Skip to product information
1 of 2

V. Shreedhara

ರಜತ ರಂಗದ ಧ್ರುವತಾರೆ

ರಜತ ರಂಗದ ಧ್ರುವತಾರೆ

Publisher -

Regular price Rs. 1,499.00
Regular price Rs. 1,499.00 Sale price Rs. 1,499.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 1114

Type - Hardcover

Gift Wrap
Gift Wrap Rs. 15.00
Gift Box
Gift Box Rs. 225.00
ಕನ್ನಡ ರಂಗ ಕಂಡ ಒಬ್ಬ ಪ್ರಬುದ್ಧ ಕಲಾವಿದೆ ಕಲ್ಪನಾ. ಕಲ್ಪನಾ ಅವರ ಬಗ್ಗೆ ಪುಸ್ತಕ ತರಬೇಕೆಂಬ ಶ್ರೀಧರ್ ರವರ ಅಪೇಕ್ಷೆಯು ಫಲಾಪೇಕ್ಷೆಯಿಂದ ನಿಸ್ವಾರ್ಥ ಕೆಲಸ. ಕಲ್ಪನಾ ಅವರು ಈಗ ಜೀವಂತವಿಲ್ಲ ಯಾರ ಒತ್ತಾಯವೂ ಇವರಿಗಿಲ್ಲ. ತಮಗೆ ತಾವೇ ತೀರ್ಮಾನಿಸಿ ಕಲ್ಪನಾ ಅವರಿಗೆ ಗ್ರಂಥ ಗೌರವವನ್ನು ಸಮರ್ಪಿಸುವ ಶ್ರೀಧರ್ ಅವರ ಸಂಕಲ್ಪ ಸಿದ್ದಿಯು ಅಪರೂಪದ ಕಲೋಪಾಸನೆಯ ಒಂದು ಅಭಿವ್ಯಕ್ತಿ.

-ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ (ಚಿಂತಕರು,ಸಾಹಿತಿಗಳು)

ಈ ಮಹತ್ವದ ಕೃತಿಯನ್ನು ಹೊರತಂದಿರುವ ಯುವ ಸಾಹಿತಿ ವಿ ಶ್ರೀಧರ್ ನನ್ನ ಮೆಚ್ಚಿನ ವಿದ್ಯಾರ್ಥಿ. ಮಿನುಗು ತಾರೆ ಕಲ್ಪನಾ ಮೇಲಿನ ಅಭಿಮಾನದಿಂದ ಆಗಿ ಅಮೂಲ್ಯವಾದ ಈ ಕೃತಿಯನ್ನು ಹೊರ ತರುತ್ತಿದ್ದಾರೆ. ಇದು ನಿಜಕ್ಕೂ ಒಂದು ಆಶ್ಚರ್ಯದ ಸಂಗತಿಯೇ ಆಗಿದೆ. ಕಲ್ಪನಾ ಬದುಕಿರುವಾಗ ಅವರ ಬಗ್ಗೆ ಏನು ತಿಳಿಯದೆ ಇದು ಕೇವಲ ೬ ವರ್ಷಗಳ ಹಿಂದೆ ಅವರ ನಿಧನಾನಂತರ ಶರಪಂಜರ ಸಿನಿಮಾ ನೋಡಿ ಅವರ ಕಲೆಯ ಬಗ್ಗೆ ಅದರ ಅಭಿಮಾನಿಗಳನ್ನು ಬೆಳೆಸಿಕೊಳ್ಳುವುದರ ಫಲವೇ ಈ ಕೃತಿಯಾಗಿ ಇಂದು ಒಡಮೂಡಿದೆ. ಇದರ ಬಗ್ಗೆ ಕುಲಂಕುಶವಾಗಿ ತಿಳಿದಾಗ ಬಹುಶಃ ಅವರಿಗೂ ಕಲ್ಪನಾ ಅರಿವು ಯಾವುದೋ ಜನ್ಮದ ಅನುಬಂಧ ಬರಬೇಕೆಂದು ಎಂಬ ವಿಸ್ಮಯ ಹುಟ್ಟದಿರದು. ಇನ್ನೊಂದು ಆಶ್ಚರ್ಯದ ಸಂಗತಿ ಎಂದರೆ ಈ ಪುಸ್ತಕದ ಕೆಲಸಕ್ಕೆ ಕೈ ಹಾಕುವ ಮುನ್ನ ಚಿತ್ರರಂಗದ ಯಾವೊಬ್ಬ ವ್ಯಕ್ತಿಯ ಪರಿಚಯ ಇವರಿಗೆ ಇರಲಿಲ್ಲವೆಂಬುದು ಸತ್ಯ. ಅವರು ಕಲ್ಪನಾ ಬಗ್ಗೆ ಎಂತಹ ಗೀಳು ಹಚ್ಚಿಕೊಂಡು ಈ ಪುಸ್ತಕ ಹೊರ ತಂದಿದ್ದಾರೆ ಎಂಬ ಸಂಗತಿಯು ಆಶ್ಚರ್ಯದಿಂದ ಓದುಗರಿಗೆ ಹುಬ್ಬೇರಿಸುವಂತೆ ಮಾಡದಿರದು. ಈ ಪುಸ್ತಕದಲ್ಲಿ ಕಲ್ಪನಾ ಕುರಿತಂತೆ ಅವರ ಬಾಲ್ಯದಿಂದ ಅಂತ್ಯದವರೆಗಿನ ಹಲವಾರು ವಿವರಗಳನ್ನು ಸಂಗ್ರಹಿಸಿ ನೀಡಿರುವುದು ಅವರ ಶ್ರದ್ಧೆ, ಆಸಕ್ತಿಗಳ ದ್ಯೋತಕವಾಗಿದೆ. ಇವೆಲ್ಲವನ್ನು ಸಂಗ್ರಹಿಸುವಾಗ ಅವರ ಹಿಂದಿರುವ ಶ್ರೀಧರ ಅವರ ಪರಿಶ್ರಮ ಅವರ ಪಟ್ಟ ಪಡಿಪಾಟಲುಗಳನ್ನು ಅವರ ನಿಕಟವರ್ತಿಗಳು ಮಾತ್ರವೇ ಬಲ್ಲವರಾಗಿದ್ದಾರೆ. ಏನೇ ಆದರೂ ಇಂತಹ ಒಂದು ಆಸೆ ಅವರ ಮನದಲ್ಲಿ ಏಕೆ ಮೂಡಿಬಂದಿತು ಎಂಬ ಸಂಗತಿ ಸ್ವತಹ ಶ್ರೀಧರ ಅವರನ್ನೇ ಕಾಡಿದುದುಂಟು. ಅದೆಲ್ಲ ಏನೇ ಇರಲಿ ಕಲಾವಿದೆ ಒಬ್ಬಳನ್ನು ಕುರಿತಂತೆ ಈ ಬಗೆಯ ಅಮೂಲಾಗ್ರ ವಿವರಗಳೊಂದಿಗೆ ಮೂಡಿಬಂದಿರುವ ಈ ಮಹಾ ಗ್ರಂಥ ಭಾರತೀಯ ಚಲನಚಿತ್ರರಂಗಕ್ಕೆ ಸಲ್ಲುತ್ತಿರುವ ಒಂದು ಅತಿಶಯವಾದ ಕೊಡುಗೆ.

-ಪ್ರೊ.ಸ. ನ. ಗಾಯತ್ರಿ (ಪ್ರಾಂಶುಪಾಲರು ಮಹಾರಾಜ ಕಾಲೇಜು ಮೈಸೂರು)
View full details