Skip to product information
1 of 2

Akshatha Pandavapura

ರುಚಿಗೆ ತಕ್ಕಷ್ಟು...?

ರುಚಿಗೆ ತಕ್ಕಷ್ಟು...?

Publisher - ವೀರಲೋಕ ಬುಕ್ಸ್

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 148

Type - Paperback

Gift Wrap
Gift Wrap Rs. 15.00

ವಸ್ತ್ರವಿನ್ಯಾಸ, ರುಚಿಕಟ್ಟಾದ ಅಡುಗೆಯೂ ಸೇರಿದಂತೆ ದಶಾವತಾರಗಳಲ್ಲಿ ಮುಖ್ಯವಾಗಿ ಅಭಿನೇತ್ರಿಯಾಗಿರುವ ಅಕ್ಷತಾ, ಏನೇ ಮಾಡಿದರೂ ಅಲ್ಲಿ ತಮ್ಮ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ದಾಖಲಿಸುತ್ತಾರೆ. ಇವರ ಬರಹಗಳು ಕೂಡ ಇದರದ್ದೇ ಒಂದು ವಿಸ್ತರಣೆ.

ಹಿಂದೆ ಲೀಕ್ ಔಟ್ ಕತೆಗಳನ್ನು ಪ್ರಕಟಿಸಿ, ಅವನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಜನ - ನಾಟಕವನ್ನಾಗಿಸಿ ಯಶಸ್ವಿಯಾಗಿದ್ದರು ಅಕ್ಷತಾ. ಏನೇ ಮಾಡಿದರೂ ಜನರನ್ನು ಒಳಗೊಳಿಸಿಕೊಂಡೇ ಮಾಡುವ ಇವರ ಅಡುಗೆ ಮಾತು ಪ್ರಯೋಗವೂ ಅಷ್ಟೇ ವಿಭಿನ್ನ. ಇವರ 'ರುಚಿಗೆ ತಕ್ಕಷ್ಟು' ಕತೆಗಳು ಮುಂದೆ ಇಂಥದೇನೋ ಟ್ವಿಸ್ಟ್ ಕೊಡುವ ಸುಳಿವಿನೊಂದಿಗೇ ಹೆಣೆದುಕೊಂಡಂತೆ ತೋರುತ್ತವೆ.

ಯಾವುದೇ ಗೋಜಲು, ಸಂಕೀರ್ಣತೆ ಅಥವಾ ಮುದ್ರೆಗಳ ಭಾರವಿಲ್ಲದೆ ವಿಶೇಷವಾಗಿ ಹೆಣ್ಣುಮಕ್ಕಳ ಮನಸ್ಸನ್ನು ಕತೆಯಾಗಿಸುವ ಕಲೆ ಇವರಿಗೆ ಸಿದ್ದಿಸಿದೆ. ಪ್ರತಿಯೊಂದನ್ನೂ ಕುತೂಹಲದಿಂದ ಮತ್ತು ಅಷ್ಟೇ ಬೆರಗಿನಿಂದ ಗಮನಿಸುವ ಅಕ್ಷತಾ ಕತೆ ಹೆಣೆಯಲು ಬೇಕಿರುವ ಮೂಲಭೂತ ವಿನಮ್ರತೆ ಹೊಂದಿದ್ದಾರೆನ್ನುವುದೇ ಮುಂದಿನ ದಿನಗಳ ಅಪಾರ ಸಾಧ್ಯತೆಗಳ ಮುನ್ನುಡಿಯಾಗಿದೆ. ಅವರ ಈ ಕುತೂಹಲ ಮತ್ತು ಬೆರಗು, ಗ್ರಹಿಕೆ ಮತ್ತು ಅದನ್ನು ದಾಟಿಸುವ ಸಾಮರ್ಥ್ಯಗಳಿಗೆ ಈ ಸಂಕಲನದಲ್ಲಿನ ಕತೆಗಳು ಕನ್ನಡಿ ಹಿಡಿಯುತ್ತವೆ.

ಮೊನ್ನೆ ಜನಮನ, ನೆನ್ನೆ ಸಿನೆಮಾ, ಇವತ್ತು ಬರವಣಿಗೆ, ನಾಳೆ ನಾಟಕ ಎಂದೆಲ್ಲ ಖುದ್ದು ತಾವೇ ಚಲಿಸುವ ಕತೆಯಾಗಿರುವ ಅಕ್ಷತಾರ ಕತೆಗಳು ತಮ್ಮನ್ನು ಉಲ್ಲಾಸದಿಂದ ಓದಿಸಿಕೊಳ್ಳುತ್ತವೆ. ಖಂಡಿತವಾಗಿಯೂ ಒಮ್ಮೆ ಇವುಗಳ ರುಚಿ ನೋಡಬಹುದು.

-ಚೇತನಾ ತೀರ್ಥಹಳ್ಳಿ 

View full details