Anantha Kunigal
ರೌದ್ರಾವರಣಂ - ಕಾದಂಬರಿ
ರೌದ್ರಾವರಣಂ - ಕಾದಂಬರಿ
Publisher -
- Free Shipping Above ₹350
- Cash on Delivery (COD) Available*
Pages -
Type -
Couldn't load pickup availability
'ರೌದ್ರಾವರಣಂ' ಉತ್ಸಾಹಿ ತರುಣ ಅನಂತ ಅವರ ಚೊಚ್ಚಲ ಕಾದಂಬರಿ ರೋಚಕತೆ, ಬಿಗಿ ನಿರೂಪಣೆ, ಅನೇಕಾನೇಕ ತಿರುವು, ನಾಟಕೀಯತೆ ಈ ಕಾದಂಬರಿಯ ಗಮನ ಸೆಳೆಯುವ
ಸೆಳೆಯುವ ಅಂಶಗಳು.
ಕಮ್ಮಾರ ಬಾಬಣ್ಣ ಮತ್ತು ಆತನ ಸಂಗಾತಿಯೇ ಆಗಿ ಹೋಗಿರುವ ಚಂದ್ರ ಎನ್ನುವ ನಾಯಿಯ ಸುತ್ತ ಕಥೆ ಹೆಣೆದಂತೆ ಕಂಡರೂ, ಊರುಕೇರಿ, ಧರ್ಮಶೋಷಣೆ, ಸಿರಿವಂತಿಕೆಯ ದರ್ಪ-ದಬ್ಬಾಳಿಕೆ ಇತ್ಯಾದಿಗಳು ಕಥೆಯುದ್ದಕ್ಕೂ ಇಣುಕುತ್ತವೆ. ಅನಂತ ಅವರು ಚಿತ್ರರಂಗಕ್ಕೆ ಸೇರಿರುವ ಲೇಖಕ, ಹೀಗಾಗಿಯೇ, ಸಿನಿಮೀಯತೆ ಚೌಕಟ್ಟು ಮೀರಿ ಬೆಳೆಯುವ ಕಥಾನಾಯಕನ ಪಾತ್ರ, ಕೆಲವೊಮ್ಮೆ ಇದು ಸಾಧ್ಯವೆ? ಎಂಬಂಥ ಪ್ರಸಂಗಗಳು ಇಲ್ಲಿ ಕಾಣುತ್ತವೆ.
ಆಕರ್ಷಕವಾಗಿ ಕಥೆ ಹೇಳುವುದು ಓದುಗನನ್ನು ಚಕ್ರವ್ಯೂಹಕ್ಕೆ ತಳ್ಳಿ ಅಚ್ಚರಿಯುಂಟು ಮಾಡುವುದು ಮತ್ತು ರಂಜನೆ ಒದಗಿಸುವುದರಲ್ಲಿ ಅನಂತ ಅವರು ಗೆದ್ದಿದ್ದಾರೆ. ಕಥೆ ಕಟ್ಟುವ ಕಲೆಯನ್ನು ಕರಗತ ಮಾಡಿಕೊಳ್ಳುವಲ್ಲಿ ನಿರತರಾಗಿರುವ ಇವರು ಮುಂದಿನ ದಿನಗಳಲ್ಲಿ ವಾಸ್ತವ ಮಾರ್ಗದ, ಬದುಕಿನ ಸಂಕೀರ್ಣತೆಯನ್ನು ಅದರೆಲ್ಲ ಸ್ತರಗಳಲ್ಲಿ ನೋಡುವ ಕಣ್ಣುಗಳನ್ನು ಪಡೆಯಲಿ. ಕಥಾ ಕಸುಬಿಗೆ ಬೇಕಾದ ಪರಿಕರಗಳು ಈಗಾಗಲೇ ಅವರ ಬಳಿ ಇವೆ.
-ಕೇಶವ ಮಳಗಿ
Share

Subscribe to our emails
Subscribe to our mailing list for insider news, product launches, and more.