Viveka Shanabhaga
ಸಕ್ಕರೆ ಗೊಂಬೆ
ಸಕ್ಕರೆ ಗೊಂಬೆ
Publisher - ಅಕ್ಷರ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 68
Type - Paperback
Couldn't load pickup availability
ಈಚಿನ ಕನ್ನಡ ಕಥಾಸಾಹಿತ್ಯದಲ್ಲಿ ವಿವೇಕ ಶಾನಭಾಗ ಅವರ ಕಥೆಗಳು ತಮ್ಮ ಒಂದು ವಿಶಿಷ್ಟ ಲಕ್ಷಣದಿಂದ ಗಮನ ಸೆಳೆಯುತ್ತಿವೆ. ಇದುವರೆಗೂ ನಮ್ಮ ಕಥನಸಾಹಿತ್ಯವು ಹಳ್ಳಿ-ಪೇಟೆ, ಬಾಲ್ಯ-ಯೌವನ, ಸಮುದಾಯ-ವ್ಯಕ್ತಿ, ಧರ್ಮ-ವಿಜ್ಞಾನ, ವಸಾಹತೀಕರಣ - ಇಂಥ ವಸ್ತುಗಳಲ್ಲೇ ಹೆಚ್ಚಾಗಿ ಕೇಂದ್ರೀಕರಿಸಿಕೊಂಡಿದ್ದರೆ ವಿವೇಕರ ಈಚಿನ ಕಥೆಗಳಲ್ಲಿ ಜಾಗತೀಕರಣಗೊಂಡ ಉದ್ಯಮಲೋಕವೊಂದರ ಚಿತ್ರವು ಅನಾವರಣಗೊಳ್ಳಲು ಆರಂಭವಾಗಿದೆ. ಆ ಲೋಕವನ್ನು ಗ್ರಹಿಸಲು ಹೊಸ ದಾರಿಗಳನ್ನು ಹುಡುಕುವುದು ಈ ಕಥನದ ಹಿಂದಿರುವ ಒಂದು ಸ್ಥಾಯಿ ಉದ್ದೇಶವಾಗಿ ನಮಗೆ ಕಾಣುತ್ತದೆ. ಪ್ರಸ್ತುತ ನಾಟಕವು ಅಂಥ ಉದ್ದೇಶದ ಇನ್ನೊಂದು ಹೆಜ್ಜೆ ಎಂದು ಕಾಣಿಸಲು ಸಾಧ್ಯವಿದೆ...
....'ಸಕ್ಕರೆ ಗೊಂಬೆ' ಪೂರ್ಣವಾಗಿ ಇಂಥ ಉದ್ಯಮಲೋಕದ ಕೇಂದ್ರದಲ್ಲಿಯೇ ಘಟಿಸುವ ಒಂದು ನಾಟಕ, ಎನ್‌ಕೆ ಎಂದು ಪರಿಚಿತನಾಗಿರುವ ನಂದಕಿಶೋರ ಬಹುದೊಡ್ಡ ಕೈಗಾರಿಕೋದ್ಯಮಿ; ಗೋಮತಿ ಗ್ರೂಪ್ ಎಂದು ಪ್ರಸಿದ್ಧವಾದ ಸಮುಚ್ಚಯದ ಮಾಲಿಕ. ಈತನ ಮಗ ಸಿದ್ದಾರ್ಥ ಚಿತ್ರಕಾರ; ಆತ ತಂದೆಯ ಪ್ರಭಾವ-ಪ್ರಭಾವಳಿಯ ಪಾಶದಿಂದ ಬಿಡುಗಡೆಯಾಗಬೇಕೆಂದು ಹವಣಿಸುತ್ತಿದ್ದಾನೆ. ಅದಕ್ಕಾಗಿ ಆತ ಈ ನಾಟಕದ ಆರಂಭದಲ್ಲಿಯೇ ಮನೆ ಬಿಟ್ಟು ಬಂದಿದ್ದಾನೆ; 'ದಿವ್ಯ'ದ ಹುಡುಕಾಟದಲ್ಲಿ ತೊಡಗಿದ್ದಾನೆ. ಇಲ್ಲಿ ಆತನಿಗೆ ಸಿಗುವ ಒಂದು ಸಂದೇಶ ಮತ್ತೆ ಆತನನ್ನು ಮನೆಯ ಕಡೆ ಮುಖಮಾಡಿಸುತ್ತದೆ; ಅಲ್ಲಿ ಆತನನ್ನು ತನ್ನ ತಂದೆಯನ್ನು ಅರಿಯಲುತೊಡಗುವ ಯಾತ್ರೆಯೊಂದರಲ್ಲಿ ನಡೆಸುತ್ತದೆ. ಇಂಥ ಯಾತ್ರೆಯೊಂದರ ತುಣುಕುನೋಟಗಳೇ ಈ ನಾಟಕದ ದೃಶ್ಯಾವಳಿ...
Share


Subscribe to our emails
Subscribe to our mailing list for insider news, product launches, and more.