Skip to product information
1 of 2

Koushik Koodurasthe

ರೋಲ್ ಕ್ಯಾಮೆರಾ ಮರ್ಡರ್

ರೋಲ್ ಕ್ಯಾಮೆರಾ ಮರ್ಡರ್

Publisher - ಸ್ನೇಹ ಬುಕ್ ಹೌಸ್

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 232

Type - Paperback

Gift Wrap
Gift Wrap Rs. 15.00

ನಾವು ಹೋಗ್ತಿರೋ ಜಾಗ ಸರಿಯಿಲ್ಲ ಅನ್ನೋದು ನಿನಗೂ ಗೊತ್ತು. ಭಾರತದ ಟಾಪ್ - 10 ಹಾಂಟೆಡ್ ಜಾಗಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ಮನುಷ್ಯ ಸಂಪರ್ಕವಿಲ್ಲದ, ದ್ವೀಪದ ನಡುವೆಯಿರೋ ಪಾಳು ಬಿದ್ದ ಹಳೆಯ ಬ್ರಿಟಿಷ್ ಬಂಗಲೆಯದು. ಅದನ್ನು ವಶಪಡಿಸಿಕೊಳ್ಳೋಕೆ ಅಂತ ಹೋದ ಎಷ್ಟೋ ಮೀನುಗಾರರು ಬದುಕಿ ಬ೦ದಿಲ್ವಂತೆ! ಮನುಷ್ಯರ ರಕ್ತ ಹೀರುವ ರಾಕ್ಷಸ ಜಾಗವದು ಅಂತ ಈ ಸಮುದ್ರದ ಅಂಚಿನಲ್ಲಿರುವ ಊರಿನವರು ಮಾತಾಡ್ತಾರೆ. ಜೊತೆಗೆ ಈಗಲೂ ಆ ದ್ವೀಪದ ತೀರದಲ್ಲಿ ಮನುಷ್ಯರ ಮೂಳೆಗಳು ಸಿಕ್ತಾವಂತೆ! ಅಂತಹದರಲ್ಲಿ ಆ ಜಾಗವನ್ನೇ ನೋಡದ ನಾವು ಆ ಜಾಗದಲ್ಲಿ ಇಪ್ಪತ್ತು ದಿನಗಳ ಶೂಟಿಂಗ್ ಪ್ಲಾನ್ ಮಾಡಿದ್ದೇವೆ. ಆದ್ದರಿಂದ ಆದಷ್ಟು ಬೇಗ ಶೂಟಿಂಗ್ ಮುಗಿಸಿಕೊಂಡು ಅಲ್ಲಿಂದ ಬಂದರೆ ಈ ಹಡಗಿನಲ್ಲಿರುವ ಎಲ್ಲರಿಗೂ ಒಳ್ಳೆಯದು" ಎ೦ದು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಮಧುಕರ್ ಅಯ್ಯಪ್ಪನು ತನ್ನ ಭಯ ಮಿಶ್ರಿತ ದನಿಯಲ್ಲಿ ಹೇಳಿ ಮುಗಿಸುತ್ತಿದ್ದಂತೆ ಅದಕ್ಕೆ ಪ್ರತಿಯಾಗಿ ಸಣ್ಣಗೆ ನಕ್ಕ ನಿರ್ದೇಶಕ ಪ್ರಭುದೇಸಾಯಿ ಯು "ಆ ಜಾಗದ ಬಗ್ಗೆ ಗೊತ್ತಿದ್ದೇ ಅಲ್ಲಿಗೆ ಹೋಗ್ತಿರೋದು. ಊರಿನವರು ಕಟ್ಟಿಕೊಂಡಿರುವ ಕತೆಗಳನ್ನೆಲ್ಲಾ ನಂಬಿಕೊಂಡು ಕೂತ್ರೆ ನನ್ನ ಸಿನಿಮಾ ಆಗಲ್ಲ. ಈ ಸಿನಿಮಾ ನನ್ನ ಎಷ್ಟೋ ದಿನಗಳ ಕನಸು" ಎನ್ನುತ್ತಾ ತನ್ನ ಕೈಯಲ್ಲಿಡಿದಿದ್ದ ಬೈನಾಕುಲರ್ ನಿಂದ ತನ್ನೆದುರಿಗಿದ್ದ ದ್ವೀಪದತ್ತ ದೃಷ್ಟಿಹರಿಸಿದ.

ಅತ್ತ ಸುಮಾರು ವರ್ಷಗಳಿಂದ ಕೊಳೆತ ಶವಗಳನ್ನು ತನ್ನೆದುರಿಗಿರಿಸಿಕೊಂಡು, ನೂರಾರು ಗರುಡಗಳಿಗೆ ತನ್ನ ಒಡಲಿನಲ್ಲಿ ಜಾಗಕೊಟ್ಟು"ಗರುಡಗಿರಿ" ಎಂಬ ಹೆಸರು ಪಡೆದಿದ್ದ ನಿಗೂಢ ದ್ವೀಪವು, ಇದೀಗ ಹದಿನಾರು ಜನರಿರುವ ಸಿನಿಮಾ ತಂಡದ ಬರುವಿಕೆಗಾಗಿ ಆಗಿನಿಂದ ಕಾದು ಕುಳಿತಂತೆ ತೋರುತ್ತಿತ್ತು!!

View full details