H. S. Venkatesha Murthy
ಋತುವಿಲಾಸ
ಋತುವಿಲಾಸ
Publisher - ಅಭಿನವ ಪ್ರಕಾಶನ
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಸಂಸ್ಕೃತದ ಉತ್ಕೃಷ್ಟ ಕಾವ್ಯ ಪರಂಪರೆಯ ನಿರಂತರ ಸಂಪರ್ಕದಿಂದ ಭಾರತೀಯ ಸಮಕಾಲೀನ ಕವಿಗಳು ತಮ್ಮ ವ್ಯಕ್ತಿ ಪ್ರತಿಭೆಯಲ್ಲಿ ಹೊಸ ಪ್ರಯೋಗಗಳನ್ನು ತರಲು ಸಾಧ್ಯ ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ. ವೆಂಕಟೇಶಮೂರ್ತಿಯವರ 'ಋತುವಿಲಾಸ' ಈ ಒಂದು ಪ್ರಶ್ನೆಯ ಪ್ರತೀಕವಾಗಿದೆ.
ಕಾಳಿದಾಸನ 'ಋತುಸಂಹಾರ'ದಂಥ ಕೃತಿ ಸಂವೃದ್ಧವಾದ ಜೀವನಪ್ರೀತಿಯಿಂದ ಮಾತ್ರ ಮೂಡುವಂಥದು. ಇಂಥ ಕೃತಿಗಳ ಪರಿಚಯ ಮತ್ತು ಅವುಗಳನ್ನು ನಮ್ಮ ಭಾಷೆಯಲ್ಲಿ ಪುನರ್ಭವಗೊಳಿಸುವ ಸೃಜನಾತ್ಮಕ ಪ್ರಯತ್ನಗಳಿಂದ ನಮ್ಮ ಸುತ್ತಣ ನಿಸರ್ಗದೊಂದಿಗೆ ಅರ್ಥಪೂರ್ಣವಾದ ಸಂಬಂಧವನ್ನು ನಾವು ವಿಸ್ತರಿಸಿಕೊಳ್ಳುವುದು ಸಾಧ್ಯ. ಡಾ. ವೆಂಕಟೇಶಮೂರ್ತಿ ಅವರ `ಋತುವಿಲಾಸ ಕಾಳಿದಾಸನ “ಋತುಸಂಹಾರ'ದ ಒಂದು ಅನನ್ಯ ಪುನರ್ಭವವಾಗಿದೆ. ಭಾಷೆಯ ಅರ್ಥ-ನಾದ-ಲಯಗಳ ಅಪೂರ್ವ ಸಾಮರಸ್ಯದ ಈ ಕೃತಿ ಓದುಗನಿಗೆ ಚೇತೋಹಾರಿಯಾದ ಅನುಭವ ಕೊಡುವುದರಲ್ಲಿ ಸಂದೇಹವಿಲ್ಲ.
-ಜಿ. ಎಸ್. ಶಿವರುದ್ರಪ್ಪ
'ಋತುವಿಲಾಸ'ವನ್ನು ವಿವರವಾಗಿ ಓದಿದೆ. ಇದು ಕನ್ನಡದ ಅನುವಾದಗಳ ರಾಶಿಯಲ್ಲೇ ಗಣನೀಯವಾಗಿ ತೋರುವ ಅನುವಾದ-ನಿಸ್ಸಂಶಯ. ಕಾಳಿದಾಸನ ಸಮಾಸಗಳನ್ನು ಕನ್ನಡದ ಜಂಟಿ ಪದಗಳಲ್ಲಿ ಹಿಡಿದಿಡುವುದು ಒಂದು ಯಶಸ್ವೀ ತಂತ್ರ ಪುತಿನ, ಕೀರ್ತಿನಾಥ ಇವರೆಲ್ಲರ ಹೊಗಳಿಕೆಯಲ್ಲಿ ಏನೇನೂ ಉತ್ಪ್ರೇಕ್ಷೆಯಿಲ್ಲ.
-ಕೆ. ವಿ. ಸುಬ್ಬಣ್ಣ

Share
Subscribe to our emails
Subscribe to our mailing list for insider news, product launches, and more.