Skip to product information
1 of 2

D. S. Chowgale

ಸದರಬಜಾರ್

ಸದರಬಜಾರ್

Publisher - ವೀರಲೋಕ ಬುಕ್ಸ್

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 120

Type - Paperback

ಡಿ.ಎಸ್. ಚೌಗಲೆ ಅವರ ಕಾದಂಬರಿ 'ಸದರಬಜಾರ್'ಹಲವು ವರ್ಗಗಳ ಓದುಗರಿಗೆ ಅಪರಿಚಿತವಾದ ಸಾಮಾಜಿಕ ಲೋಕವೊಂದನ್ನು ತೆರೆದಿಡುತ್ತದೆ. ಕರ್ನಾಟಕ ಮಹಾರಾಷ್ಟ್ರಗಳ ಗಡಿಭಾಗ, ಈಚಲ್‌ಕರಂಜಿ, ಅಬ್ದುಲ್‌ ಲಾಟ್ ಇವು ಜವಳಿ ಉದ್ಯಮ, ಸಕ್ಕರೆ ಕಾರಖಾನೆಗಳು ಇವುಗಳಿಂದ ಬೆಳೆದ ವಿಶಾಲವಾದ ಕಾರ್ಮಿಕರ ಕಾಲನಿಗಳಂತೆ ಬೆಳೆದ ಊರುಗಳು. ఇಲ್ಲಿಗೆ ಕೆಲಸ ಹುಡಿಕೊಂಡು ಬಂದವರು, ಬರಗಾಲದಲ್ಲಿ ಗುಳೆ ಹೊರಟು ಬಂದವರು, ಕುಟುಂಬ ಹಾಗೂ ಸಮಾಜಗಳ ದೌರ್ಜನ್ಯಗಳಿಂದಾಗಿ ಓಡಿ ಬಂದು ಇಲ್ಲಿ ವೇಶೈಯರಾಗಿ ಬದುಕುತ್ತಿರುವವರು- ಇವರಲ್ಲಿ ಬಹುಪಾಲು ಕರ್ನಾಟಕದವರು, ಕನ್ನಡ ಭಾಷಿಕರು. ಗಡಿ ಭಾಗಗಳಲ್ಲಿ ಸಹಜವಾಗಿರುವ ಸಂಕರ ಭಾಷೆಯಲ್ಲಿ ಮಾತನಾಡುವವರು. ಕೆಲವರು ತಾಯಿನುಡಿಯನ್ನು ಮರೆತವರು. ಈ ಸಮಗ್ರ ಸಾಮಾಜಿಕ ಲೋಕವನ್ನು ಚೌಗಲೆಯವರು ತಮ್ಮ ವಿಶಿಷ್ಟವಾದ ಶೈಲಿಯಲ್ಲಿ ಈ ಕೃತಿಯಲ್ಲಿ ನಿರೂಪಿಸಿದ್ದಾರೆ. ಕಥನದ ಮಾದರಿ ವಾಸ್ತವ ವಾದವನ್ನು ಮೀರಿದ naturalism ಎಂದು ಒಂದು ಕಾಲಕ್ಕೆ ಪ್ರಸಿದ್ಧವಾದ ಮಾದರಿಯಿದು. ಶಿಷ್ಟ ಸಮಾಜವು ನೋಡಲು ಬಯಸದ ಕೊಳೆಗೇರಿಗಳ, ವೇಶ್ಯಾವಾಟಿಕೆಗಳ, ಶ್ರಮಜೀವಿ ಬದುಕಿನ ಬಡತನ, ಹತಾಶೆಗಳ ಜೊತೆಗೆ ಬದುಕಬೇಕೆನ್ನುವ ಛಲ ಇವುಗಳನ್ನು ಕೆಲವೊಮ್ಮೆ ಓದುಗರಿಗೆ ಶಾಕ್ ಅಗುವಂಥ ವಿವರಗಳು ಹಾಗೂ ಭಾಷೆಯ ಮೂಲಕ ಬಿಚ್ಚಿಡುವ ಮಾದರಿ ಇದಾಗಿದೆ. ವಿಡಿಯೋ ಕ್ಯಾಸೆಟ್‌ಗಳು ಹಳ್ಳಿಗಳಿಗೂ ಪ್ರವೇಶ ಮಾಡಿ ವಿಡಿಯೋ ಪಾರ್ಲ‌ರ್ ಗಳಲ್ಲಿ ನೀಲಿ ಚಿತ್ರಗಳನ್ನು ತೋರಿಸುವುದರಿಂದ ಉಂಟಾದ ಬದಲಾವಣೆಗಳ ವರ್ಣನೆಯಿಂದ ಆರಂಭವಾಗುವ ಈ ಕೃತಿ ಮುಂದೆ ಶಿವೂನ ಪ್ರಜ್ಞೆಯ ಮೂಲಕ ಸಾಮಾಜಿಕ ವಾಸ್ತವಗಳ ದಾಖಲೆಯನ್ನು ಮಾಡುತ್ತದೆ. ಇದರಲ್ಲಿ ಲೈಂಗಿಕತೆ, ಸ್ಥಳೀಯ ರಾಜಕೀಯ, ಕಾರ್ಮಿಕರ ಸಂಘಟನೆಗಳು, ಸದರಬಜಾರ್‌ನಂಥ ಕೆಂಪು ದೀಪದ ನರಕಗಳು ಇವೆಲ್ಲವು ಕೃತಿಗೆ ಬಂದು ಸೇರುತ್ತವೆ. ಕೃತಿಯ ಪ್ರಭಾವಿಯಾದ ಕೇಂದ್ರ ರೂಪಕವೆಂದರೆ 'ಸದರಬಜಾರ್'. ಮನುಷ್ಯ ಜೀವಿಗಳನ್ನು ಮಾರುಕಟ್ಟೆಯ ವಸ್ತುಗಳನ್ನಾಗಿಸುವ ಬಂಡವಾಳದ ಮೂರ್ತ ರೂಪವಾಗಿದೆ ಇದು. ಮಮಷ್ಯ ಜೀವಿಗಳ ಸ್ವಭಾವದ ಮೂಲದಲ್ಲಿಯೇ ಇರುವ ಅದಿಮ ಪ್ರವೃತ್ತಿಗಳ ಸಂಕೇತವೂ ಆಗಿದೆ. ಇದರ ಸುತ್ತ ಹಾಗೂ ಹಲವು ಊರುಗಳ ಸುತ್ತ ಚಲಿಸುವ ಈ ಕೃತಿಯಲ್ಲಿ ತಮ್ಮ ಜೀವಂತಿಕೆಯ ಮೂಲಕ ನಮ್ಮನ್ನು ಅವರಿಸಿಕೊಳ್ಳುವ ಹತ್ತಾರು ಪಾತ್ರಗಳಿವೆ. ನಿರೂಪಕನು ಕೇಳುವ ಅನೇಕ ಪ್ರಶ್ನೆಗಳಿಗೆ ನಮ್ಮಲ್ಲಿ, ನಮ್ಮ ಸಮಾಜಗಳಲ್ಲಿ ಜವಾಬು ಇಲ್ಲ ಎನ್ನುವುದೇ ಕಟು ವಾಸ್ತವವಾಗಿದೆ.

-ರಾಜೇಂದ್ರ ಚೆನ್ನಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)