Skip to product information
1 of 1

Viveka Shanabhaga

ಸಕೀನಾಳ ಮುತ್ತು

ಸಕೀನಾಳ ಮುತ್ತು

Publisher -

Regular price Rs. 155.00
Regular price Rs. 155.00 Sale price Rs. 155.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಯಾವ ಅನುಭವವೂ ಪ್ರಾಂಜಲವಲ್ಲದ, ಎಲ್ಲ ಬಗೆಯ ಗ್ರಹಿಕೆಗಳೂ ಕಲುಷಿತಗೊಂಡ ಈ ಸತ್ಯೋತ್ತರ ಕಾಲದಲ್ಲಿ, ಕತೆಯನ್ನು ನಂಬು ಕತೆಗಾರರನ್ನಲ್ಲ ಎಂಬ ಪ್ರಸಿದ್ಧೋಕ್ತಿಯನ್ನು ತುಸು ಬದಲಿಸಿ ಕಥನವನ್ನು ನಂಬು ಕತೆಯನ್ನಲ್ಲ ಎಂದೂ ಹೇಳಬಹುದೇನೋ. ಈ ಕಾದಂಬರಿ ಅಂಥ ಸೂಚನೆ ಕೊಡುವಂತಿದೆ – ಇಲ್ಲಿ ಏನೋ ಒಂದು ನಡೆದು ಅದಕ್ಕೆ ಕುಣಿಕೆ ಹಾಕಿ ಮತ್ತೇನೇನೋ ನಡೆಯುತ್ತ ಸಾಗುತ್ತದೆ. ಆದರೆ ಕಾದಂಬರಿಯಿರುವುದು ನಡೆದಿದ್ದರ ಬಗ್ಗೆಯೋ ಅಥವಾ ನಡೆಯಿತೆಂದು ಗ್ರಹಿಸಲಾಗಿದ್ದರ ಬಗ್ಗೆಯೋ ಅಥವಾ ನಡೆಯಬಹುದಾದ ಸಾಧ್ಯತೆಗಳ ಬಗ್ಗೆಯೋ ಇಂಥ ಪ್ರಶ್ನೆಗಳು ಈ ಕಾದಂಬರಿಯಲ್ಲಿ ಓದುಗನೆಂಬ ವಿಕ್ರಮನನ್ನು ಬೇತಾಳಗಳಾಗಿ ಕಾಡುತ್ತವೆ. ಹಾಗೆ ಕಥೆ ಕಾಣುವ ಮೂಲಕ ಓದುಗರಿಗೆ - ಸ್ವತಃ ಲೋಕವೇ ರಬಹುದೆ, ಸ್ಥಿರವೂ ನಿಶ್ಚಿತವೂ ಎಂದು ನಾವು ತಿಳಿದ ಈ ಜೀವನವ್ಯಾಪಾರಗಳು ಕೇವಲ ಮನೋನಿರ್ಮಿತಿಗಳೆ? - ಎಂಬೊಂದು ಗುಮಾನಿ ಉದ್ಭವಿಸಿದರೆ ಅದು ಕಾಕತಾಳೀಯವಾಗಿರಲಾರದೇನೋ….
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)