ಕೆ ಕಟ್ಟುಬೀಳದೆ ತನ್ನ ಅನುಭವಕ್ಕೆ ಪ್ರಾಮಾಣಿಕ ಅಭಿವ್ಯಕ್ತಿ ಕೊಡಬಲ್ಲ ಭಾಷೆ ಆಕಾರಗಳನ್ನು ಸೃಷ್ಟಿಸುವ ಅಥವಾ ಹುಡುಕಿಕೊಳ್ಳುವ ಪ್ರತಿಭೆ. ಈ ಗುಣಗಳು ಶಿವರುದ್ರಪ್ಪನವರಲ್ಲಿ ಧಾರಾಳವಾಗಿರುವುದರಿಂದಲೇ ಅವರು ನಮ್ಮ ಮಹತ್ವದ ಕವಿಗಳಲ್ಲೊಬ್ಬರಾಗಿದ್ದಾರೆ.
-ಡಾ. ಜಿ.ಎಸ್. ಅಮೂರ
Share


Subscribe to our emails
Subscribe to our mailing list for insider news, product launches, and more.