ರಕ್ತಸಿಕ್ತ ರತ್ನ

ರಕ್ತಸಿಕ್ತ ರತ್ನ

ಮಾರಾಟಗಾರ
ಡಾ. ಕೆ.ಎನ್. ಗಣೇಶಯ್ಯ
ಬೆಲೆ
Rs. 350.00
ಕೊಡುಗೆಯ ಬೆಲೆ
Rs. 350.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಬರ್ಮಾ ದೇಶದ ಚಾರಿತ್ರಿಕ ನಗರವಾದ ಭಾಗಾನ್ ನಲ್ಲಿನ ಸಾವಿರಾರು ಪಗೋಡಗಳ ನಡುವೆ ತನ್ನ ಕುಟುಂಬಕ್ಕೆ ಸಂಬಂಧಿಸಿದ ರಹಸ್ಯ ವಸ್ತುವನ್ನು ಹುಡುಕಲೆಂದು ಲಂಡನ್ ಪತ್ರಕರ್ತೆ ಮೇರಿ ಒಂದು ರಾತ್ರಿ ಕದ್ದು ಡ್ರೋನ್ ಹಾರಿಸಿ ಪರಿಶೀಲಿಸುತ್ತಾಳೆ. ನಂತರ, ತನ್ನ ಮೇಲೆ ನಡೆದ ಗುಂಡಿನ ದಾಳಿಯಿಂದ ಹೆದರಿ ಬರ್ಮಾ ತೊರೆದು ಭಾರತದ ಪಶ್ಚಿಮ ಕರಾವಳಿಯಲ್ಲಿನ ರತ್ನಗಿರಿಗೆ ಬಂದಾಗ ಆಕೆಯ ಮೇಲೆ ಮತ್ತೆ ಕೊಲೆ ಪ್ರಯತ್ನ ನಡೆಯುತ್ತದೆ. ಮೇರಿ ನಡೆಸುತ್ತಿದ್ದ ಹುಡುಕಾಟದ ಬಗ್ಗೆ ಆತಂಕಗೊಂಡ ಬರ್ಮಾ ದೇಶದ ಭೌದ್ಧ ಗುರು, ತನ್ನ ಸಹಾಯಕನನ್ನು ಆಕೆಯ ಬಳಿ ಅಟ್ಟುತ್ತಿದ್ದಂತೆ, ಆಕೆಗೆ ಸಹಾಯ ಮಾಡಿದ್ದ ಟೂರಿಸ್ಟ್ ಗೈಡ್ ಅನ್ನು ಭೂಗತ ಗುಂಪೊಂದು ಸಂಪರ್ಕಿಸಿ ಚರಿತ್ರೆಯ ರಹಸ್ಯವೊಂದರ ಬೆನ್ನತ್ತಿ ಹೋಗಲು ಪ್ರಚೋದಿಸುತ್ತದೆ.

ಇತ್ತ ಭಾರತದಲ್ಲಿ ಸಿಬಿಐ ಸಿಬ್ಬಂದಿ, ಚರಿತ್ರೆಯ ಪ್ರಾಧ್ಯಾಪಕಿ ಡಾ ಸುನೀತಾ ಅವರ ಜೊತೆಗೂಡಿ ಕೈಗೊಂಡ ಶೋಧದಿಂದಾಗಿ ಲಂಡನ್ನಿನ ಪತ್ರಕರ್ತೆ ನಡೆಸುತ್ತಿದ್ದ ಹುಡುಕಾಟಕ್ಕೂ, ಭಾರತದ ಸೈನ್ಯ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೂ ಸಂಬಂಧ ಇರುವ ಬಗ್ಗೆ ಅರಿವಾಗುತ್ತದೆ. ಡಾ ಸುನಿತಾ ಅವರ ಸಂಶೋಧನೆಯ ಮೂಲಕ ಘಟನೆಗಳು ಬಿಚ್ಚಿಕೊಳ್ಳುತ್ತಿದ್ದಂತೆ, ಮರೆತುಹೋಗಿದ್ದ ದಾರುಣ ಚರಿತ್ರೆಯ ತುಣುಕೊಂದು ಅನಾವರಣ ಅಗುವುದರ ಜೊತೆಗೆ ಅತ್ಯಂತ ಬೆಲೆಬಾಳುವ ರತ್ನವೊಂದರ ರಕ್ತಸಿಕ್ತ ರಹಸ್ಯ ಬಯಲಾಗುತ್ತದೆ.