M. K. Gupta
Publisher - ವಸಂತ ಪ್ರಕಾಶನ
Regular price
Rs. 110.00
Regular price
Sale price
Rs. 110.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ನಮ್ಮ ದಿನನಿತ್ಯದ ಬದುಕು ಹಲವು ಸಮಸ್ಯೆಗಳ ಗೋಜಲು, ಬದುಕಿನ ಸಣ್ಣ ಸಣ್ಣ ಕ್ಷಣಗಳನ್ನು ಕೂಡ ಅನುಭವಿಸುವ ವ್ಯವಧಾನ ನಮಗಿಲ್ಲ. ಎಲ್ಲರಿಗೂ ಒಂದಲ್ಲ ಒಂದು ಬಗೆಯ ಅವಸರ, ಧಾವಂತ. ಇದರ ಪರಿಣಾಮವಾಗಿ ನಮ್ಮಲ್ಲಿ ಸುಖ ಸಂತೋಷದ ಕಲ್ಪನೆ ಕೂಡ ಮಾಯವಾಗುವಂಥ ಸ್ಥಿತಿ. ಆದರೆ ಸಂತೋಷ ಯಾರಿಗೆ ಬೇಡ? ಎಂ.ಕೆ. ಗುಪ್ತ ಬರೆದಿರುವ 'ಸದಾ ಸಂತೋಷ: ಹೇಗೆ? ಎಂತು?' ಎಂಬ ಈ ಕೃತಿಯಲ್ಲಿ ಸಂತೋಷವೆಂದರೇನು, ಅದನ್ನು ಪಡೆಯುವುದು ಹೇಗೆ ಎಂಬ ಪ್ರಶ್ನೆಗಳಿಗೆ ಅನೇಕಾನೇಕ ಸೂತ್ರಪಾಠಗಳಿವೆ. ಈ ಸೂತ್ರಪಾಠಗಳು ತಮಗೆ ತಾವೇ ಪರಿಪೂರ್ಣವಾಗಿದ್ದು ಇವು ಓದುಗರಿಗೆ ಈ ವಿಷಯದಲ್ಲಿ ಸೂಕ್ಷ್ಮ ಒಳನೋಟಗಳುಳ್ಳ ಮಾರ್ಗದರ್ಶನ ನೀಡಬಲ್ಲವು. ಲೇಖಕರು ತಾವು ಪ್ರತಿಪಾದಿಸುವ ವಿಷಯಗಳನ್ನು ಒಂದು ಅಥವಾ ಎರಡು ಪುಟಗಳೊಳಗೇ ತೀರ ಅಡಕವಾಗಿ, ಮನಮುಟ್ಟುವಂತೆ ವಿಶದಪಡಿಸಿದ್ದಾರೆ. ಒಟ್ಟಿನಲ್ಲಿ ಬದುಕನ್ನು ಅರ್ಥಪೂರ್ಣವಾಗಿ, ಸಂತೋಷದಾಯಕವಾಗಿ ರೂಪಿಸಕೊಳ್ಳಬಯಸುವವರಿಗೆ ಈ ಪುಸ್ತಕ ಒಂದು ಕೈದೀವಿಗೆಯಿದ್ದಂತೆ.
ಎಂ.ಕೆ. ಗುಪ್ತ ವೃತ್ತಿಯಿಂದ ಒಬ್ಬ ಇಂಜಿನಿಯರ್, ಆದರೆ ಪಾರಮಾರ್ಥಿಕದ ಕಡೆಯೇ ಅವರ ಒಲವು. ಈ ಭೂಮಿಯ ಮೇಲೆ ಯಾವುದೇ ಅರ್ಥವಿಲ್ಲದೆ, ಉದ್ದೇಶವಿಲ್ಲದೆ ಬದುಕುವುದೆಂದರೆ ಅದು ಕತ್ತಲುಕವಿದ ಕಾಡಿನಲ್ಲಿ ಕಳೆದುಹೋದಂತೆ ಎನ್ನುವ ಅವರು ತತ್ವಶಾಸ್ತ್ರವನ್ನೂ ಬದುಕಿನ ರಹಸ್ಯವನ್ನೂ ಆಳವಾಗಿ ಅಭ್ಯಾಸ ಮಾಡಿರುವವರು. ಆದ್ದರಿಂದ ಅವರ ಈ ಕೃತಿಗೆ ಒಂದು ಬೌದ್ಧಿಕ ಆಯಾಮವೂ ಲಭಿಸಿದಂತಾಗಿದೆ.
ಈ ಅಪರೂಪದ ಕೃತಿಯನ್ನು ತುಂಬ ಸೊಗಸಾಗಿ ಅನುವಾದಿಸಿರುವವರು ಖಾದ್ರಿ ಎಸ್. ಅಚ್ಯುತನ್, ಅವರು ಕನ್ನಡದ ಪ್ರಸಿದ್ಧ ಲೇಖಕರು ಮತ್ತು ಪತ್ರಕರ್ತರು.
ವಸಂತ ಪ್ರಕಾಶನ