Dr. B. G. L Swamy
Publisher - ವಸಂತ ಪ್ರಕಾಶನ
- Free Shipping
- Cash on Delivery (COD) Available
Pages -
Type -
Couldn't load pickup availability
ಬಿಜಿಎಲ್ ಸ್ವಾಮಿಯವರು ತನ್ಮಯತೆಯ ಸಂಶೋಧನೆಗೂ ಹೆಸರು, ತಿಳಿಯ ಹಾಸ್ಯಕ್ಕೂ ಹೆಸರು, ತೀವ್ರತಮ ಓದಿಗೂ ಹೆಸರು. ಸಸ್ಯಗಳನ್ನು ವೈಜ್ಞಾನಿಕವಾಗಿ ವಿವರಿಸುವಾಗ ಅವರಿಗೆ ಸಂದರ್ಭೋಚಿತವಾಗಿ ಕನ್ನಡ ಸಂಸ್ಕೃತ ತಮಿಳು ಸಾಹಿತ್ಯದ ಸಾಲುಗಳೂ ವಚನಗಳೂ ನೆನಪಾಗಿ ಅವುಗಳನ್ನು ತಮ್ಮ ವಿವರಣಿಗಳಲ್ಲಿ ಪೋಣಿಸುತ್ತಾರೆ. ಹೀಗೆ ಹದವಾಗಿ ರೂಪುಗೊಳ್ಳುವ ಅವರ ಲೇಖನಗಳನ್ನು ಓದುವುದೇ ಒಂದು ವಿಶಿಷ್ಟ ಅನುಭವ
ಪ್ರಸ್ತುತ ತಮ್ಮ ಸಾಕ್ಷಾತ್ಕಾರದ ದಾರಿಯಲ್ಲಿ' ಕೃತಿಯಲ್ಲಿ ಅವರು ಎಲೆ ಅಡಕೆ, ಅಫೀಮು-ಗಾಂಜಾ, ತಂಬಾಕು, ಕಾಫಿ-ಟೀಗಳ ಮಾತೃ ಸಸ್ಯಗಳನ್ನು ವಿವೇಚಿಸುತ್ತ ಅವುಗಳ ಮೂಲ, ಅವು ಭಾರತಕ್ಕೆ ಬಂದ ಬಗೆಯನ್ನೂ ವಿವರಿಸಿದ್ದಾರೆ. ಜೊತೆಗೆ ಅನೇಕರ ಬದುಕಿನಲ್ಲಿ ಹಾಸುಹೊಕ್ಕಾಗಿಡುವ 'ಚಟ'ವನ್ನೂ ವಿಶ್ಲೇಷಣಿಗೆ ಒಡ್ಡಿದ್ದಾರೆ.
ಕೃತಿಯ ಉದ್ದಕ್ಕೂ ಬಿಜಿಎಲ್ ಸ್ವಾಮಿಯವರ ಎಂದಿನ ಚೇತೋಹಾಲಿ ಸಾಲುಗಳು ಓದುಗರನ್ನು ಪುಳಕಿತಗೊಆಸುತ್ತ ವಿಶಿಷ್ಟ ಅನುಭವಗಳಿಗೆ ಈಡು ಮಾಡುತ್ತವೆ.
ವಸಂತ ಪ್ರಕಾಶನ
