Nagraj Ilangudi
Publisher - ಸ್ನೇಹ ಬುಕ್ ಹೌಸ್
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಸಮಕಾಲೀನ ವಿಷಯಗಳ ಮೇಲೆ ಲೇಖನ ಬರೆಯೋದು ಸುಲಭವೂ ಹೌದು, ಕಠಿಣವೂ ಹೌದು, ಸುಲಭವೇಕೆಂದರೆ ಈಗಿನ ಹೊಸ ತಂತ್ರಜ್ಞಾನದ ಯುಗದಲ್ಲಿ ಸಮಕಾಲೀನ ವಿಷಯಗಳ ಕುರಿತಂತೆ ಆ ಕ್ಷಣಕ್ಕೆ ವಿಚಾರಗಳ ಪ್ರವಾಹವೇ ನಡೆದುಬಿಟ್ಟಿರುತ್ತದೆ. ನಮಗೆ ಬೇಕಾದ್ದನ್ನು ಆಯ್ದುಕೊಂಡು ಸೀಮಿತ ಪದಗಳಲ್ಲಿ ಕಟ್ಟಿಕೊಟ್ಟುಬಿಟ್ಟರೆ ಲೇಖನದ ಕಥೆ ಮುಗಿದಂತೆ. ಕಠಿಣ ಏಕೆ ಗೊತ್ತ? ನೀವೇನು ಬರೆಯಬೇಕೆಂದುಕೊಂಡಿರುವಿರೋ ಜನ ಅದಾಗಲೇ ಬೇರೆ ಬೇರೆ ರೂಪಗಳಲ್ಲಿ ಅದನ್ನು ಓದಿಯಾಗಿಬಿಟ್ಟಿರುತ್ತದೆ. ನೀವು ನಿಮ್ಮದೇ ಆದ ಧ್ವನಿಯೊಂದನ್ನು ಲೇಖನದ ಮೂಲಕ ಹೊರಡಿಸಲಿಲ್ಲವೆಂದರೆ ಅದನ್ನು ಓದುವವರು ಸ್ವೀಕರಿಸುವುದು ಕಷ್ಟ. ಅದರಲ್ಲೂ ವಾರಕ್ಕೊಂದು ಅಂಕಣವೆಂದು ಬರೆಯಲು ಕೂರುವುದಿದೆಯಲ್ಲ, ಅದು ಸಾಹಸ ಪರ್ವವೇ, ಬರೀ ಇಷ್ಟೇ ಅಲ್ಲ. ಆಯಾ ಕಾಲಕ್ಕೆ ಹೊಂದಿಕೊಳ್ಳುವಂತೆ ಬರೆದಿರುವ ಲೇಖನಗಳು ಆನಂತರದ ದಿನಗಳಲ್ಲಿ ಇತರರನ್ನು ಆಕರ್ಷಿಸುವುದರಲ್ಲಿ ಸೋತು ಹೋಗುತ್ತದೆ. ಹೀಗಾಗಿ ಸಮಕಾಲೀನ ವಿಷಯಗಳನ್ನು ಬರೆದರೂ ಅದು ಸಾರ್ವಕಾಲಿಕವಾಗುವಂತೆ ಅದರಲ್ಲಿ ಜೀವಂತಿಕೆ ತುಂಬುವ ಪ್ರಯತ್ನ ಅಸಾಧಾರಣವಾದುದು. ಪತ್ರಕರ್ತ ಮಿತ್ರರಾದ ನಾಗರಾಜ ಇಳೆಗುಂಡಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಈ ಕೃತಿ ಒಂದೇ ವಿಚಾರಧಾರೆಯನ್ನು ಅನುಸರಿಸಿರುವಂಥದ್ದಲ್ಲ. ಇಲ್ಲಿ ಸ್ತ್ರೀಯರಿಗೆ ಮೌಲ್ಯವಿದೆ, ಯುವಜನರಿಗೆ ಬೆಲೆ ಇದೆ, ಸೈನಿಕರಿಗೆ ಗೌರವವಿದ್ದಂತ ರೈತರ ಕುರಿತಂತೆಯೂ ಕಾಳಜಿಯಿದೆ. ವ್ಯಕ್ತಿ ಚಿತ್ರಗಳಿವೆ, ರಾಜಕೀಯದ ಓರೆಕೋರೆಗಳ ಪರಿಚಯವಿದೆ, ಸಮಾಜದ ಕುರಿತ ಸಹಜವಾದ ಪ್ರೇಮ ವ್ಯಕ್ತವಾಗಿದೆ. ತರುಣರಿಗೆ ಪ್ರೇರಣೆ ನಿಡಬಲ್ಲ ಲೇಖನಗಳೂ ಇವೆ. ಒಟ್ಟಾರೆ ಬಾಳೆಯ ಎಲೆಯ ಮೇಲೆ ಒಪ್ಪವಾಗಿ ಬಡಿಸಿದ ಮೃಷ್ಟಾನ್ನ ಭೋಜನ, ಎಲ್ಲಿಂದಲಾದರೂ ಶುರುಮಾಡಿ, ಊಟ ರುಚಿಕಟ್ಟಾಗಿರುವುದಂತೂ ಖಾತ್ರಿ.