Skip to product information
1 of 2

T. N. Shreekantaiya

ಗದಾಯುದ್ಧ ಸಂಗ್ರಹಂ

ಗದಾಯುದ್ಧ ಸಂಗ್ರಹಂ

Publisher - ವಸಂತ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 226

Type - Paperback

Gift Wrap
Gift Wrap Rs. 15.00

`ಭಾರತೀಯ ಕಾವ್ಯಮೀಮಾಂಸೆ', 'ನಂಬಿಯಣ್ಣನ ರಗಳೆ', 'ಕಾವ್ಯ ಸಮೀಕ್ಷೆ' ಮೊದಲಾದ ಹಲವಾರು ಮೌಲಿಕ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ ಸೇವೆಯನ್ನು ಸಲ್ಲಿಸಿದವರು ಹೆಸರಾಂತ ವಿದ್ವಾಂಸ ತೀನಂ.ಶ್ರೀ. ಅವರು 'ರನ್ನ ಕವಿ ಗದಾಯುದ್ಧ ಸಂಗ್ರಹಂ' ಕೃತಿಯನ್ನು ಅವರು ಸಂಪಾದಿಸಿಕೊಟ್ಟು ಇದಾಗಲೆ ಅರವತ್ತು ವರ್ಷಗಳು ಸಂದಿವೆ. ಅಂದಿನಿಂದಲೂ ನಿರಂತರ ಬೇಡಿಕೆಯನ್ನು ಪಡೆದು ಹಲವಾರು ಮುದ್ರಣಗಳನ್ನು ಕಂಡಿದೆ.

ತೀ.ನಂ.ಶ್ರೀ ಯವರು ಸಂಶೋಧನೆ, ವಿಮರ್ಶೆ, ಛಂದಸ್ಸು, ಭಾಷಾಶಾಸ್ತ್ರ ಮೊದಲಾದ ಹಲವು ಕ್ಷೇತ್ರಗಳಲ್ಲಿ ತಮ್ಮ ಕೃಷಿಯನ್ನು ಮುಂದುವರಿಸಿ, ಮುಖ್ಯವಾಗಿ ಬಹುದೊಡ್ಡ ವಿದ್ವಾಂಸರೆಂದು ಹೆಸರು ಗಳಿಸಿದರೂ ಕೂಡ, ಅವರು ತಮ್ಮೊಳಗಿನ ಕವಿಯನ್ನು ಕಳೆದುಕೊಳ್ಳಲಿಲ್ಲ. ಸತ್ಯಾವ್ಯದ ಬಗೆಗಿನ ರುಚಿಯನ್ನು ಕಡಿಮೆ ಮಾಡಿಕೊಳ್ಳಲಿಲ್ಲ. ರನ್ನನ 'ಗದಾಯುದ್ಧ' ಸಂಗ್ರಹಕ್ಕೆ ಅವರು ಕೊನೆಯಲ್ಲಿ ಸಿದ್ಧಪಡಿಸಿರುವ ಟಿಪ್ಪಣಿಗಳಂತೂ, ವಿದ್ವತ್ ಪೂರ್ಣವಾದ ಸಂಶೋಧನಾತ್ಮಕ ವಿಮರ್ಶೆಯ ಹೆಜ್ಜೆಗಳೆಂಬುದನ್ನು ಯಾರಾದರೂ ಗುರುತಿಸಬಹುದು. ಅವರು ಬರೆದಿರುವ 'ಭಾರತೀಯ ಕಾವ್ಯ ಮೀಮಾಂಸೆ' ಯನ್ನು ಕವಿ ಕುವೆಂಪು ಅವರು ಅದೊಂದು ಆಚಾರ್ಯ ಕೃತಿ ಎಂದು ಪ್ರಶಂಸಿಸಿದ್ದಾರೆ.

-ಡಾ. ಜಿ.ಎಸ್. ಶಿವರುದ್ರಪ್ಪ 

View full details