ಕೊನ್‌ಸ್ತಂತಿನ್ ಸ್ತಾನಿಸ್ಲಾವ್‌ಸ್ಕಿ | ಕನ್ನಡಕ್ಕೆ: ಕೆ.ವಿ.ಸುಬ್ಬಣ್ಣ
Publisher: ಅಕ್ಷರ ಪ್ರಕಾಶನ
Regular price
Rs. 350.00
Regular price
Rs. 350.00
Sale price
Rs. 350.00
Unit price
per
Shipping calculated at checkout.
Couldn't load pickup availability
ಪ್ರಸಿದ್ಧ ನಟ, ನಿರ್ದೇಶಕ, ಗುರು ಕೊನ್‌ಸ್ತಂತಿನ್ ಸ್ತಾನಿಸ್ಲಾವ್‌ಸ್ಕಿಯ ಈ ಅಭಿನಯ ಶಾಸ್ತ್ರದ ಪುಸ್ತಕವು ಜಗದ್ವಿಖ್ಯಾತವಾದದ್ದು. ಪ್ರಾಯಶಃ ಜಗತ್ತಿನಲ್ಲೇ ಪ್ರಪ್ರಥಮವಾಗಿ ಅಭಿನಯವೆಂಬ ಅಮೂರ್ತ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ವಿವೇಚಿಸಿ, 'ಅಭಿನಯ ಶಾಸ್ತ್ರ'ಕ್ಕೆ ಗಟ್ಟಿಯಾದ ಅಸ್ತಿಭಾರ ಹಾಕಿಕೊಟ್ಟವನು ಸ್ತಾನಿಸ್ಲಾವ್‌ಸ್ಕಿ, ಆದ್ದರಿಂದಲೇ ೨೦ನೆಯ ಶತಮಾನದ ಆದಿಭಾಗದಲ್ಲಿ ಬಂದಂಥ ಈ ಪುಸ್ತಕವನ್ನು ಇವತ್ತಿಗೂ ಜಗತ್ತಿನ ಎಲ್ಲ ಭಾಗಗಳ ಅಭಿನಯಕಾರರು ಮತ್ತು ರಂಗಕರ್ಮಿಗಳು ತಮ್ಮ ಶಾಸ್ತ್ರಗ್ರಂಥವೆಂದು ಪರಿಗಣಿಸಿಕೊಂಡುಬಂದಿದ್ದಾರೆ. ಇವತ್ತಿಗೂ ಜಗತ್ತಿನ ಬಹುತೇಕ ರಂಗಶಿಕ್ಷಣಶಾಲೆಗಳು ಈ ಪುಸ್ತಕದಲ್ಲಿ ಸೂಚಿತವಾಗುವ 'ಪದ್ಧತಿ'ಯನ್ನೇ ಅಭಿನಯ ಶಿಕ್ಷಣದ ಅಡಿಗಲ್ಲಾಗಿ ಇಟ್ಟುಕೊಂಡಿವೆ.
