Sudha Murthy
Publisher - ಸಪ್ನ ಬುಕ್ ಹೌಸ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ನಮ್ಮ ಉತ್ತರ ಕರ್ನಾಟಕದಲ್ಲಿರುವ ಸಂಸ್ಕೃತಿ, ಮಾತಿನ ಧಾಟಿ, ಛಾಯೆಯೇ ಬೇರೆ, ಪ್ರತಿ ಪ್ರದೇಶಕ್ಕೂ ಅದರದೇ ಆದ ವಿಶಿಷ್ಟತೆ ಇದೆ. ಈ ಹಿನ್ನೆಲೆಯಲ್ಲಿ ನಾನು ಕೆಲವು ವ್ಯಕ್ತಿ ಚಿತ್ರಗಳನ್ನು ಬರೆಯಬೇಕೆಂದು ಒಂದೂವರೆ ದಶಕಗಳ ಹಿಂದೆಯೇ ವಿಚಾರ ಮಾಡಿದ್ದೆ. ಆದರೆ ಬರೆಯಲು ಅನೇಕ ಕಾರಣಗಳಿಂದ ಆಗಿರಲೇ ಇಲ್ಲ.
ನೇರ ಮಾತಿನ, ಸ್ಪಷ್ಟ ನುಡಿಯ ಈ ಸಂಸ್ಕೃತಿಯು ಅನೇಕರಿಗೆ ಅಚ್ಚರಿ ತರಬಹುದು, ಆದರೆ ಅದರಿಂದ ವ್ಯಕ್ತಿ ಪಾರದರ್ಶಕನಾಗುತ್ತಾನೆ. ನಮ್ಮೂರಲ್ಲಿ ಯಾವ ವ್ಯಕ್ತಿಯೂ ಅಜ್ಞಾತವಾಗಿ 'ಹೊರಗೊಂದು ಒಳಗೊಂದು ವಿಚಾರ ಮಾಡುವದೇ ಇಲ್ಲ. ಮೇಲೆ ಒರಟಾಗಿ ಕಂಡರೂ ಪ್ರೇಮ, ಪರೋಪಕಾರ, ಅಂತಃಕರಣದಲ್ಲಿ ನಮ್ಮ ಉತ್ತರ ಕರ್ನಾಟಕ ವಾತ್ಸಲ್ಯದ ಸೆಲೆಯಾಗಿದೆ. ವ್ಯವಹಾರ ಹೀನರಿದ್ದರೂ ನುಣುವು ಮಾತಿನ ನಯವಿಲ್ಲದಿದ್ದರೂ ಅತ್ಯಂತ ಸರಳ ಸಮಾಜವಾಗಿದೆ. ಇಂಥ ಸಮಾಜದಲ್ಲಿ ಬೆಳೆದ ನನಗೆ ಜೀವನದಲ್ಲಿ ಅನೇಕ ಕಷ್ಟದ ಪರಿಸ್ಥಿತಿಯಲ್ಲಿ ಈ ಎಲ್ಲಾ ಗುಣಗಳು ದಾರಿದೀಪವಾಗಿವೆ.
ಈ ವ್ಯಕ್ತಿಗಳೆಲ್ಲಾ ಹೊರದೃಷ್ಟಿಯಿಂದ ಅತ್ಯಂತ ಸಾಮಾನ್ಯರು. ಆದರೆ ಅವರಲ್ಲಿ ಅಸಾಮಾನ್ಯ ಗುಣಗಳಿವೆ. ಅವರೆಲ್ಲರೂ ಮಧ್ಯಮ, ಕೆಳಮಧ್ಯಮ ಆರ್ಥಿಕ ಕುಟುಂಬದಿಂದ ಬಂದವರು. ಇದು ಯಾರನ್ನೂ ಕುರಿತು ಬರೆದಿಲ್ಲ. ನಮ್ಮ ಉತ್ತರ ಕರ್ನಾಟಕದ ಸಾಮಾನ್ಯ ಜನಜೀವನ ಕುರಿತಾಗಿದೆ.
ಇದನ್ನು ಧಾರವಾಹಿಯಾಗಿ ಪ್ರಕಟಿಸಿದ ಸಂಯುಕ್ತ ಕರ್ನಾಟಕದ ಸಂಪಾದಕ ವರ್ಗಕ್ಕೆ, ಲೋಕಶಿಕ್ಷಣ ಟ್ರಸ್ಟಿಗೆ ಅತ್ಯಂತ ಕೃತಜ್ಞಳು. ಓದುಗರೇ, ನಿಮ್ಮ ಸ್ಪಂದನಕ್ಕೆ ನಾನು ಸದಾ ಸಿದ್ಧ. ನೀವೇ ನನ್ನ ಸ್ಫೂರ್ತಿಯ ಸೆಲೆ.
ಸುಧಾಮೂರ್ತಿ
ಪ್ರಕಾಶಕರು - ಸಪ್ನ ಬುಕ್ ಹೌಸ್
