ಇರಾವತಿ ಕರ್ವೆ | ಕನ್ನಡಕ್ಕೆ: ಚಂದ್ರಕಾಂತ ಪೋಕಳೆ
Publisher: ನವಕರ್ನಾಟಕ ಪ್ರಕಾಶನ
Couldn't load pickup availability
ಇರಾವತಿ ಕರ್ವೆಯವರ ವಿವೇಚನೆಯು ಅತ್ಯಂತ ಮಹತ್ವದ್ದೂ, ಮೌಲಿಕವೂ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಶೇಷವಾಗಿ ಭೀಷ್ಮ, ಕರ್ಣ ಮತ್ತು ಕೃಷ್ಣ ಇವರ ಜೀವನವನ್ನು ಅನಾವರಣಗೊಳಿಸಿದ ರೀತಿಯು ಆಲೋಚನಾಕ್ರಮಕ್ಕೆ ಹೊಸ ದಿಕ್ಕು ನೀಡುವಂತಹದು. ಭಾಸನ ಕಾಲದಿಂದಲೂ ಕರ್ಣ ನಾಯಕನಾಗಿದ್ದಾನೆ. ದುರದೃಷ್ಟದ ಪ್ರತಿನಿಧಿಯೆಂದು, ದುರಂತಕಥೆಯ ಧೀರೋದಾತ್ತ ನಾಯಕನೆಂದು ಕರ್ಣನನ್ನು ಭಾಸನಿಂದ ಇಂದಿನವರೆಗೆ ಹಲವು ಲಲಿತ ಲೇಖಕರು ನೋಡಿದ್ದಾರೆ. ರಾಮಾಯಣ -ಮಹಾಭಾರತದ ಕಥೆ, ಪಾತ್ರ, ಸನ್ನಿವೇಶಗಳನ್ನು ಚಿಂತನೆಗೆ ಒಳಪಡಿಸಿ ಅದರ ಬಗ್ಗೆ ವ್ಯಾಖ್ಯಾನ ಬರೆದಿದ್ದಾರೆ. ಈ ಬರವಣಿಗೆಗೆ ಸಮಾಜಶಾಸ್ತ್ರೀಯ ನೆಲೆಯಿರುವುದರಿಂದ ಮಹತ್ವದ್ದೆನಿಸಿದೆ. ಧರ್ಮದ ಬಗೆಗೆ ಬೇರೆ ನೆಲೆಯಲ್ಲಿ ಚರ್ಚಿಸಿದ ಲೇಖನವೂ ಇದೆ. ಪ್ರಶ್ನೆಗಳನ್ನು ಹುಟ್ಟುಹಾಕಿ, ಆಳವಾದ ಚಿಂತನೆಗೆ ಒಡ್ಡುವಷ್ಟು ಪೂರಕವಾಗಿದೆ.
