Sundar Babu
ಸಾಧಕರ 8 ವಿಶೇಷ ಗುಣಗಳು
ಸಾಧಕರ 8 ವಿಶೇಷ ಗುಣಗಳು
Publisher -
- Free Shipping Above ₹350
- Cash on Delivery (COD) Available*
Pages -
Type -
Couldn't load pickup availability
ಎಂಟು ಎಂದರೆ ಸಂಸ್ಕೃತದಲ್ಲಿ 'ಅಷ್ಟ'. ಅಷ್ಟ ಸಿದ್ಧಿ ಸಾಧಿಸಿದರೇನೆ ಯೋಗಿಯಾಗಲು ಸಾಧ್ಯ. ಅಷ್ಟಾಂಗ ಯೋಗ ಮಾಡಿದರೇನೆ ಆರೋಗ್ಯವಂತರಾಗಿರಲು ಸಾಧ್ಯ. ಅಷ್ಟ ದಿಕ್ಕುಗಳಿಂದ ಅರಿವಿನ ಬೆಳಕು ಪಡೆದರೇನೆ ಜ್ಞಾನಿಯಾಗಲು ಸಾಧ್ಯ. ಹಾಗೆಯೇ ಸಾಧಕರಾಗಲು ಕೂಡ ಬೇಕಾಗಿರುವುದು ಅಷ್ಟ ಎಂದರೆ ಎಂಟು ಗುಣಗಳು.
ಈ ಗುಣಗಳು ಯಾವುವು, ಈಗಲೂ ಇವು ಪ್ರಸ್ತುತವೇ ಎಂದು ಚರ್ಚಿಸುತ್ತಲೇ ಆರಂಭವಾಗುವ ಈ ಕೃತಿ, ನಮ್ಮ ನಡುವಿನ ಸಾಧಕರನ್ನು ಮುಖಾಮುಖಿಯಾಗಿಸಿ, ಅವರ ಗುಣ ವಿಶೇಷಗಳನ್ನು ನಮಗೆ ಪರಿಚಯಿಸುತ್ತಾ ಹೋಗುತ್ತದೆ. ನಮಗರಿವಿಲ್ಲದಂತೆಯೇ, ನಮ್ಮಲ್ಲಿನ ನಕಾರಾತ್ಮಕ ಧೋರಣೆಗಳಿಗೆ 'ಅಷ್ಟಬಂಧ' ಹಾಕಿ, ಸಾಧನೆಯ ಮೆಟ್ಟಿಲುಗಳನ್ನು ಏರಲು ಪ್ರೇರಣೆ ನೀಡುತ್ತದೆ.
ಸರಳ ಭಾಷೆ, ವಿಷಯ ಮನದಟ್ಟು ಮಾಡಿಸಲು ಉದಾಹರಿಸಿದ ದೃಷ್ಟಾಂತಗಳು ನಮ್ಮನ್ನು ಹಿಡಿದಿಡುತ್ತವೆ. ಪ್ರತಿಯೊಂದು ಗುಣಗಳನ್ನು ವಿವರಿಸುತ್ತಲೇ ಅವುಗಳನ್ನು ಸಿದ್ಧಿಸಿಕೊಳ್ಳಲು ಉಪಯುಕ್ತ ಟಿಪ್ಸ್ ನೀಡಿರುವುದು ಈ ಪುಸ್ತಕದ ಪ್ಲಸ್ ಪಾಯಿಂಟ್. ಜತೆಗೆ ವಿಷಯಕ್ಕೆ ಸಂಬಂಧಿಸಿದಂತೆ ಸಾಧಕರು, ಜ್ಞಾನಿಗಳು ಏನು ಹೇಳಿದ್ದಾರೆ, ಅವರ ಗ್ರಹಿಕೆ ಏನು ಎಂಬುದನ್ನು ಒಂದೆರಡು ವಾಕ್ಯಗಳಲ್ಲಿ ನೀಡಿರುವುದು ಬೋನಸ್!
ಏನನ್ನಾದರೂ ಸಾಧಿಸಲೇಬೇಕು ಎಂಬ ತುಡಿತವಿರುವವರೆಲ್ಲರಿಗೂ ಉಪಯುಕ್ತವಾದ ಮಾರ್ಗದರ್ಶಿ ಪುಸ್ತಕವಿದು. ಇಲ್ಲಿರುವ ಎಂಟು ವಿಷಯಗಳೊಂದಿಗೆ ನಿಮ್ಮ ನಂಟು ಬೆಳೆದರೆ, ಸಾಧನೆಯ ಶಿಖರವನ್ನೇರುವ ನಿಮ್ಮ ದಾರಿ ಸುಗಮವಾಗಿರಲಿದೆ. ಅಷ್ಟು ಮಾತ್ರವಲ್ಲ, ಅಷ್ಟ ಐಶ್ವರ್ಯವೂ ಒಲಿದು ಬರಬಹುದು!
- ರಾಮಸ್ವಾಮಿ ಹುಲಕೋಡು.
Share

Subscribe to our emails
Subscribe to our mailing list for insider news, product launches, and more.