Skip to product information
1 of 1

Dr. A. N. Nagraj

ರೋಗನಿವಾರಕ ಜೀವನಶೈಲಿ

ರೋಗನಿವಾರಕ ಜೀವನಶೈಲಿ

Publisher - ಅಂಕಿತ ಪುಸ್ತಕ

Regular price Rs. 150.00
Regular price Sale price Rs. 150.00
Sale Sold out
Shipping calculated at checkout.

- Free Shipping

- Cash on Delivery (COD) Available

ನಂಬಿದರೆ ನಂಬಿ, ಬಿಟ್ಟರೆ ಬಿಡಿ – ಅತಿ ತೂಕದ ಸಮಸ್ಯೆ, ಆರ್ಥರೈಟಿಸ್, ಆಸ್ತಮಾ, ಮಧುಮೇಹ, ಬೆನ್ನುನೋವು, ಅಧಿಕ ರಕ್ತದೊತ್ತಡ, ಹೃದಯ ಬೇನೆ ಇತ್ಯಾದಿ ಕಾಯಿಲೆಗಳನ್ನು ಯಾವೊಂದು ಔಷಧವಿಲ್ಲದೆ ವಾಸಿಮಾಡಿಕೊಳ್ಳಬಹುದು ಎ೦ದರೆ ನಂಬಲು ಸಾಧ್ಯವೇ? ಖಂಡಿತ ಸಾಧ್ಯ ಎನ್ನುತ್ತಾರೆ ಡಾ. ಎ. ಎನ್. ನಾಗರಾಜ್, ತಾವೇ ಈ ಪ್ರಯೋಗಗಳನ್ನು ನಡೆಸಿ ಯಶಸ್ವಿ ಫಲಿತಾಂಶ ಪಡೆದಿದ್ದಾರೆ. ಡಾ| ನಾಗರಾಜ್ ಮೂಲತ: ಜೀವವಿಜ್ಞಾನಿ, ಹಲವಾರು ವರ್ಷ ಅಮೆರಿಕೆಯಲ್ಲಿದ್ದವರು. ಅಲ್ಲಿಯ ಆಧುನಿಕ ಜೀವನಶೈಲಿಗೆ ಬೇಸತ್ತು ಮರಳಿ ಭಾರತಕ್ಕೆ ಬಂದವರು. ಕೆಲವು ವರ್ಷ ಕೃಷಿ ಚಟುವಟಿಕೆಗಳನ್ನು ನಡೆಸಿದವರು. ಪ್ರಸ್ತುತ ತೀರ್ಥಹಳ್ಳಿಯ ಬಳಿ ಭೀಮನಕಟ್ಟೆಯಲ್ಲಿ ನೆಲೆಸಿದ್ದಾರೆ.

ಸ್ವತಃ ಅವರಿಗೆ ಆಸ್ತಮಾ, ಸಂಧಿವಾತ, ಅಧಿಕ ಜಠರಾಮ್ಲ ಇತ್ಯಾದಿ ಸಮಸ್ಯೆಗಳಿದ್ದವು. ಈ ಎಲ್ಲ ಸಮಸ್ಯೆಗಳಿಗೂ ಅವರು ಆಹಾರ ಕ್ರಮ ಬದಲಾವಣೆ, ವ್ಯಾಯಾಮಗಳ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ಮಧುಮೇಹದಿಂದ ನರಳುತ್ತಿದ್ದ ಇವರಿಗೆ, ಇದೇ ವಿಧಾನದಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಇಳಿಕೆಯಾದದ್ದು ಒಂದು ಪವಾಡದಂತೆ ಕಂಡುಬಂತು.

ಆಹಾರ, ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದರ ಮೂಲಕ ಕಾಯಿಲೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದೆಂದು ಈ ಕೃತಿಯಲ್ಲಿ ಸವಿವರವಾಗಿ ದಾಖಲಿಸಿದ್ದಾರೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)