Skip to product information
1 of 1

A. R. Mitra

ರಾಮಾಯಣ ಮಿತ್ರ

ರಾಮಾಯಣ ಮಿತ್ರ

Publisher - ವಸಂತ ಪ್ರಕಾಶನ

Regular price Rs. 480.00
Regular price Rs. 480.00 Sale price Rs. 480.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ರಾಮಾಯಣದಲ್ಲಿ ನಗರ ಮಾನವರಿದ್ದಾರೆ, ಕಾಡು ಮನುಷ್ಯರೂ ಇದ್ದಾರೆ. ಕೇವಲ ಉದರಾಸಕ್ತಿಯ ಕಾಡು ರಾಕ್ಷಸರಿದ್ದಾರೆ, ಕಠೋರ ಸಾಧನೆ ಮಾಡಿ ಅದ್ಭುತ ಸಿದ್ಧಿ ಪಡೆದ ರಾಕ್ಷಸರಿದ್ದಾರೆ. ತಪೋವನದ ತಪಸ್ವಿಗಳಿಗೆ ಇಲ್ಲಿ ಸ್ಥಾನವಿರುವಂತೆ ನಗರದ, ಆರಮನೆಯ, ಗುರುಕುಲದ ನಾಗರಿಕ ತಪಸ್ವಿಗಳಿಗೂ ಮನ್ನಣೆಯುಂಟು, ತಪೋಸಾಧನೆಯಿಂದ ದೇವೇಂದ್ರನ ರಥವನ್ನೇ ತರಿಸಿಕೊಂಡು ಸ್ವರ್ಗಲೋಕಕ್ಕೆ ಹೋದವರಿದ್ದಾರೆ. ಅಪ್ಪರ ಸ್ತ್ರೀಯರಿದ್ದಾರೆ, ಮಾನವ, ದಾನವ, ದೈವ ಲೋಕಗಳು ಇಲ್ಲಿ ಸಹಬಾಳ್ವೆ ನಡೆಸುತ್ತವೆ. ಎಲ್ಲ ಬಗೆಯ ಜನಗಳ ಲೋಕವು ಇರುವಂತೆ ಸ್ವರ್ಗಲೋಕ, ನರಕ, ಪಾತಾಳಲೋಕಗಳೂ ಇವೆ, ಎದೆಯನ್ನು ಕೊಕ್ಕಿನಿಂದ ತಿವಿಯುವ ಕಾಗೆಗಳಿವೆ. ಸೌಮ್ಮ ಮುಖದ ಹಾಗೂ ಭೀಕರ ಸ್ವರೂಪದ ವನಪ್ರದೇಶಗಳಿವೆ. ಕುಟುಂ ಬ ಸೌಖ್ಯವನ್ನು ಕಟ್ಟಿಕೊಡುವ ಅನಸೂಯೆ ಇರುವಂತೆಯೇ ಬಾಳನ್ನು ಒಡೆಯಬಲ್ಲ ಮಂಥರೆಯಂಥವರೂ ಇದ್ದಾರೆ. ಖರ-ದೂಷಣರನ್ನು, ಅವರುಗಳ ಅಪಾರವಾದ ಸೇನೆಯನ್ನು ಏಕಾಂಗಿಯಾಗಿ ಎದುರಿಸುವ ವೀರರಿರುವಂತೆಯೇ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯ ಗುಡ್ಡಗಾಡಿನ ವಾನರರಿದ್ದಾರೆ. ಗುಹನಂಥ ಜಲಶಿಲ್ಪಿ ಇರುವಂತೆ, ವನಸ್ಪತಿಗಳನ್ನು ಬಲ್ಲ ವಾನರರೂ ಇದ್ದಾರೆ. ವಯಸ್ಸಿನಲ್ಲಿ ಎಲ್ಲರಿಗಿಂತ ಹಿರಿಯನಾದ ಜಾಂಬವಂತನು ಇಳಿವಯಸ್ಸಿನಲ್ಲೂ ಆರೋಗ್ಯವಂತನೂ ಯೋಧನೂ ಆಗಿದ್ದಾನೆ. ಲಕ್ಷ್ಮಣನಂಥ ಸಿಡುಕರಿದ್ದಾರೆ. ರಾಕ್ಷಸ ವರ್ಗದಲ್ಲೂ ಸೀತೆಯನ್ನು ಕರುಣೆಯಿಂದ ನಡೆಸಿಕೊಂಡವರಿದ್ದಾರೆ. ರೂಪವತಿಯೂ ಧೀಮಂತಳೂ ಆಗಿದ್ದರೂ ರಾವಣನ ಕಾಮ ತಾಮಸವನ್ನು ಹೊರಗಟ್ಟಲಾಗದ ಮಂಡೋದರಿ ಇದ್ದಾಳೆ. ವಾಲಿ ಸುಗ್ರೀವ ಇಬ್ಬರನ್ನೂ ತನ್ನ ಮೇಧೋಶಕ್ತಿಯಿಂದ, ರೂಪಸತ್ವದಿಂದ ಆಳಿದ ತಾರೆಯಂಥವರಿದ್ದಾರೆ, ಸನಾಶದ ಜೊತೆಗೆ ಬಂದು ನಾಶ ಕುಲನಾಶಗಳನ್ನು ಸಾಧಿಸಿದ ಶೂರ್ಪಣಖಿಯಂಥವರೂ ಇದ್ದಾರೆ.

ಹುತ್ತಕ್ಕೆ ಏಸು ಬಾಯಾದರೇನು ಸರ್ಪನಿಪ್ಪುದು ಒಂದೇ ತಾಣ ವಾಲ್ಮೀಕಿ ಹುತ್ತಕ್ಕೆ ಇರ್ಪುದು ಒಂದೇ ರಾಮಾಯಣ

ವಸಂತ ಪ್ರಕಾಶನ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)